31 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹಿರಿಯ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿರುವ ಲಿಸ್ಸಿ ಪಿ.ಕೆ. ರವರಿಗೆ ಅರಸಿನಮಕ್ಕಿ ನವಶಕ್ತಿ ಆಟೋ ಚಾಲಕರು ಮತ್ತು ಮಾಲಕರ ಸಂಘದಿಂದ ಸನ್ಮಾನ

ಅರಸಿನಮಕ್ಕಿ : ಅರಸಿನಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 12 ವರ್ಷಗಳಿಂದ ಹಿರಿಯ ಶುಶ್ರೂಷಕಿಯಾಗಿ ರೋಗಿಗಳಿಗೆ ಪ್ರೀತಿ, ಕಾಳಜಿ ಹಾಗೂ ಮಮತೆಯಿಂದ ಸೇವೆ ಸಲ್ಲಿಸಿ, ಸೆ.30ರಂದು ನಿವೃತ್ತಿ ಹೊಂದಲಿರುವ ಲಿಸ್ಸಿ ಪಿ.ಕೆ. ಅವರನ್ನು ನವಶಕ್ತಿ ಆಟೋ ಚಾಲಕರ ಮತ್ತು ಮಾಲಕರ ಸಂಘ, ಅರಸಿನಮಕ್ಕಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಶ್ರೀಮತಿ ಲಿಸ್ಸಿ ಪಿ. ಕೆ. ಅವರಿಗೆ ಗೌರವ ಫಲಕ, ಹೂಗುಚ್ಛ ನೀಡಿ ಸನ್ಮಾನಿಸಲಾಯಿತು. ಕಳೆದ 12 ವರ್ಷಗಳಿಂದ ಅರಸಿನಮಕ್ಕಿ, ಹತ್ಯಡ್ಕ, ರೆಖ್ಯ, ಶಿಬಾಜೆ ಮತ್ತು ಶಿಶಿಲ ಗ್ರಾಮಗಳ ಬಡ ರೋಗಿಗಳಿಗೆ ತಾಯಿಯ ಮಮತೆಯಿಂದ ಸೇವೆ ಸಲ್ಲಿಸಿದ ಲಿಸ್ಸಿ ಅವರು, ಗ್ರಾಮಸ್ಥರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ಧೈರ್ಯ ತುಂಬುವ ಮಾತುಗಳು ಮತ್ತು ಆತ್ಮೀಯ ಉಪಚಾರವು ರೋಗಿಗಳಿಗೆ ದೊಡ್ಡ ಭರವಸೆಯಾಗಿತ್ತು ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಸ್ಮರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾ‌ರ್, ಕಾರ್ಯದರ್ಶಿ ರವಿಗೌಡ, ಸದಸ್ಯರಾದ ಅಶೋಕ ಕುಲಾಲ್‌, ಉಪೇಂದ್ರ, ಅಶೋಕ ಗೌಡ, ರೋಶಾಂತ್ ಕುಲಾಲ್, ಪರಮೇಶ್ವರ ಪೂಜಾರಿ, ದಯಾನಂದ ಗೌಡ, ನವೀನ್ ರೈ, ಯು.ಸಿ. ಕುಲಾಲ್ ಹಾಗೂ ಹತ್ಯಡ್ಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಕಾಶ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅವರ ಮುಂದಿನ ನಿವೃತ್ತಿ ಜೀವನವು ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಲಾಯಿತು.

Related posts

ಬೆಳ್ತಂಗಡಿಯಲ್ಲಿ ಜನೌಷಧಿ ಕೇಂದ್ರ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆ

Suddi Udaya

ಜ.25 , 26 : ಬೆಳ್ತಂಗಡಿ ಟೀಂ ಅಭಯಹಸ್ತ ಆಶ್ರಯದಲ್ಲಿ ಅಷ್ಟಮ ವರ್ಷದ ಅದ್ಧೂರಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕಿನ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಚುನಾವಣಾ ಪರಿವೀಕ್ಷಕರು

Suddi Udaya

ತೆಕ್ಕಾರು: ಸಿಡಿಲಿನ ಬಡಿತಕ್ಕೆ ಮನೆ ಸಂಪೂರ್ಣ ಹಾನಿ

Suddi Udaya

ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಜೇಸಿ ಸಪ್ತಾಹ

Suddi Udaya

ಅಳದಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಒಕ್ಕೂಟದ ಸಭೆ

Suddi Udaya
error: Content is protected !!