April 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವೇಣೂರು ಜಿನಪ್ರಸಾದ ಕಾಂಪ್ಲೆಕ್ಸ್‌ನಲ್ಲಿ ಟಿ.ಸಿ.ಎಲ್ ಲಾಂಡ್ರಿ ಸರ್ವಿಸ್ ಉದ್ಘಾಟನೆ

ವೇಣೂರು: ಆರಂಬೋಡಿಯಲ್ಲಿರುವ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಟೋಟಲ್ ಕ್ಲೀನ್ ಲ್ಯಾಂಡ್ರಿ ಸರ್ವಿಸ್( ಟಿ.ಸಿ.ಎಲ್ ಲಾಂಡ್ರಿ ಸರ್ವಿಸ್) ಬೃಹತ್ ಘಟಕದ ಶಾಖೆ ವೇಣೂರು ಮುಖ್ಯ ರಸ್ತೆಯ ಜಿನಪ್ರಸಾದ ಕಾಂಪ್ಲೆಕ್ಸ್‌ನ ಮಹಡಿಯಲ್ಲಿ ಮೇ 20ರಂದು ಶುಭಾರಂಭಗೊಂಡಿತು.

ವೇಣೂರಿನ ನಮನ ಕ್ಲಿನಿಕ್‌ನ ಜನಪ್ರಿಯ ವೈದ್ಯರಾದ ಡಾ. ಶಾಂತಿಪ್ರಸಾದ್‌ರವರು ಶಾಖೆಯನ್ನು ಉದ್ಘಾಟಿಸಿ, ಈ ಸೇವೆ ನಮ್ಮ ಊರಿಗೆ ಕಲ್ಪಿಸಿದ ಮಾಲಕರನ್ನು ಅಭಿನಂದಿಸಿ ಶುಭಹಾರೈಸಿದರು.
ವಕ್ಕಾಡಿಗೋಳಿ ಜುಮ್ಮಾ ಮಸೀದಿಯ ಖತೀಬರಾದ ಮುಹಮ್ಮದ್ ನಿಯಾಝ್ ಫೈಝಿಯವರು ಪ್ರಾರ್ಥನೆ ನೆರವೇರಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಸಾದ್ ಜೈನ್, ರಿಯಾಂತ್, ವಿ.ಕೆ ಮೊಹಮ್ಮದ್ ಅಲ್ತಾಫ್, ಖಾಲಿದ್ ಕಲ್ಲಡ್ಕ, ಹೆಚ್.ಎ ರಹೀಮಾನ್ ವಕ್ಕಾಡಿಗೋಳಿ, ಸದಾಶಿವ ಭಂಡಾರಿ, ಹರೀಶ್ ಕುಮಾರ್ ಪೊಕ್ಕಿ, ಹರೀಶ್ ನಾಯಕ್, ದಯಾನಂದ ಹೆಗ್ಡೆ, ಆದಂ ನಡ್ತಿಕಲ್, ಪ್ರಶಾಂತ್ ನಾಯಕ್, ಅಂಡಿಂಜೆ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಶಿವಶಂಕರ್ ಭಟ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಘಟಕದ ಮಾಲಕರಾದ ಎಸ್. ಮೊಹಮ್ಮ್‌ರವರು ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿ, ಎಲ್ಲರ ಸಹಕಾರ ಕೋರಿದರು. ಪತ್ರಕರ್ತ ಹೆಚ್. ಮಹಮ್ಮದ್ ವೇಣೂರು ಕಾರ್ಯಕ್ರಮ ನಿರೂಪಿಸಿದರು. ಅಕ್ಬರ್ ವೇಣೂರು ವಂದಿಸಿದರು.

Related posts

ಅ.15-22: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Suddi Udaya

ಗೇರುಕಟ್ಟೆ ಸೌಹಾರ್ದ ಟ್ರೋಫಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

Suddi Udaya

ಉಜಿರೆ: ಕುಂಜರ್ಪದಲ್ಲಿ 4ನೇ ವರ್ಷದ ದುರ್ಗಾಪೂಜೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya

ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನ ಅಧ್ಯಕ್ಷರಾಗಿ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ ಆಯ್ಕೆ

Suddi Udaya

ನಡ ಪ್ರೌಢಶಾಲೆಯಲ್ಲಿ ತಾಲೂಕು ಶಿಕ್ಷಕರ ಸಮಾಲೋಚನ ಸಮಾರಂಭ

Suddi Udaya
error: Content is protected !!