ಅಳದಂಗಡಿ: ದೇರಂದ್ರೊಡಿ ರಮೇಶ್ ಮತ್ತು ಲಲಿತಾ ದಂಪತಿಗಳ ದ್ವಿತೀಯ ಪುತ್ರ ಕಿಶೋರ್ ಕಾವ್ಯ ದಂಪತಿಗಳ ವಿವಾಹ ಭೋಜನಾ ಕೂಟಕ್ಕೆ ಉಡುಪಿ ಜಿಲ್ಲಾಧಿಕಾರಿಗಳಾದ ಡಾ.ಕೆ ವಿದ್ಯಾ ಕುಮಾರಿ ಆಗಮಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಣ್ ಕುಮಾರ್ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಅವಿನಾಶ್ ಸ್ವಾಗತಿಸಿ ವಂದಿಸಿದರು.