September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಜಿರೆಯ ಮುಹಮ್ಮದ್ ನಿಶ್ವಾನ್ ರವರಿಗೆ ಎನ್ ಎಸ್ ಎಸ್ ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಮಂಗಳೂರು ಏನಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಇದರ ಅಂತಿಮ ವರ್ಷದ ಎಂಬಿಎ ಮತ್ತು ಸಿಎಂಎ ವಿದ್ಯಾರ್ಥಿ ಮುಹಮ್ಮದ್ ನಿಶ್ವಾನ್ ಅವರು 2022- 23ನೇ ಸಾಲಿನ ಎನ್ ಎಸ್ ಎಸ್ ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು ಮಾ. 17ರಂದು ರಾಜ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಅವರು ಉಜಿರೆ ಗಾಂಧಿ ನಗರದ ನಿವಾಸಿಯಾಗಿದ್ದು ಉಸ್ಮಾನ್ ಹಾಗೂ ನಫೀಸಾ ಶೀಬಾ ದಂಪತಿಯ ಪುತ್ರ. ಬಹುಮುಖ ಪ್ರತಿಭೆಗಾಗಿ ಗುರುತಿಸಿಕೊಂಡಿದ್ದಾರೆ. ಕಾಲೇಜಿನ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಆಗಿಯೂ ಇವರು ಗೌರವಕ್ಕೆ ಪಾತ್ರರಾಗಿದ್ದಾರೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾ ಸಭಾಪತಿ ಯುಟಿ ಖಾದರ್, ವಕ್ಫ್ ಮತ್ತು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಮತ್ತು ವಿ.ಪ.ಮಾಜಿ ಸದಸ್ಯ ಕೆ ಹರೀಶ್ ಕುಮಾರ್, ಮಹಮ್ಮದ್ ನಿಶ್ವಾನ್ ಅಭಿನಂದಿಸಿ ಶುಭ ಹಾರೈಸಿದರು.

Related posts

ಉಜಿರೆ ಶ್ರೀ ಧ.ಮಂ.ಅ. ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಕೆ. ಸೇವಾ ನಿವೃತ್ತಿ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ಜೂನಿಯರ್ ಜೆಸಿ ವಿಭಾಗಕ್ಕೆ ಯುವ ಪುರಸ್ಕಾರ ಪ್ರಶಸ್ತಿ

Suddi Udaya

ಅಂಡಿಂಜೆ: ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ 27 ನೇ ವರ್ಷದ ವಿಶ್ವಕರ್ಮ ಪೂಜೆ

Suddi Udaya

ರಾಜ್ಯಕ್ಕೆ ಹಿರಿಮೆ ತಂದ ಎಕ್ಸೆಲ್ ಗುರುವಾಯನಕೆರೆಯ ನೀಟ್ ಫಲಿತಾಂಶ

Suddi Udaya

ಹಚ್ಚಾಡಿ ಶಾಲೆಯಲ್ಲಿ ರೂ. 1.75 ಲಕ್ಷದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

Suddi Udaya

ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ಮತ್ತು ಅಧಿಕಾರಿಗಳಿಗೆ ಬೆದರಿಕೆ ವಿರುದ್ಧ ಬೆಳ್ತಂಗಡಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ

Suddi Udaya
error: Content is protected !!