ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸತತ ಮೂರನೇ ಬಾರಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಕಲಾವಿಭಾಗದಲ್ಲಿ ಪಿ. ಯುಕ್ತಶ್ರೀ ೫೯೩ ಅಂಕಗಳೊAದಿಗೆ ರಾಜ್ಯಕ್ಕೆ ೫ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ವಾಣಿಜ್ಯ ವಿಭಾಗದ ಚೈತನ್ಯ ಎನ್. ೫೯೪ ಅಂಕಗಳೊAದಿಗೆ ರಾಜ್ಯಕ್ಕೆ ೬ನೇ ರ‍್ಯಾಂಕ್ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶ್ರೀರಕ್ಷಾ ೫೯೩ ಅಂಕಗಳೊAದಿಗೆ ರಾಜ್ಯಕ್ಕೆ ೭ನೇ ರ‍್ಯಾಂಕ್ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಕಲಾ ವಿಭಾಗದಲ್ಲಿ ತೃಪ್ತಿ ಎ.ಕೆ ೫೯೦ ಅಂಕಗಳೊAದಿಗೆ ರಾಜ್ಯಕ್ಕೆ ೮ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಕೀರ್ತಿವರ್ಧನ್ ಎಂ ೫೯೧ ಅಂಕಗಳೊAದಿಗೆ ರಾಜ್ಯಕ್ಕೆ ೯ನೇ ರ‍್ಯಾಂಕ್, ಅನುದೀಪ್ ಪಿ ೫೯೦ ಅಂಕಗಳೊAದಿಗೆ ರಾಜ್ಯಕ್ಕೆ ೧೦ನೇ ರ‍್ಯಾಂಕ್, ಅನಘಾ ಡಿ.ಶೆಟ್ಟಿ ೫೯೦ ಅಂಕವನ್ನು ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅನುಶ್ರೀ ೫೯೧ ಅಂಕಗಳೊಂದಿಗೆ ರಾಜ್ಯಕ್ಕೆ ೯ನೇ ರ‍್ಯಾಂಕ್, ದೀಕ್ಷಾ ಜೋಗಿ ೫೯೦ ಅಂಕಗಳೊAದಿಗೆ ರಾಜ್ಯಕ್ಕೆ ೧೦ನೇ ರ‍್ಯಾಂಕ್ ಗಳಿಸಿರುತ್ತಾರೆ. ಕಾಲೇಜಿನ ಒಟ್ಟು ೮೧೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೩೪೮ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ ೩೯೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ತಾಲೂಕಿನಲ್ಲೇ ಅತ್ಯಧಿಕ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ೧೮೩ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ100 ಅಂಕಗಳು ಪಡೆದುಕೊಂಡಿದ್ದಾರೆ.
ಪುತ್ತೂರಿನಲ್ಲಿ ರಾಜ್ಯಮಟ್ಟದಲ್ಲಿ ಅತ್ಯಧಿಕ ರ‍್ಯಾಂಕ್ ಗಳಿಸಿದ ಏಕೈಕ ವಿದ್ಯಾಸಂಸ್ಥೆ ಎನ್ನುವ ಹೆಗ್ಗಳಿಕೆಗೆ ವಿವೇಕಾನಂದ ಪದವಿಪೂರ್ವ ಕಾಲೇಜು ಪಾತ್ರವಾಗಿದ್ದು ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,