ಬಂದಾರು: ಬಟ್ಲಡ್ಕ ಜಮಾಅತ್ ನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಎ. 17ರಿಂದ 20 ವರೆಗೆ ನಡೆಯಲಿದೆ.
ಎ. 20 ರಂದು ದೇಶ ವಿದೇಶಗಳಲ್ಲಿ ಜನಪ್ರಿಯ ಮತಪ್ರವಚನ ಗೈಯುತ್ತಿರುವ ಪ್ರಖ್ಯಾತ ಪ್ರಭಾಷಣಗಾರ ಮುಳ್ಳೂರು ಕೆರೆ ಮುಹಮ್ಮದ್ ಅಲಿ ಸಖಾಫಿ ಭಾಗವಹಿಸಲಿದ್ದಾರೆ.
ಅಂದಿನ ದುವಾ ಬಟ್ಲಡ್ಕ ಜುಮಾ ಮಸೀದಿ ಗೌರವಾಧ್ಯಕ್ಷ ಶೈಖುನಾ ಅಬ್ದುಲ್ ರಹಿಮಾನ್ ಸಾದಾತ್ ತಂಙಲ್ ಹಾಗೂ
ಅಧ್ಯಕ್ಷತೆ ಜನಾಬ್ ಮುಹಮ್ಮದ್ ಬಂದಾರು ವಹಿಸಲಿದ್ದಾರೆ.
ಉದ್ಘಾಟನೆಯನ್ನು ಬಹು ಮುಹಮ್ಮದ್ ಆರಿಫ್ ಮದನಿ ಸ್ಥಳೀಯ ಖತೀಬ್ ನೆರವೇರಿಸಲಿದ್ದಾರೆ.
ಸ್ವಾಗತ ಅಬ್ಬಾಸ್ ಬಟ್ಲಡ್ಕ , ಪ್ರಧಾನ ಕಾರ್ಯದರ್ಶಿ ಜುಮಾ ಮಸೀದಿ ಬಟ್ಲಡ್ಕ ವಹಿಸಲಿದ್ದಾರೆ, ಪ್ರಾಸ್ತಾವಿಕವಾಗಿ ಅಬೂಸ್ವಾಲಿಹ್ ಸಖಾಫಿ ಜನರಲ್ ಮೇನೇಜರ್ ಮರ್ಕಸ್ ಗಾರ್ಡನ್ ಪೂನೂರು ಕೇರಳ ಇವರು ಮಾತಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ .