ವೇಣೂರು: ಶ್ರೀ ವಿಶ್ವಕರ್ಮ ಸೇವಾ ಸಂಘ ವೇಣೂರು ಹಾಗೂ ಕಾಳಿಕಾಂಬ ಮಹಿಳಾ ಮಂಡಳಿ ವೇಣೂರು ಇದರ 33 ನೇ ವರ್ಷದ ಮಹಾ ಸಭೆ ಹಾಗೂ ವಿಶ್ವಕರ್ಮ ಪೂಜೆಯು ಎ.27 ರಂದು ಜರಗಿತು.
ವಾರ್ಷಿಕ ಸಭಾ ಕಾರ್ಯಕ್ರಮದಲ್ಲಿ ಮೂಡುಬಿದ್ರಿ ಶ್ರೀ ಗುರುಮಠ ಕಾಳಿಕಾಂಬ ದೇವಸ್ಥಾನ ಆಡಳಿತ ಮುಖ್ಯಸ್ಥ ಎಂ.ಕೆ ಬಾಲಕೃಷ್ಣ ಆಚಾರ್ಯ ಉಳಿಯ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ವೇಣೂರಿನ ಸಮಸ್ತ ವಿಶ್ವಕರ್ಮ ಬಂಧುಗಳ ಪರಿಶ್ರಮಕ್ಕೆ ಇನ್ನು ಮುಂದೆ ಈ ಕಟ್ಟಡವು ಆದಷ್ಟು ಬೇಗ ಸಭಾಂಗಣವಾಗಿ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಸದಾನಂದ ಆಚಾರ್ಯ ಯಕ್ಷ ತೀರ್ಥ ಕಲಾ ಸೇವೆ ನೂರಾಳ್ ಬೆಟ್ಟು ಇವರು ಮುಖ್ಯ ಅತಿಥಿಗಳಾಗಿ ಮಾತನಾಡಿ ನಮ್ಮ ಸಮಾಜದ ಬಂಧುಗಳು ಆಚಾರ ಹಾಗೂ ವಿಚಾರಗಳಲ್ಲಿ ನಮ್ಮ ಸಮಾಜದ ಘನತೆ ಗೌರವವನ್ನು ಉಳಿಸಿದರೆ ನಾವು ನಂಬಿದ ದೇವರು ನಮ್ಮನ್ನು ಕೈ ಬಿಡುವುದಿಲ್ಲ ಎಂದು ಸಲಹೆ ನೀಡಿದರು. ಹಾಗೆಯೇ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕೈರೋಳಿ ಸತೀಶ್ ಆಚಾರ್ಯರವರು ಆಯ್ಕೆಯಾದರು. ಅಭ್ಯಾಗತರನ್ನು ಸಭೆಯ ಗೌರವ ಅಧ್ಯಕ್ಷ ಖಂಡಿಗ ಶ್ರೀಧರ ಆಚಾರ್ಯರವರು ಹಾಗೂ ಅಧ್ಯಕ್ಷ ರವೀಂದ್ರ ಆಚಾರ್ಯರವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಸಂಘದ ಉಪಾಧ್ಯಕ್ಷ ಸೀತಾರಾಮ ಆಚಾರ್ಯ ಸ್ವಾಗತಿಸಿ ಪ್ರಸ್ತಾವನೆ ಗೈದರು. ಜೊತೆ ಕಾರ್ಯದರ್ಶಿ ಬಿ ಹರಿಶ್ಚಂದ್ರ ಆಚಾರ್ಯ ಲೆಕ್ಕಪತ್ರ ಮಂಡಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ನೂತನ ಅಧ್ಯಕ್ಷ ಸತೀಶ್ ಆಚಾರ್ಯಧನ್ಯವಾದವಿತ್ತರು.