24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ಪ್ರಾಯೋಜಕತ್ವದಲ್ಲಿ ಸಿಬಿಕೆ ಕಪ್-2025 ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಇದರ ಪ್ರಾಯೋಜಕತ್ವದಲ್ಲಿ ಸಿಬಿಕೆ ಕಪ್-2025 ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಹಾಗೂ ರಾಷ್ಟ್ರಮಟ್ಟದ ಮುಕ್ತ ಹಗ್ಗ ಜಗ್ಗಾಟ ಪಂದ್ಯಾಟವು ಸ.ಹಿ.ಪ್ರಾ. ಶಾಲಾ ಮೈದಾನ ಕಾಯರ್ತಡ್ಕದಲ್ಲಿ ಎ.20ರಂದು ನಡೆಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎ.ಜೆ ಉದ್ಘಾಟಿಸಿ ಶುಭಹಾರೈಸಿದರು. ಕಳೆಂಜ ಕ್ರಿಶ್ಚಿಯನ್ ಬ್ರದರ್‍ಸ್ ಅಧ್ಯಕ್ಷ ಜೋಸೆಫ್ ಕೆ.ಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಳೆಂಜ ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ ಹೆಚ್, ಕಳೆಂಜ ಸ.ಹಿ.ಪ್ರಾ ಶಾಲೆ ಮುಖ್ಯೋಪಾಧ್ಯಾಯರು ಕೃಷ್ಣಪ್ಪ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಂ.ಡಿ. ಜನಾರ್ದನ್, ಕಳೆಂಜ ಕ್ರಿಶ್ಚಿಯನ್ ಬ್ರದರ್ ಉಪಾಧ್ಯಕ್ಷ ಶಾಜಿ ತೋಮಸ್, ಕಳೆಂಜ ಕ್ರಿಶ್ಚಿಯನ್ ಬ್ರದರ್ ಕಾರ್ಯದರ್ಶಿ ತೋಮಸ್ ಪಿ.ಡಿ, ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ಕೋಶಾಧಿಕಾರಿ ಮಾಥ್ಯು ಕೆ.ಕೆ. ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ಸೆಭಾಸ್ಟಿನ್ ಪಿ.ಟಿ ಸ್ವಾಗತಿಸಿದರು. ಸಿಜೋ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.

Related posts

ಮಾ14-15 ಎಸ್.ಡಿ.ಎಂ ಝೇಂಕಾರ ಉತ್ಸವ: ಖ್ಯಾತ ನಟ ರಮೇಶ್ ಅರವಿಂದ್ ವಿಶೇಷ ಆಕರ್ಷಣೆ

Suddi Udaya

ಬೆಳ್ತಂಗಡಿ : ಬುರುಡೆ ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅಂತ್ಯ ಹಿನ್ನಲೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Suddi Udaya

ಉಜಿರೆ ಹಳೆಪೇಟೆ ನವೀಕೃತ ಶಾಲೆ ಹಸ್ತಾಂತರ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ನಲ್ಲಿ ಇಂಟರ್ ಪಾಲಿಟೆಕ್ನಿಕ್ ಟೆಕ್ನಿಕಲ್ ಸ್ಪರ್ಧೆ

Suddi Udaya

ಕೊಕ್ಕಡ ಜೇಸಿಐ ಕಪಿಲಾ ಘಟಕದಿಂದ ಸೆಬಾಸ್ಟಿಯನ್ ಪಿ.ಟಿ ರವರಿಗೆ “ಕಪಿಲಾಶ್ರೀ 2025” ಪ್ರಶಸ್ತಿ

Suddi Udaya

ಬೆಳ್ತಂಗಡಿ ಪಾರಸ್ ಪೃಥ್ವಿ ಜುವೆಲ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ” ಪೃಥ್ವಿ ಮಹಾಪರ್ವ”

Suddi Udaya
error: Content is protected !!