September 6, 2026
Uncategorized

ಸಾರ್ವಜನಿಕ ಪ್ರದೇಶದಲ್ಲಿ ಬೇಕಾಬಿಟ್ಟಿ ಕಸ ಎಸೆದವರಿಂದಲೇ ವಿಲೇವಾರಿ ಮಾಡಿ, ದಂಡ ವಿಧಿಸಿದ: ಲಾಯಿಲ ಗ್ರಾ‌ಪಂ ಪಿಡಿಓ ಶ್ರೀನಿವಾಸ್ ಡಿ ಪಿ ಹಾಗೂ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿಯವರಿಗೆ ಸಾರ್ವಜನಿಕರಿಂದ ಪ್ರಶಂಸೆ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ರಬೈಲು ಎಂಬಲ್ಲಿ ಕಸ ತ್ಯಾಜ್ಯಗಳನ್ನು ಎಸೆದವರಿಂದಲೇ ಕಸವನ್ನು ವಿಲೇವಾರಿ ಮಾಡಿಸಿ ರೂ. 3 ಸಾವಿರ ದಂಡ ವಿಧಿಸಿದ ಘಟನೆ ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.

ಮಾ‌.15 ರಂದು ಪೂರ್ವಾಹ್ನ ಸುಮಾರು 11.30 ಕ್ಕೆ ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ಕಸ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಎಸೆದು ಹೋದ ಬಗ್ಗೆ ಬೆಳಕಿಗೆ ಬಂದಿದ್ದು,ಕಸದ ಚೀಲವನ್ನು ಪರಿಶೀಲಿಸಿದ ಸ್ಥಳೀಯರಾದ ಗಣೇಶ್ ಪ್ರಸಾದ್ ರವರು ಹೆಚ್ಚಿನ ಮುತುವರ್ಜಿ ವಹಿಸಿ ಕೆಲವೊಂದು ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಪಂಚಾಯತ್ ಲೆಕ್ಕಸಹಾಯಕರಾದ ಸುಪ್ರೀತಾ ಶೆಟ್ಟಿಯವರ ಬಳಿ ವಿಷಯ ತಿಳಿಸಿದ ಕೂಡಲೇ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಸದ ಚೀಲವನ್ನು ಪರಿಶೀಲಿಸಿ ಸಂಬಂಧ ಪಟ್ಟ ವ್ಯಕ್ತಿಗಳನ್ನು ಸ್ಥಳಕ್ಕೆ ಕರೆಸಿ ತ್ಯಾಜ್ಯ ವಿಲೇವಾರಿ ಮಾಡಿಸಿದ್ದಲ್ಲದೇ ದಂಡನ ಶುಲ್ಕವನ್ನು ವಿಧಿಸಿದರು.

ಹೆಚ್ಚಿನ ಪರಿಶೀಲನೆ ನಡೆಸಿ ಇನ್ನೂ 3 ತ್ಯಾಜ್ಯಗಳ ಚೀಲಗಳು ರಸ್ತೆ ಬದಿ ಎಸೆದಿರುವುದು ಕಂಡುಬಂದಿದ್ದು, ಚೀಲಗಳನ್ನು ತೆರೆದಾಗ ಸಂಬಂಧ ಪಟ್ಟ ದಾಖಲೆಗಳು ದೊರೆತಿದ್ದು ಕೂಡಲೇ ಸಂಬಂಧಪಟ್ಟವರಿಗೆ ದೂರವಾಣಿ ಮೂಲಕ ಕರೆಸಿ ದಂಡನೆ ವಸೂಲಿ ಮಾಡಿಸಿದರು.

ಕಸ ವಿಲೇವಾರಿ ಮಾಡಿಸಿದ ಪಂಚಾಯತ್ ಪಿಡಿಓ ಶ್ರೀನಿವಾಸ್ ಡಿ.ಪಿ ಹಾಗೂ ಲೆಕ್ಕ ಸಹಾಯಕರಾದ ಸುಪ್ರಿತಾ ಶೆಟ್ಟಿಯವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಅರವಿಂದ ಸ್ಥಳೀಯರಾದ ಗಣೇಶ್ ಪ್ರಸಾದ್ ಮತ್ತು ಮನೆಯವರು ಶ್ರದ್ದೆಶ್ ಹಾಗೂ ಸಾರ್ವಜನಿಕರು ಹೆಚ್ಚಿನ ಹಾಜರಿದ್ದರು.

Related posts

ಯಕ್ಷ ಸಂಭ್ರಮ- 2024 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವೇಣೂರು- ಶ್ರೀ ಶಾರದಾ ಸೇವಾ ಟ್ರಸ್ಟ್ ,ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು,ಲಯನ್ಸ್ ಕ್ಲಬ್ (ರಿ)ವೇಣೂರು,ಹಾಗು ಪದ್ಮಾಂಬ ಕ್ಯಾಟರ್ಸ್ ಅಳದಂಗಡಿ ಇವರ ಸಹಭಾಗಿತ್ವದಲ್ಲಿ ದೀಪಾವಳಿ* ಪ್ರಯುಕ್ತ ದೋಸೆ ಹಬ್ಬ,ಗೂಡುದೀಪ ಹಾಗು ರಂಗೋಲಿ ಸ್ಪರ್ಧೆ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ದೇಶ್ಕ ಪ್ರಕೃತಿ ಪರೀಕ್ಷಣಾ ಅಭಿಯಾನ್” ಕಾರ್ಯಕ್ರಮ

Suddi Udaya

ಸುಬ್ರಹ್ಮಣ್ಯದಲ್ಲಿದ್ದ ನಿರ್ಗತಿಕ ಬೆಂಗಳೂರಿನ ಜನ ಸ್ನೇಹಿ ಕೇಂದ್ರಕ್ಕೆ

Suddi Udaya

ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಅಂತರಾಧ್ಯಯನ ವೃತ್ತಮ್ ವತಿಯಿಂದ ಗುರುಪೂರ್ಣಿಮಾ ಕಾರ್ಯಕ್ರಮ

Suddi Udaya

ಫೆ.26 ಬಳಂಜದಲ್ಲಿ ಗುರುಪೂಜೆ, ನೂತನ ಅಡುಗೆ ಕೊಠಡಿ ಉದ್ಘಾಟನೆ- ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!