September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಧರ್ಮಪ್ರಾಂತ್ಯದಿಂದ ಪೋಪ್ ಫ್ರಾನ್ಸಿಸ್ ರ ನಿಧನಕ್ಕೆ ತೀವ್ರ ಸಂತಾಪ, 9 ದಿನಗಳ ಶೋಕಾಚರಣೆ

ಬೆಳ್ತಂಗಡಿ: ಪೋಪ್ ಫ್ರಾನ್ಸಿಸ್ ರ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯವು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಪೋಪ್ ನಿಧನದಲ್ಲಿ 9 ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದು, ಧರ್ಮಪ್ರಾಂತ್ಯಕ್ಕೆ ಸಂಬಂಧಪಟ್ಟ ಎಲ್ಲಾ ಹಬ್ಬ ಆಚರಣೆಗಳನ್ನು ಸರಳವಾಗಿ ನಡೆಸಲೆಂದು ಘೋಷಿಸಲಾಗಿದೆ.

ಇಂದು ಬೆಳಿಗ್ಗೆ ಬೆಳ್ತಂಗಡಿ, ಸಂತ ಲಾರೆನ್ಸರ ಕ್ಯಾಥಿಡ್ರಲ್ ದೇವಾಲಯದಲ್ಲಿ ಧರ್ಮಾಧ್ಯಕ್ಷ ಪರಮ ಪೂಜ್ಯ ಲಾರೆನ್ಸ್ ರವರು ವಿಶೇಷ ಪೂಜೆ ಸಲ್ಲಿಸಿ ಪೋಪ್ ರಿಗಾಗಿ ಪ್ರಾರ್ಥನೆ ಮಾಡಿದರು. ಧರ್ಮಕ್ಷೇತ್ರದ ಬಿಷಪ್ ಹೌಸ್ ಮತ್ತು ಪಾಲನಾ ಕೇಂದ್ರದ ಎಲ್ಲ ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗು ವಿಶ್ವಾಸಿಗಳು ಹಾಜರಿದ್ದರು.

ವಿಶೇಷ ಪೂಜೆಯ ಸಂದೇಶದ ಸಮಯದಲ್ಲಿ ಪರಮ ಪೂಜ್ಯರು ಪೋಪೆರನ್ನು ಭೇಟಿಮಾಡಿದ ಸವಿನೆನಪುಗಳನ್ನು ಹಂಚಿಕ್ಕೊಳ್ಳುತ್ತಾ, “ಪೋಪರಿಗೆ ಭಾರತದ ಕ್ರಿಶ್ಚಿಯನ್ನರ ಕುರಿತು ವಿಶೇಷ ಕಾಳಜಿ ಇತ್ತು, ಅದರಲ್ಲೂ ಬೆಳ್ತಂಗಡಿ ಧರ್ಮಕ್ಷೇತ್ರದ ಎಲ್ಲಾ ಚಟುವಟಿಕೆಗಳ ಕುರಿತು ಕೇಳಿತಿಳಿಯುತ್ತಿದ್ದರು” ಎಂದು ನುಡಿದರು. ಪೋಪ್ ಫ್ರಾನ್ಸಿಸ್ ರವ ಅಸಾನಿಧ್ಯವು ಧರ್ಮಸಭೆಯಲ್ಲೂ ಇಡೀ ಜಗತ್ತಿನಲ್ಲೂ ತುಂಬಲಾಗದ ನಷ್ಟಭರಿಸಲಾಗಿದೆ. ಪೋಪ್ ಫ್ರಾನ್ಸಿಸ್ ರವರ ಶಾಂತಿಯ ಮತ್ತು ಕರುಣೆಯ ಸಂದೇಶವು ಜಗಕೆ ಸಮಾಧಾನವನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಪರಮ ಪೂಜ್ಯ ಲಾರೆನ್ಸರವರು ಸಂತಾಪ ಸೂಚಿಸಿದರು.

Related posts

ಇಂದಬೆಟ್ಟು: ದೇವನಾರಿ ನಿವಾಸಿ ರಝಾಕ್ ನಿಧನ

Suddi Udaya

ಎಕ್ಸೆಲ್ ನ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ: ದ್ವಿತೀಯ ಪಿಯುಸಿ ಮರು ಪರೀಕ್ಷೆ ಫಲಿತಾಂಶ ಪ್ರಕಟ

Suddi Udaya

ಕಲ್ಮಂಜ: ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಧ್ರುವ-ಯಕ್ಷ ಶಿಕ್ಷಣ ನಾಟ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

Suddi Udaya

ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜಿನಲ್ಲಿ ಸಿ.ಎ ಸಾಧಕರಿಗೆ ಸನ್ಮಾನ

Suddi Udaya

ರಾಷ್ಟ್ರ ಪ್ರಶಸ್ತಿ ವಿಜೇತ, ನಿರ್ದೇಶಕ ಚೇತನ್ ಮುಂಡಾಡಿ ರವರ ಬಹುಭಾಷಾ ಚಿತ್ರಕ್ಕೆ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಭವನದಲ್ಲಿ ಆಡಿಷನ್

Suddi Udaya

ಸಾಯಿ ರಾಮ್ ಫ್ರೆಂಡ್ಸ್ ಗುರುವಾಯನಕೆರೆ ವತಿಯಿಂದ ಸುಹಾಸ್ ಶೆಟ್ಟಿಗೆ ನುಡಿ ನಮನ

Suddi Udaya
error: Content is protected !!