22.2 C
ಪುತ್ತೂರು, ಬೆಳ್ತಂಗಡಿ
September 27, 2026
Uncategorized

ನಾರಾವಿ ಲೈನ್ ಮ್ಯಾನ್ ಕಿಟ್ಟ ಯಾನೆ ಸುಧಾಕರ ಅಂಡಿಂಜೆಯ ಟಿಸಿ ಹತ್ತಿರ ಆಕಸ್ಮಿಕ ಸಾವು

ಬೆಳ್ತಂಗಡಿ: ನಾರಾವಿಯಲ್ಲಿ ಲೈನ್ ಮ್ಯಾನ್ ಆಗಿ ಕಳೆದ 27 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕಿಟ್ಟ ಯಾನೆ ಸುಧಾಕರ (45ವರ್ಷ) ರವರು ಇಂದು (ಮಾ.26ರಂದು) ಸಂಜೆ ಆಕಸ್ಮಿಕವಾಗಿ ಅಂಡಿಂಜೆಯಲ್ಲಿ ಸಾವನ್ನಪ್ಪಿದ್ದಾರೆ.

ಸುಧಾಕರ (ಕಿಟ್ಟ) ರವರು ನಾರಾವಿ ತುಂಬೆ ಗುಡ್ಡೆ ಸುರಾಜ ಕೃಪಾ ನಿವಾಸಿಯಾಗಿದ್ದು,ಇಂದು ಸಂಜೆಯ ಸಮಯಕ್ಕೆ ಇವರ ಮೃತದೇಹ ಟಿಸಿ ಹತ್ತಿರ ಅಂಡಿಂಜೆಯಲ್ಲಿ ಪತ್ತೆಯಾಗಿದ್ದು ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ.

ಇವರು ಬೆಳ್ತಂಗಡಿ ಉಪ ವಿಭಾಗ, ಅಂಡಿಂಜೆ ಕ್ಯಾಂಪ್, ವೇಣೂರು ಶಾಖೆಗಳಲ್ಲಿ ಲೈನ್ ಮ್ಯಾನ್ ವೃತ್ತಿಯನ್ನು ಉತ್ತಮವಾಗಿ ನಿರ್ವಹಿಸುತ್ತ, ಊರಿನಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.

ಅವಿವಾಹಿತರಾಗಿದ್ದ ಅವರು ತಾಯಿ, ಓರ್ವ ಸಹೋದರಿ, ಓರ್ವ ಸಹೋದರನನ್ನು .ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಕೊಲ್ಲಿಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ: ಸ್ವಚ್ಛತೆ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ: ಭವಾನಿ ಶಂಕರ್

Suddi Udaya

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೈದ್ಯರ ದಿನಾಚರಣೆ

Suddi Udaya

ಬೆಳ್ತಂಗಡಿ ಮಾತೃಶ್ರೀ ಟೆಕ್ಸ್ ಟೈಲ್ಸ್ ನಲ್ಲಿ ಆಷಾಡ (ಆಟಿ) ಮೆಗಾ ಡಿಸ್ಕೌಂಟ್ ಸೇಲ್: ಹೊಚ್ಚ ಹೊಸ ಸಂಗ್ರಹದೊಂದಿಗೆ 10% ರಿಂದ 50% ಪ್ರತಿ ಖರೀದಿಯ ಮೇಲೆ ಡಿಸ್ಕೌಂಟ್

Suddi Udaya

ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಹಿಂದಿ ದಿವಸ ಆಚರಣೆ

Suddi Udaya

ತೆಂಕಕಾರಂದೂರು ಆಲಡ್ಕ ಬಿಕ್ಕಿರ ನಿವಾಸಿ ದೇವದಾಸ ನಿಧನ

Suddi Udaya

ಉಜಿರೆ ಅನು ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಶುಭಾರಂಭ – ಭಗವಂತನ ಅನುಗ್ರಹದಿಂದ ಸಂಸ್ಥೆಯು ಪ್ರಗತಿ ಪಥದಲ್ಲಿ ಸಾಗಲಿ: ಶರತ್ ಕೃಷ್ಣ ಪಡ್ವೆಟ್ನಾಯ

Suddi Udaya
error: Content is protected !!