26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಶ್ರೀಕೃಷ್ಣ ಭಜನಾ ಮಂಡಳಿ ಭಜನೋತ್ಸವ

ಕೊಯ್ಯೂರು: ಕೊಯ್ಯೂರು ಅದೂರು ಪೇರಾಲ್ ಶ್ರೀ ಕೃಷ್ಣ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣ ಮಹಿಳಾ ಭಜನಾ ತಂಡ ಅದೂರು ಪೇರಾಲ್ ಜಂಟಿ ಆಶ್ರಯದಲ್ಲಿ ಭಕ್ತಿಯ ಹೆಜ್ಜೆ ಭಕ್ತರ ಮನದ ಮನೆಗಳತ್ತ ಎಂಬ ನಗರ ಭಜನಾ ಮಂಗಳೋತ್ಸವ ಮತ್ತು ಸತ್ಯ ನಾರಾಯಣ ಪೂಜೆ ಮಾ.1 ರಂದು ರಾತ್ರಿ ಮಂಡಳಿ ವಠಾರದಲ್ಲಿ ನಡೆಯಿತು.

ಬೆಂಗಳೂರು ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಹಿಂದು, ಧರ್ಮ ಜಾಗೃತಿ ಮೂಡಿಸಲು ಭಜನಾ ಸಪ್ತಾಹದಂತಹ ಅನೇಕ ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸಿಕೆಯಿಂದ ಸನಾತನ ಧರ್ಮ ಉಳಿಯಲು ಸಾಧ್ಯ ಎಂದು ಹೇಳಿದರು.


ಕೃಷಿಕರಾದ ಪ್ರಚಂಡ ಭಾನು ಭಟ್ ಉಪಸ್ಥಿತರಿದ್ದರು. ಅಮಂತ್ರಿತ ಭಜನಾ ಮಂಡಳಿ ಸದಸ್ಯರಿಂದ ಏಕಕಾಲದಲ್ಲಿ ಕುಣಿತ ಭಜನೆ ನಡೆಯಿತು.


ಕುಣಿತ ಭಜನಾ ಮಂಡಳಿ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಸ್ವಾಗತಿಸಿ, ಲಿಂಗಪ್ಪಗೌಡ ಬೆರ್ಕೆ ನಿರೂಪಿಸಿ , ವಂದಿಸಿದರು. ಭಜನಾ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಯರು, ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಭಕ್ತರು ಮತ್ತಿತರರಿದ್ದರು.

Related posts

ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಘೋರ ಭಯೋತ್ಪಾದಕ ದಾಳಿ ಖಂಡನೀಯ: ಅಭಿನಂದನ್ ಹರೀಶ್ ಕುಮಾರ್

Suddi Udaya

ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ಬೇಸಿಗೆ ಶಿಬಿರ ಕಲಾಬ್ದಿ-2025 ಉದ್ಘಾಟನೆ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ‘ಕರ್ನಾಟಕ ಪರಿವರ್ತನೆಯ ರೂವಾರಿ’ ಪ್ರಶಸ್ತಿ

Suddi Udaya

ನಿವೃತ್ತ ಮುಖ್ಯೋಪಾಧ್ಯಾಯಿನಿ ಉಮಾ ಡಿ. ಗೌಡ ಹಟ್ಟತ್ತೋಡಿರವರಿಗೆ ಶಾಸಕ ಹರೀಶ್ ಪೂಂಜರಿಂದ ಸನ್ಮಾನ

Suddi Udaya

ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರಿಂದ ದಾಳಿ: ದನದ ತಲೆ ಸಹಿತ ಪರಿಕರಗಳು ವಶ; ಆರೋಪಿಗಳು ಪರಾರಿ

Suddi Udaya

ಕಲ್ಮಂಜ: ಅಕ್ಷಯ ನಗರದಲ್ಲಿ ಕಾಡಾನೆ ಓಡಾಟ

Suddi Udaya
error: Content is protected !!