26.5 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ನಾರಾವಿ: ಬೈಕ್ ಗೆ ಡಿಕ್ಕಿ ಹೊಡೆದ ಆಟೋರಿಕ್ಷಾ : ಬೈಕ್ ಸವಾರರಿಗೆ ಗಾಯ

ನಾರಾವಿ :ಇಲ್ಲಿಯ ಸತ್ಕಾರ್‌ ಹೋಟೆಲ್‌ ಬಳಿ ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರರಿಗೆ ಗಾಯಗಳಾದ ಘಟನೆ ಮಾ.2 ರಂದು ನಡೆದಿದೆ

ಘಟನೆ ವಿವರ: ಮಾ.2 ರಂದು ನಾರಾವಿ ಗ್ರಾಮದ ಸತ್ಕಾರ್‌ ಹೋಟೆಲ್‌ ಬಳಿ ಕಾರ್ಕಳ-ನಾರಾವಿ-ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ಅಟೋರಿಕ್ಷಾ ಚಾಲಕ ರವಿಚಂದ್ರ ರವರು ಅಳದಂಗಡಿ ಕಡೆಯಿಂದ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಬೈಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ರಮೇಶ್ ಮೂಲ್ಯ ರವರ ಬಲಕೈ, ಬಲಕಾಲಿಗೆ, ಬಲಬದಿ ಹಣೆಗೆ ತರಚಿದ ಗಾಯ ಹಾಗೂ ಸಹ ಸವಾರ ಮಂಜುನಾಥರವರ ಬಲಕಾಲಿಗೆ ಮುರಿತದ ಗಾಯ ಮತ್ತು ಬಲಕೈಗೆ ತರಚಿದ ಗಾಯ ಉಂಟಾಗಿ ಹೆಚ್ಚು ಗಾಯಗೊಂಡ ಸಹ ಸವಾರ ಮಂಜುನಾಥರವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬೆಳ್ತಂಗಡಿ :ಮಿನ್ಹಾಜುಲ್ ಹುದಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಮುಂಜಿ ಕಾರ್ಯಕ್ರಮ

Suddi Udaya

ಕಾಡಾನೆ ಹಾವಳಿ ಕುರಿತು ಧರ್ಮಸ್ಥಳದಲ್ಲಿ ಅರಣ್ಯಾಧಿಕಾರಿಗಳಿಗೆ ಮನವಿ

Suddi Udaya

ಶ್ರೀ ಭಗವದ್ಗೀತಾ ಅಭಿಯಾನ -2023: ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತೆ ಸ್ಪರ್ಧೆಗಳ ಉದ್ಘಾಟನೆ

Suddi Udaya

ಬೆಳ್ತಂಗಡಿ ಜೆ.ಎಫ್.ಡಿ ಶಂಕರ್ ರಾವ್ ರವರಿಗೆ ಪ್ರೇರಣಾ ಪುರಸ್ಕಾರ-2025

Suddi Udaya

ಕಲ್ಲೇರಿಯಲ್ಲಿ ಸೀರೆ ಗೊಂಡೆ ಹಾಕುವ ಕೌಶಲ್ಯ ಅಭಿವೃದ್ಧಿ ಉಚಿತ ಸ್ವ ಉದ್ಯೋಗ ತರಬೇತಿಯ ಸಮಾರೋಪ

Suddi Udaya

ನಾವೂರು ಸರಕಾರಿ ಪ್ರೌಢ ಶಾಲೆಯ ಗಣಿತ ಶಿಕ್ಷಕಿ ಪುಷ್ಪರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

Suddi Udaya
error: Content is protected !!