September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಲ್ಮಂಜ: ನಿಡಿಗಲ್ ಅಕ್ಷಯನಗರ ಗೆಳೆಯರ ಬಳಗದಿಂದ 26ನೇ ವರ್ಷದ ಆಟೋಟ ಸ್ಪರ್ಧೆ

ಕಲ್ಮಂಜ: ಗೆಳೆಯರ ಬಳಗ ಅಕ್ಷಯನಗರ ನಿಡಿಗಲ್ ಕಲ್ಮಂಜದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ದಿ. ಮಹಾವೀರ ಜೈನ್ ಹುಣಿಪ್ಪಾಜೆ ಇವರ ಸ್ಮರಣಾರ್ಥ 26ನೇ ವರ್ಷದ ಆಟೋಟ ಸ್ಪರ್ಧೆಗಳ ಕಾರ್ಯಕ್ರಮ ಇತ್ತೀಚೆಗೆ ಅಕ್ಷಯನಗರದಲ್ಲಿ ಜರುಗಿತು.

ಬೆಳಿಗ್ಗೆ ರತನ್ ಕುಮಾರ್ ಜೈನ್ ಹುಣಿಪ್ಪಾಜೆ, ಆಡಳಿತ ಮೊಕ್ತೆಸರರು ಶಾಂತಿನಾಥ ಸ್ವಾಮಿ ಜೈನ ಬಸದಿ ನಿಡಿಗಲ್ ಇವರ ಗೌರವಾಧ್ಯಕ್ಷತೆಯಲ್ಲಿ ಊರಿನ ಹಿರಿಯರು ಕೃಷಿಕರಾದ ಶಾಂತಪ್ಪ ಗೌಡ ಗುಮ್ಮಡಬೈಲು ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಸಭಾಧ್ಯಕ್ಷತೆಯನ್ನು ಪ್ರವೀಣ್ ಲಿಂಗಾಯತ ಬಿರ್ಮೆರೆಪಲ್ಕೆ ಕ್ರೀಡಾಧ್ಯಕ್ಷರು ವಹಿಸಿದ್ದರು. ಅತಿಥಿಗಳಾಗಿ ಶ್ರೀಮತಿ ವಿಮಲಾ ಗೌಡ ಅಧ್ಯಕ್ಷರು ಗ್ರಾಮ ಪಂಚಾಯತ್ ಕಲ್ಮಂಜ, ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ, ಸಿವಿಲ್ ಇಂಜಿನಿಯರ್ ಪಿ. ಬಿ. ಜಿ. ಕನ್ಸ್ಟ್ರಕ್ಷನ್ ಉಜಿರೆ ಮತ್ತು ಉಪನ್ಯಾಸಕ ಪ್ರವೀಣ್ ಗೌಡ ಬಿ. , ಸಂಗಮಶ್ರೀ ಯುವಕ ಮಂಡಲ ಸಿದ್ದಬೈಲು – ಕಲ್ಮಂಜ, ಅಧ್ಯಕ್ಷ ಜಗನ್ನಾಥ ಶೆಟ್ಟಿ,, ಶ್ರೀಮತಿ ಜಯಂತಿ ವಿಶ್ವನಾಥ ಪೂಜಾರಿ ಸ್ಥಳೀಯ ಸಂಪನ್ಮೂಲ ವ್ಯಕ್ತಿ, ಅಕ್ಷಯನಗರ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಸಭಾಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ಸುಬ್ರಾಯ ಅಕ್ಷಯನಗರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಿರಣ್ ಚಂದ್ರ ಡಿ ಪುಷ್ಪಗಿರಿ, ಧಾರ್ಮಿಕ ಮುಖಂಡರು ಉರುವಾಲು, ರೋಶನ್ ಡಿಸೋಜಾ ಸಹಶಿಕ್ಷಕರು ಸ. ಪ್ರೌ ಶಾಲೆ ಬಂಗಾಡಿ, ಅಶ್ವತ್ ಶೆಟ್ಟಿ ಮೆನೇಜರ್ ಶೀತಲ್ ಗಾರ್ಡನ್ ಉಜಿರೆ, ರವಿ ಮುಂಡತ್ತೋಡಿ ಅಧ್ಯಕ್ಷರು ಗೆಳೆಯರ ಬಳಗ ಮುಂಡತ್ತೋಡಿ ಉಜಿರೆ, ಧನೇಶ್, ಧನ್ವಿ ಆಂಬುಲೆನ್ಸ್ ಉಜಿರೆ, ಚೆನ್ನಕೇಶವ ಅರಸುಮಜಲು, ಸಿವಿಲ್ ಗುತ್ತಿಗೆದಾರರು ಸೋಮಂತಡ್ಕ, ಅಶೋಕ್ ಕರ್ಕೇರ, ಸಿವಿಲ್ ಕಂಟ್ರಾಕ್ಟರ್, ಮುಂಡತ್ತೋಡಿ, ಕೇಶವ ಪೂಜಾರಿ, ಅಧ್ಯಕ್ಷರು ಆಟೋ ಚಾಲಕರ ಸಂಘ ಉಜಿರೆ, ಪ್ರವೀಣ್ ಪೆರ್ನಾಂಡೀಸ್ ಹಳ್ಳಿಮನೆ ಉಜಿರೆ, ಹಮೀದ್ ಬಿ. ಎನ್. ನಿಡಿಗಲ್ ಮುಂತಾದ ಅತಿಥಿ ಅಭ್ಯಾಗತರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ 2024-2025ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಂತರ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಊರಿನ ಪರವೂರಿನ ಕ್ರೀಡಾಪಟುಗಳ, ಕ್ರೀಡಾ ಪೋಷಕರ, ಬಳಗದ ಸರ್ವ ಸದಸ್ಯರು ಸಹಕರಿಸಿದರು.


ರವಿ ಟಿ ಕಂದೂರುರವರ ಪ್ರಾರ್ಥಿಸಿ, ಅಶೋಕ್ ಪೂಜಾರಿ ಬಳ್ಳಿದಡ್ಡ ಸ್ವಾಗತಿಸಿ, ಚಿದಾನಂದ ಶೈವ ಅಕ್ಷಯನಗರ ಧನ್ಯವಾದವಿತ್ತರು. ಶ್ರೀಮತಿ ಯಶೋಧ ಪಿ ಹಾಗೂ ಬಾಲಕೃಷ್ಣ ಲಿಂಗಾಯತ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ: ಶ್ರೀ ವನದುರ್ಗಾ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವ ಮತ್ತು ಪರಿವಾರ ದೇವತೆಗಳ ವಾರ್ಷಿಕ ಆರಾಧನೆ, ನೂರಾರು ಭಕ್ತರು ಭಾಗಿ

Suddi Udaya

ನಾವರ: ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಹಾನಿ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ವರ್ಷಾವಧಿ ಜಾತ್ರಾ ಮಹೋತ್ಸವ: ಹಸಿರು ಹೊರೆಕಾಣಿಕೆ, ಧ್ವಜಾರೋಹಣ

Suddi Udaya

ಬೆಳ್ತಂಗಡಿ: ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ರೂ.3ಕೋಟಿ ಅನುದಾನ

Suddi Udaya

ಇಂದಬೆಟ್ಟು ವಲಯದ ಗುರಿಪಳ್ಳ ಕಾರ್ಯಕ್ಷೇತ್ರದಲ್ಲಿ ‘ಬೆಳಕು’ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

Suddi Udaya

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಲಯನ್ಸ್ ಕ್ಲಬ್ ನ ಸುವರ್ಣ ಸೇವಾ ಸಂಭ್ರಮ

Suddi Udaya
error: Content is protected !!