ಬೆಳ್ತಂಗಡಿ: ಶ್ರೀ ಕ್ಚೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ಶುಭಾರ್ಶೀವಾದಗಳೊಂದಿಗೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ನೂತನ ಶಾಖೆ ವಾಮದಪದವಿನ ಕಲಸಡ್ಕ ಕಾಂಪ್ಲೆಕ್ಸ್ ನಲ್ಲಿ ಮಾ.30 ರಂದು ಶುಭಾರಂಭಗೊಂಡಿತು.

ಉಜಿರೆ ಲಕ್ಷ್ಮೀ ಇಂಡಸ್ಟೀಸ್ ಕನಸಿನ ಮನೆ ವಾಮದಪದವು ಶಾಖೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟಿಸಿ ಮೋಹನ್ ಕುಮಾರ್ ಅವರು ಪ್ರತಿಭೆಯುಳ್ಳ ವ್ಯಕ್ತಿ. ಉದ್ಯಮದೊಂದಿಗೆ ಸಮಾಜಮುಖಿಯಾಗಿ ತೊಡಗಿಸಿಕೊಂಡಿರುವ ಮೋಹನ್ ಕುಮಾರ್ ಅವರ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳಗಲಿ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಕಳೆದ ಹಲವು ದಶಕಗಳಿಂದ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆಯು ಸಮಾಜದಲ್ಲಿ ಬೆಳೆಯುತ್ತ ಬಂದಿದ್ದು ನೂರಾರು ಮಂದಿಗೆ ಉದ್ಯೋಗವಕಾಶ ಕಲ್ಪಿಸಿ ಎಲ್ಲರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳೆದಿದೆ ಎಂದರು.
ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿ
ಕನಸಿನ ಮನೆ ಲಕ್ಷ್ಮೀ ಇಂಡಸ್ಟ್ರೀಸ್ ನೆರೆಯ ಬಂಟ್ವಾಳ ತಾಲೂಕಿನ ವಾಮದಪದವಿಲ್ಲಿ ಶಾಖೆ ತೆರೆದಿದ್ದು ಇಲ್ಲಿನ ಜನರು ಮೋಹನ್ ಕುಮಾರ್ ರವರಿಗೆ ಆಶೀರ್ವಾದ ಮಾಡಬೇಕು ಎಂದರು.

ಬರೋಡ ಪ್ರಸಿದ್ದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿ ಗ್ರಾಹಕರ ಕನಸಿನ ಮನೆಗೆ ಸೌಂದರ್ಯಧ ಸ್ಪರ್ಶ ನೀಡಲು ಮೋಹನ್ ಕುಮಾರ್ ಅವರ ಲಕ್ಷ್ಮೀ ಇಂಡಸ್ಟ್ರೀಸ್ ಸಂಸ್ಥೆ ಸಜ್ಜಾಗಿದೆ ಎಂದರು.
ವೇದಿಕೆಯಲ್ಲಿ ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಜಿ.ಕೆ.ಭಟ್,ಗುತ್ತಿಗೆದಾರ ಅಮ್ಮು ರೈ ಹರ್ಕಾಡಿ ಹಾಗೂ ಚೆನೈತೊಡಿ ಗ್ರಾ.ಪಂ. ಅಧ್ಯಕ್ಷೆ ವನಿತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ.ಮೋಹನ್ ಕುಮಾರ್ ಹಾಗೂ ರೇಶ್ಮಾ ಮೋಹನ್ ಕುಮಾರ್,ತಾಯಿ ಲೀಲಾವತಿ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.