ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ ಎಸ್. ಸಿ ಮೋರ್ಚಾ ಬೆಳ್ತಂಗಡಿ ಇದರ ವತಿಯಿಂದ ಇಂದು(ಎ.14) ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ :ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಎಸ್. ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ದೀಪ ಬೆಳಗಿಸಿ ಮಾತನಾಡಿ ಅಂಬೇಡ್ಕರ್ ಕೇವಲ ಎಸ್. ಸಿ ಸಮುದಾಯಕ್ಕೆ ಮಾತ್ರ ನಾಯಕರಲ್ಲ ಇಡೀ ವಿಶ್ವವೆ ಮೆಚ್ಚುವಂತಹ ನಾಯಕ. ಇವರನ್ನು ಪ್ರತಿ ಮನೆಯಲ್ಲಿ ಪ್ರತಿ ಮನಸಲ್ಲೂ ಪೂಜಾ ಭಾವನೆಯಿಂದ ನೋಡುವಂತೆ ನಮ್ಮ ಮಕ್ಕಳಿಗೆ ಇವರ ಬಗ್ಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಎಸ್ ಸಿ ಮೋರ್ಚಾ ಬೆಳ್ತಂಗಡಿ ಮಂಡಲ ಅಧ್ಯಕ್ಷ ಈಶ್ವರ ಬೈರ ಪುಪ್ಪಾರ್ಚನೆಗೈದು ಮಾತನಾಡಿ ನಾವು ಸಮಾಜಮುಖಿಯಾಗಿ ಬೆಳೆಯುವುದರ ಜೊತೆ ಉತ್ತಮ ಶಿಕ್ಷಣದ ಜೊತೆ ನಮ್ಮವರನ್ನು ಸಮಾಜಕ್ಕೆ ಮಾದರಿ ಪ್ರಜೆಗಳಾಗಿ ಬೆಳೆಸುವುದೇ ಅಂಬೇಡ್ಕರಿಗೆ ಕೊಡುವ ದೊಡ್ಡ ಗೌರವ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್. ಸಿ ಮೋರ್ಚಾ ಉಪಾಧ್ಯಕ್ಷ ರಾಘವ ಕಲ್ಮಂಜ, ಬೆಳ್ತಂಗಡಿ ಎಸ್. ಸಿ ಮೋರ್ಚಾ ಉಪಾಧ್ಯಕ್ಷ ಕೊರಗಪ್ಪ ಅಳದಂಗಡಿ ಹಾಗೂ ಮೋರ್ಚಾದ ಪದಾಧಿಕಾರಿಗಳು ಭಾಗವಹಿಸಿದರು.
ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಜಿ. ಯಸ್. ಕಾರ್ಯಕ್ರಮ ನಿರೂಪಿಸಿ, ಪ್ರೇಮಚಂದ್ರ. ಕೆ ಧನ್ಯವಾದ ಸಮರ್ಪಿಸಿದರು.