
ಶಿಬಾಜೆ: ಇಲ್ಲಿಯ ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.26 ರಿಂದ ಪ್ರಾರಂಭಗೊಂಡು ಫೆ.28ರವರೆಗೆ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಇಂದು (ಫೆ.27) ಬೆಳಿಗ್ಗೆ ಮಹಾಗಣಪತಿ ಹೋಮ, ಸ್ವಸ್ತಿ ಪುಣ್ಯಾಹ ವಾಚನ, ಬಿಂಬಶುದ್ಧಿ ಕಲಶ ಪೂಜೆ, ಚಂಡಿಕಾ ಹೋಮ , ಹೊರೆಕಾಣಿಕೆ ಸಮರ್ಪಣೆ, ಪಲ್ಲಕ್ಕಿ ಮೆರವಣಿಗೆ, ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಗೆ ಪೂರ್ಣ ಕುಂಭ ಸ್ವಾಗತ, ಬೆಳಿಗ್ಗೆ 10ಗಂಟೆಗೆ ಶ್ರೀಮತಿ ವಿನಯಾ ಮತ್ತು ವಾಮನ ತಾಮ್ಹನ್ ಕರ್ ಅರಸಿನಮಕ್ಕಿ ಹಾಗೂ ದಿವ್ಯ ಮತ್ತು ದಿವಾಕರ ಗುಡ್ಡೆತೋಟ ಇವರಿಂದ ಶ್ರೀದೇವಿಗೆ ಆಭರಣ ಸಹಿತ ಪಲ್ಲಕ್ಕಿ ಸಮರ್ಪಣೆಯು ವಿಜೃಂಭಣೆಯಿಂದ ನಡೆಯಿತು.



ಈ ಸಂದರ್ಭದಲ್ಲಿ ಅರ್ಚಕರು, ಸಮಿತಿಯವರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಚಂಡಿಕಾ ಹೋಮ ಪೂರ್ಣಾಹುತಿ , ಸುವಾಸಿನಿ ಪೂಜೆ, ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ. ರಾತ್ರಿ ಶ್ರೀ ದೇವರ ಬಲಿ ಹೊರಟು ಪಲ್ಲಕ್ಕಿ ಉತ್ಸವ, ಕಟ್ಟೆ ಪೂಜೆಗಳು, ಅಷ್ಠ ಸೇವೆ, ಅಶ್ವತ್ಥ ಕಟ್ಟೆ ಉತ್ಸವ ನಡೆಯಲಿದೆ.