ಬೆಳ್ತಂಗಡಿ: ಸೇವಾಭಾರತಿ ಬೆಳ್ತಂಗಡಿ ತಾಲೂಕು ಇದರ 20ನೇ ವರ್ಷದ ಸಂಭ್ರಮ ಹಾಗೂ ರಕ್ತದಾನ ಶಿಬಿರ, ಸಾಧನ ಸಲಕರಣೆಗಳ ವಿತರಣೆ, ಸಾಧಕರಿಗೆ ಗೌರವ ಸಮರ್ಪಣೆ ಮತ್ತು ನೂತನ ಟ್ರಸ್ಟಿಗಳ ಸೇರ್ಪಡೆ ಕಾರ್ಯಕ್ರಮವು ಸೇವಾಧಾಮ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೌತಡ್ಕ ಕೊಕ್ಕಡದಲ್ಲಿ ಮಾ. 16ರಂದು ಜರುಗಿತು.
ಕಾರ್ಯಕ್ರಮವನ್ನು ಉಡುಪಿ ರಾ. ಸ್ವ. ಸಂಘ ಇದರ ಜೇಷ್ಠ ಪ್ರಚಾರಕರಾದ ದಾ.ಮ. ರವೀಂದ್ರ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಸೇವಾಭಾರತಿ ಕನ್ಯಾಡಿ ಇದರ ಅಧ್ಯಕ್ಷರಾದ ಶ್ರೀಮತಿ ಸ್ವರ್ಣಗೌರಿ ವಹಿಸಿದ್ದರು.
ಗೌರವ ಅತಿಥಿಗಳಾಗಿ ಸಮಾಜ ಸೇವಕರಾದ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಬಿ. ಜೈನ್, ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ ಅಧ್ಯಕ್ಷರು ಹಾಗೂ ಭಾರತ ವಿಕಾಸ ಪರಿಷತ್ ಭಾರ್ಗವ ಶಾಖೆ ಉಡುಪಿ ಇದರ ಸಂಯೋಜಕರಾದ ವಸಂತ ಭಟ್, ಕನ್ಯಾಡಿಯ ಕೃಷಿಕರಾದ ಅರುಣ ಜೆ.ಎನ್ ರೆಬೆಲ್ಲೊ, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕೊಕ್ಕಡ ಇದರ ಅಧ್ಯಕ್ಷರಾದ ಕೆ. ಕೃಷ್ಣ ಭಟ್ ಆಗಮಿಸಿದ್ದರು.

ವೇದಿಕೆಯಲ್ಲಿ ಸೇವಾಧಾಮದ ಸಂಸ್ಥಾಪಕರು ಹಾಗೂ ಸೇವಾಭಾರತಿಯ ಖಜಾಂಜಿ ಕೆ. ವಿನಾಯಕ ರಾವ್, ಸೇವಾಧಾಮದ ಸಂಚಾಲಕರಾದ ಕೆ. ಪುರಂದರ ರಾವ್, ಸೇವಾ ಭಾರತಿಯ ಟ್ರಸ್ಟಿ ಬಿ. ಕೃಷ್ಣಪ್ಪ ಗುಡಿಗಾರ್, ವಿಷ್ಣುಪ್ರಸಾದ್ ತೆಂಕಿಲ್ಲಾಯ, ನೂತನ ಟ್ರಸ್ಟಿಗಳಾದ ಪೃಥ್ವಿಶ್ ಧರ್ಮಸ್ಥಳ, ಜಯರಾಜ ಸಾಲಿಯನ್ ಕಾನರ್ಪ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧನ ಸಲಕರಣೆಗಳ ವಿತರಣೆ, ನೂತನ ಟ್ರಸ್ಟಿಗಳನ್ನು ಸೇರ್ಪಡೆಗೊಳಿಸುವಿಕೆ, ಟ್ರಸ್ಟಿ ಬಿ. ಕೃಷ್ಣಪ್ಪ ಗುಡಿಗಾರ್ ರವರಿಗೆ ಬೀಳ್ಕೊಡುಗೆ , ವರ್ಷದ ವರದಿ ಬಿಡುಗಡೆ ಜರುಗಿತು.

ಪ್ರಾಪ್ತಿ ಶೆಟ್ಟಿ ಧರ್ಮಸ್ಥಳ ಪ್ರಾರ್ಥಿಸಿದರು. ಪೃಥ್ವಿಶ್ ಧರ್ಮಸ್ಥಳ ಸ್ವಾಗತಿಸಿದರು. ಕೆ ವಿನಾಯಕ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷೆ ಸ್ವರ್ಣಗೌರಿ ವಂದಿಸಿದರು.