25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಪ್ರಾ.ಕೃ.ಪ.ಸ. ಸಂಘದ ವತಿಯಿಂದ ನಿವೃತ್ತ ಚಂದ್ರಕಾಂತ ಪ್ರಭುರವರಿಗೆ ಅಭಿನಂದನೆ ಕಾರ್ಯಕ್ರಮ

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಪ್ರಭು ಸೇವಾ ನಿವೃತ್ತಿ ಹೊಂದಿದ್ದು ಅವರನ್ನು ಸಂಘದ ವತಿಯಿಂದ ಮಾ.8ರಂದು ಮುಂಡಾಜೆ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಭಾಭವನದಲ್ಲಿ ಅಭಿನಂದಿಸಲಾಯಿತು.


ಸಂಘದ ಅಧ್ಯಕ್ಷ ಪ್ರಕಾಶ್ ನಾರಾಯಣ ರಾವ್ ರವರು ಅಧ್ಯಕ್ಷತೆ ವಹಿಸಿ , ಸದಾ ಹಸನ್ಮುಖಿಯಾದಂತಹ ಸಿಇಓ ಅವರು ಗ್ರಾಮದ ಪ್ರತಿ ಸದಸ್ಯರಲ್ಲಿಯೂ ಆತ್ಮೀಯವಾಗಿದ್ದು, 42 ವರ್ಷಗಳ ಕಾಲ ಸಂಘದಲ್ಲಿ ದುಡಿದು, ಸಂಘದ ಏಳಿಗೆಗೆ ಪ್ರಾಮಾಣಿಕ ಕೆಲಸ ನಿರ್ವಹಿಸಿ ಸಂಘದ ಏಳಿಗೆಗೆ ಇವರ ಸೇವೆ ಅಪಾರ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ನ ಸಂಚಾಲಕರು ನಾಮದೇವ ರಾವ್, ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ನೆರಿಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗೋಪಾಲ್ ಕೃಷ್ಣ , ನಿವೃತ್ತ ಸಿ ಇ ಓ ಆದ ನಾರಾಯಣ ಫಡಕೆ, ಊರಿನ ಹಿರಿಯ ಸದಸ್ಯರಾದ ಅಡೂರು ವೆಂಕಟರಾಯ ರಾವ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಾಘವ್ ಗೌಡ ಕುಡುಮಡ್ಕ, ನಿರ್ದೇಶಕರಾದ ವೆಂಕಟೇಶ್ವರ ಭಟ್ ಕಜೆ, ಚನ್ನಕೇಶವ ಅರಸ ಮಜಲು ,ಅಶ್ವಿನಿ ಹೆಬ್ಬಾರ್ ಮೋಹಿನಿ ,ಸುಮ ಗೋಖಲೆ, ಶಶಿಧರ್ ಕಲ್ಮಂಜ, ರಾಘವ ಕಲ್ಮಂಜ ,ಶಿವಪ್ರಸಾದ್, ಅಜಯ್ ಕಲ್ಲಿಕಟ್ ಉಪಸ್ಥಿತರಿದ್ದರು. ಊರಿನ ಕೃಷಿ ಸದಸ್ಯ ಮಿತ್ರರು, ಸಂಘದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಕಕ್ಕಿಂಜೆ ಶಾಖಾ ಪ್ರಬಂಧಕಿ ಪುಷ್ಪಾವತಿ ಸ್ವಾಗತಿಸಿ, ನೆರಿಯ ಶಾಖಾ ಪ್ರಬಂಧಕ ಸದಾನಂದ ಡಿ ವಂದಿಸಿದರು. ಕಾರ್ಯಕ್ರಮವನ್ನು ನೂತನ ಸಿಇಒ ಪ್ರಸನ್ನ ಪರಾಂಜಪೆ ನಿರೂಪಿಸಿದರು.

Related posts

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜಾತಿ ವಿಚಾರವನ್ನು ಕೆದಕಿ ಅಪಮಾನಿಸಿರುವುದನ್ನು ಖಂಡಿಸಿ,ರಾಹುಲ್ ಗಾಂಧಿ ಕ್ಷಮೆ ಯಾಚಿಸುವಂತೆ ಆಗ್ರಹಿಸಿ, ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಬೆಳ್ತಂಗಡಿ ತಹಸೀಲ್ದಾರ್ ಗೆ ಮನವಿ

Suddi Udaya

ತುಳು ಸಿನಿ ರಸಿಕರಿಗೆ ಮನೋರಂಜನೆ ನೀಡಲು ಸಜ್ಜಾಗಿದೆ “ದಸ್ಕತ್” ನ.18 ರಂದು ಭಾರತ್ ಸಿನೆಮಾಸ್ ಮಂಗಳೂರಿನಲ್ಲಿ ಟ್ರೈಲರ್ ಲಾಂಚ್

Suddi Udaya

ಆಮಂತ್ರಣ ವೇದಿಕೆ ಜಿಲ್ಲಾ ಅಧ್ಯಕ್ಷರಾಗಿ ವಿಂಧ್ಯಾ ಎಸ್.ರೈ ಮತ್ತು ಉಪಾಧ್ಯಕ್ಷರಾಗಿ ಅನಿತಾ ಶೆಟ್ಟಿ ಆಯ್ಕೆ

Suddi Udaya

ಚಾರ್ಮಾಡಿ ಕತ್ತರಿಗುಡ್ಡೆ ರಸ್ತೆ ಕಾಂಕ್ರಿಟೀಕರಣಗೊಳಿಸಿ ಅಭಿವೃದ್ಧಿಗೊಳಿಸಲು ಆಗ್ರಹಿಸಿ ಎಸ್ ಡಿ ಪಿ ಐ ಮನವಿ

Suddi Udaya

ನಾಳ: ಶಿವ ದುರ್ಗಾ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಶುಭಾರಂಭ

Suddi Udaya

ವಿಜಯರತ್ನ ಪ್ರಶಸ್ತಿ ಪುರಸ್ಕೃತ ಎಕ್ಸೆಲ್ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಕೃಷಿಕ ಯುವಕ ಮಂಡಲದಿಂದ ಅಭಿನಂದನೆ

Suddi Udaya
error: Content is protected !!