September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಕೀಲರ ಸಂಘದಿಂದ ನ್ಯಾಯಾಲಯದ ಕಟ್ಟಡ ಮಂಜೂರುಗೊಳಿಸುವಂತೆ ಬೆಂಗಳೂರಿನಲ್ಲಿ ಸಚಿವರುಗಳ ಭೇಟಿ

ಬೆಳ್ತಂಗಡಿ : ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದ ಅಪರ ಸರ್ಕಾರಿ ವಕೀಲರ ಕಛೇರಿ ಉದ್ಘಾಟನೆ ಮತ್ತು ವಕೀಲರ ಸಂಘದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾ ರವರು ಬೆಳ್ತಂಗಡಿಯ 60 ವರ್ಷ ಹಳೆಯದಾದ ನ್ಯಾಯಾಲಯದ ಕಟ್ಟಡವನ್ನು ವೀಕ್ಷಿಸಿ ಸರ್ಕಾರದ ಮಟ್ಟದಲ್ಲಿ ಹೊಸ ನ್ಯಾಯಾಲಯದ ಕಟ್ಟಡ ಮಂಜೂರಾತಿಗೆ ಬಜೆಟ್ ನಲ್ಲಿ ಅನುದಾನ ನೀಡಲು ಒತ್ತಡ ತರುವ ಬಗ್ಗೆ ವಕೀಲರ ನಿಯೋಗವನ್ನು ಸಂಬಂಧಪಟ್ಟ ಸಚಿವರ ಬಳಿ ಕರೆದೊಯ್ಯುವ ಭರವಸೆ ನೀಡಿದ್ದರು.

ಅದರಂತೆ ಮಾರ್ಚ್ 06 ರಂದು ಬೆಂಗಳೂರಿನ ಬಜೆಟ್ ಅಧಿವೇಶನದ ಸಂದರ್ಭ ವಿಧಾನ ಪರಿಷತ್ ಶಾಸಕರಾದ ಐವನ್ ಡಿ ಸೋಜಾ ರವರ ನೇತೃತ್ವದಲ್ಲಿ ಕಾನೂನು ಸಚಿವರಾದ ಎಚ್. ಕೆ ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಯವರುಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್, ಬೀ ಕೆ, ಹಿರಿಯ ವಕೀಲರ ಸಮಿತಿ ಚೇರ್ಮನ್ ಅಲೋಶಿಯಸ್ ಎಸ್ ಲೋಬೋ, ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್, ಎ ಮತ್ತು ಮಾಜಿ ಅಧ್ಯ್ಷರಾದ ಶಿವ ಕುಮಾರ್ ಎಸ್.ಎಂ ಜೊತೆಗಿದ್ದರು.

Related posts

ಬಜಿರೆ : ಹೊಸಪಟ್ಣ ನಿವಾಸಿ ಶ್ರೀಧರ ಪೂಜಾರಿ ನಿಧನ

Suddi Udaya

ನಿಡ್ಲೆ: ಕುದ್ರಾಯದ ಕಿಂಡಿ ಅಣೆಕಟ್ಟಿನ ಮೇಲಿನ ಭಾಗದ ಮರಗಳ ತೆರವು

Suddi Udaya

ಡಿ.21: ಸೋಮಂತ್ತಡ್ಕದಲ್ಲಿ ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್- ಫರ್ನಿಚರ್ಸ್ ಉದ್ಘಾಟನೆ, ಅದೃಷ್ಟ ಯೋಜನೆ ಪ್ರಾರಂಭ

Suddi Udaya

ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನೆ

Suddi Udaya

ಸಾಧನೆಯ ಶಿಖರದಲ್ಲಿ ಗುರುವಾಯನಕೆರೆ ಎಕ್ಸೆಲ್ ಕಾಲೇಜು : ಶಿಕ್ಷಣ ಕ್ಷೇತ್ರದಲ್ಲೇ ಹೊಸ ಭಾಷ್ಯ , ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಸಂಸ್ಥೆ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರರ 79ನೇ ಹುಟ್ಟು ಹಬ್ಬದ ಆಚರಣೆ, ಬೃಹತ್ ರಕ್ತದಾನ ಶಿಬಿರ ಹಾಗೂ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವಲ್ಲಿ ಸಹಕರಿಸಿದ ದಾನಿಗಳಿಗೆ ಅಭಿನಂದನೆ

Suddi Udaya
error: Content is protected !!