March 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್. ಡಿ. ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ರಸ್ತೆ ಸಂಚಾರ ಸುರಕ್ಷತಾ ಜಾಗೃತಿ’ ಕಾರ್ಯಕ್ರಮ

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಂಚಾರ ಸುರಕ್ಷತಾ ಜಾಗೃತಿ’ ಕಾರ್ಯಕ್ರಮವು ಮಾ. 5ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸಂಚಾರಿ ಠಾಣಾ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಕೆ. ಎಚ್. ಅವರು ಸಂಪನ್ಮೂಲ ವ್ಯಕ್ತಿಯಾಗಿ, ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡುವುದರೊಂದಿಗೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಅಶೋಕ್ ಕುಮಾರ್ ವಹಿಸಿದರು.

ಕಾರ್ಯಕ್ರಮ ಸಂಯೋಜಕರಾದ ಎಲೆಕ್ಟ್ರಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಸಿವಿಲ್ ವಿಭಾಗದ ಸಹಪ್ರಾಧ್ಯಾಪಕ ರಾಮ್ ಪ್ರಸಾದ್ ವಂದಿಸಿದರು. ವಿದ್ಯಾರ್ಥಿನಿ ಸುಚಿತ್ರಾ ಕಾರ್ಯಕ್ರಮ ನಿರ್ವಹಿಸಿದರು. ಸಿವಿಲ್ ವಿಭಾಗದ ಸಹಪ್ರಾಧ್ಯಾಪಕ ಡಾ. ವಿನಯ ಶ್ಯಾಮ್ ಕಾರ್ಯಕ್ರಮದ ರೂಪುರೇಷೆಯಲ್ಲಿ ಸಹಕರಿಸಿದರು.

Related posts

ನ್ಯಾಯತರ್ಪು ಮತ್ತು ಕಳಿಯ ಗ್ರಾಮದಲ್ಲಿ ಬಿಜೆಪಿ ಬಿರುಸಿನ ಚುನಾವಣಾ ಪ್ರಚಾರ

Suddi Udaya

ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಪುತ್ತೂರು ಧರ್ಮಾಧ್ಯಕ್ಷ ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರಿಂದ ಪೂಜಾರ್ಪಣೆ

Suddi Udaya

ಬಳಂಜ ಗ್ರಾ.ಪಂ. ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ಹಿರಿಯರಿಗೆ ಗೌರವಾರ್ಪಣೆ ಕಾರ್ಯಕ್ರಮ‌

Suddi Udaya

ಮೇಲಂತಬೆಟ್ಟು ಗ್ರಾ.ಪಂ. ವತಿಯಿಂದ ಅರ್ಹ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ

Suddi Udaya

ಕೊಕ್ಕಡದ ಕಿಟ್ಟ ಮಲೆಕುಡಿಯರವರಿಗೆ ಕರ್ನಾಟಕ ಜಾನಪದ ಪರಿಷತ್‌ ಪ್ರಶಸ್ತಿ ಪ್ರದಾನ

Suddi Udaya

ಓಡಿಲ್ನಾಳ ಸ.ಉ.ಪ್ರಾ. ಶಾಲಾ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

Suddi Udaya
error: Content is protected !!