September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮಾನ್ ಜಯಂತಿ ಆಚರಣೆ



ಶಿಶಿಲ : ಹನುಮಂತ ಸ್ವಾಮಿ ಭಕ್ತಿಗೆ ಆದರ್ಶ. ಆತ ಅತೀ ಧೈರ್ಯವಂತ. ಯಾವುದೇ ಕಾರ್ಯ ಸಾಧಿಸಬೇಕಾದಲ್ಲಿ ಅದನ್ನು ಸಾಧಿಸುವಂತ ಪರಾಕ್ರಮಿ. ಶ್ರೀರಾಮನ ಸೇವಕ. ದುಷ್ಟ ಶಕ್ತಿಗಳನ್ನು ನಿಗ್ರಹಿಸಿದ ವೀರ ಪುರುಷ. ಆತನ ಆರಾಧನೆ ಪರಿಣಾಮ ನಮಗೂ ರಾಷ್ಟ್ರಕ್ಕೂ ಶಕ್ತಿ ತುಂಬಲಿ ಎಂದು ಶ್ರೀ ಅರಿಕೆಗುಡ್ದೆ ವನದುರ್ಗಾ ದೇವಾಲಯ ಅಧ್ಯಕ್ಷ ಪ್ರಕಾಶ‌ ಪಿಲಿಕಬೆ ತಿಳಿಸಿದ್ದರು.

ಅವರು ಶಿಶಿಲ ಶಿವಕೀರ್ತಿ ನಿಲಯದಲ್ಲಿ ನಡೆದ ಶ್ರೀ ಆಂಜನೇಯ ಜಯಂತಿ ಕಾರ್ಯಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿ ಜೀವ ವಿಮಾ ಬೆಳ್ತಂಗಡಿ ಅಧಿಕಾರಿ ಉದಯಶಂಕರ ಅರಸಿನಮಕ್ಕಿ ಮಾತನಾಡಿ ಹನುಮನ ಶಕ್ತಿ ಎಲ್ಲಾ ಭಾರತೀಯ ಪ್ರಜೆಗೂ ಬರಲಿ. ಅವರ ಆದರ್ಶ ಮೈಗೂಡಿಸಿಕೊಂಡು ಬರುವಾ ಎಂದು ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಕಾಸರಗೋಡು ಹಿರಿಯ ಭಜನಾ ಪಟು ಹರಿದಾಸ ಜಯಾನಂದ ಕಾಸರಗೋಡು ‌ಮತ್ತು ಭಜನಾ ಸಾಧಕ ಬಾಲಕೃಷ್ಣ ಪಂಜ ಅವರನ್ನು ಮನೆಯ ಪರವಾಗಿ ಜಯರಾಮ ನೆಲ್ಲಿತ್ತಾಯ ಮತ್ತು ಶ್ರೀ ಮತಿ ರೇಖಾ ಜಯರಾಮ ನೆಲ್ಲಿತ್ತಾಯ ಅಭಿನಂದನೆ ‌ಮಾಡಿದರು.


ರಾಘವೇಂದ್ರ ಕಿಗ್ಗ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಯ ಭಜಕರು ಭಾಗವಹಿಸಿ ಆಕರ್ಷಕ ಕುಣಿತ ಭಜನೆ ನೆರವೇರಿಸಿದರು.
ಬಿಳಿನೆಲೆ ಭಜನಾ‌ ಮಂಡಳಿಯ ಸುಂದರ ಮತ್ತು ತಂಡದವರಿಂದ ಮತ್ತು ಹರಿದಾಸ ಕಾಸರಗೋಡು ಜಯಾನಂದ ಅವರ ತಂಡ ಭಜನಾ ಕಾರ್ಯಕ್ರಮ ನಡೆಸಿದ್ದರು.


ಕಾರ್ಯಕ್ರಮದಲ್ಲಿ ಬೆಳ್ತಂಗಡಿ , ಪುತ್ತೂರು, ಕಾಸರಗೋಡು ವಿವಿಧ ಭಜನಾ ತಂಡದವರು ಭಾಗವಹಿಸಿದ್ದರು.
ಭಾಗವಹಿಸಿದ ಎಲ್ಲರಿಗೂ ಶಿವಕೀರ್ತಿ ನಿಲಯದ ಜಯರಾಮ ನೆಲ್ಲಿತ್ತಾಯ ದಂಪತಿಗಳು ಮನೆಯವರೂ ಎಲ್ಲರೂ ಅಭಿನಂದನೆ ತಿಳಿಸಿದ್ದರು.

Related posts

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

Suddi Udaya

ಉರುವಾಲುಪದವು ಶಿವಾಜಿನಗರ ಶ್ರೀ ಮಹಮ್ಮಾಯಿ ಶ್ರೀ ದೇವಿಯ ಪ್ರತಿಷ್ಠಾ ಮಹೋತ್ಸವ: ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠೆ, ನವಕ ಕಲಶಾಭಿಷೇಕ

Suddi Udaya

ಅನ್ವೇಷಣಾ ಸ್ಪರ್ಧೆ: ಎಸ್‌ಡಿಎಂ ಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ IGNITE 2K25

Suddi Udaya

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೆಜ್ಜೆಗಿರಿ ಮಹಾ ಸಭೆ

Suddi Udaya

ಪದ್ಮುಂಜದಲ್ಲಿ ಅಕ್ರಮ ಗೋ ಸಾಗಾಟ: ವಾಹನ ಸಹಿತ ಆರೋಪಿ ಬಂಧನ

Suddi Udaya
error: Content is protected !!