23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಬೆಳ್ತಂಗಡಿಯ ಸದಸ್ಯರಿಗೆ ಜೆಸಿಐ ಅ್ಯಕ್ಷನ್ ಫ್ರೇಮ್ ವರ್ಕ್ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ ತಾಲೂಕಿನಲ್ಲಿ ಜೆಸಿಐ ಬೆಳ್ತಂಗಡಿ ವತಿಯಿಂದ ಅಗತ್ಯ ಇರುವಲ್ಲಿಗೆ ಶಾಶ್ವತ ಯೋಜನೆ ಮಾಡುವ ಉದ್ದೇಶದಿಂದ
ಫೆಬ್ರವರಿ 17 ರಂದು ಜೇಸಿ ಸದಸ್ಯರಿಗೆ ಜೆಸಿಐ ಅ್ಯಕ್ಷನ್ ಫ್ರೇಮ್ ವರ್ಕ್ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದ್ದು ಜೇಸಿ ರಾಷ್ಟ್ರೀಯ ತರಬೇತುದಾರ ಮಂಗಳೂರಿನ ಜೇಸಿ ದೀಪಕ್ ರಾಜ್ ಇವರು ತರಬೇತಿಯನ್ನು ನಡೆಸಿಕೊಟ್ಟರು.

ತಾಲೂಕಿನಲ್ಲಿ ಯಾವ ಸಮಸ್ಯೆ ಇದೆ ಅದಕ್ಕೆ ಜೆಸಿಐ ಬೆಳ್ತಂಗಡಿ ಇಂದ ಯಾವ ಪರಿಹಾರ ಮಾಡಬಹುದು ಮತ್ತು ಯಾವ ಶಾಶ್ವತ ಯೋಜನೆಯಿಂದ ಸಾರ್ವಜನಿಕರಿಗೆ ಉಪಯೋಗ ಆಗಬಹುದು, ಪರಿಣಾಮಕಾರಿಯಾಗಬಲ್ಲುದು ಎಂಬುದರ ಬಗ್ಗೆ ಸವಿಸ್ತಾರವಾಗಿ ತರಬೇತಿಯನ್ನು ನಡೆಸಿಕೊಟ್ಟರು. ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಇವರು ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜೇಸಿ ಅರುಣಾ ಜಯರಾಜ್ ಕಾರ್ಯಕ್ರಮವನ್ನು ಸಂಯೊಜಿಸಿದರು. ಜೇಸಿ ರಜತ್ ಮೋರ್ತಾಜೆ ತರಬೇತುದಾರರನ್ನು ಪರಿಚಯಿಸಿದರು. ಕಾರ್ಯದರ್ಶಿ ಶೈಲೇಶ್ ಕೆ ಇವರು ವಂದಿಸಿದರು.


ತರಬೇತಿ ಕಾರ್ಯಕ್ರಮದಲ್ಲಿ ಮಹಿಳಾ ಜೇಸಿ ಸಂಯೋಜಕಿ ಚಿತ್ರಪ್ರಭ , ಜೂನಿಯರ್ ಜೇಸಿ ಅಧ್ಯಕ್ಷೆ ದೀಪ್ತಿ ಕುಲಾಲ್, ನಿಕಟ ಪೂರ್ವಾಧ್ಯಕ್ಷರಾದ ರಂಜಿತ್ ಎಚ್‌ಡಿ ಮತ್ತು ಪೂರ್ವಾಧ್ಯಕ್ಷರು, ಜೇಸಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Related posts

ಖಿಲ್ರ್ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಆಂ.ಮಾ. ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಆಚರಣೆ

Suddi Udaya

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ಜಮಾಬಂದಿ: ವಿವಿಧ ಯೋಜನೆಗಳಲ್ಲಿ ಶೇ 98.07 – 15ನೇ ಹಣಕಾಸು ಯೋಜನೆಯಲ್ಲಿ ಶೇ 67.14 ಪ್ರಗತಿ

Suddi Udaya

‘ಗುರುಪೂರ್ಣಿಮೆ’ಯ ಮಹತ್ವ ಹಾಗೂ ಇತಿಹಾಸ

Suddi Udaya

ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯಲ್ಲಿ ತೋಡುಗಳ ಹೂಳೆತ್ತುವ ಕಾರ್ಯ

Suddi Udaya
error: Content is protected !!