September 6, 2026
Uncategorized

ಮೇ. 7 : ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣಾ ಶಿಬಿರ

ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ.7 ರಂದು ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಚಿತ ಸ್ತ್ರೀರೋಗ ಮತ್ತು ಬಂಜೆತನ ತಪಾಸಣಾ ಶಿಬಿರ ಆಯೋಜಿಸಲಾಗಿದೆ.


ಡಾ. ನಾಯಕ್ಸ್ ಫರ್ಟಿಲಿಟಿ ಕ್ಲಿನಿಕ್ ಮತ್ತು ಐವಿಎಫ್ ಸೆಂಟರ್ ಸಹಯೋಗದಲ್ಲಿ ನಡೆಯುವ ಈ ಶಿಬಿರದಲ್ಲಿ ಸ್ತ್ರೀರೋಗ ತಪಾಸಣೆ, ಬಂಜೆತನ ತಪಾಸಣೆ, ಮುಟ್ಟಿನ ಅಸ್ವಸ್ಥತೆಗಳು, ಮೂತ್ರನಾಳದ ಸೋಂಕು ತಪಾಸಣೆ, ಸ್ತನದ ತಪಾಸಣೆ, ಗರ್ಭಾಶಯದ ತಪಾಸಣೆ, ಮಹಿಳೆಯರ ಕ್ಯಾನ್ಸರ್ ಮುಂತಾದ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರುಗಳಾದ ಡಾ. ಸ್ವರ್ಣಲತಾ, ಡಾ. ಪ್ರಿಯಾಂಕ ಜಯದೇವ್, ಡಾ. ಅನ್ವಿತಾ ಶತಾನಂ ಪ್ರಸಾದ್ ರಾವ್ ಹಾಗೂ ಸಂತಾನೋತ್ಪತ್ತಿ ಔಷಧ ಕನ್ಸಲ್ಟೆಂಟ್ ಆಗಿರುವ ಡಾ. ಪ್ರಮೋದ ಲಕ್ಷ್ಮಣ್ ಈ ಶಿಬಿರದಲ್ಲಿ ಮಹಿಳೆಯರ ರೋಗ ಮತ್ತು ಬಂಜೆತನ ತಪಾಸಣೆ ನಡೆಸಲಿದ್ದಾರೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯುವ ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತ, ಸ್ಕ್ಯಾನಿಂಗ್ 50%, ಔಷಧದಲ್ಲಿ 10%, ಒಳರೋಗಿ ವಿಭಾಗದಲ್ಲಿ 10%, ರಕ್ತಪರೀಕ್ಷೆ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ದೊರೆಯಲಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ದ.ಕ. ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ಯೂನಿಯನ್ ಉದ್ಘಾಟನೆ ಮತ್ತು ಕಾರ್ಮಿಕರ ಸಮಾವೇಶ ಹಾಗೂ ಬಿ.ಎಂ.ಎಸ್ ಸ್ಥಾಪನ ದಿನಾಚರಣೆ

Suddi Udaya

ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವಂತೆ ಉಸ್ತುವಾರಿ ಸಚಿವರಿಗೆ ವಕೀಲರ ನಿಯೋಗದಿಂದ ಮನವಿ

Suddi Udaya

ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ

Suddi Udaya

ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಸಮ್ಮೇಳನ ಸಂಯೋಜನ ಸಮಿತಿ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಪದವಿಪೂರ್ವ ಕಾಲೇಜು, ಕೊಯ್ಯರು ಇದರಸಂಯುಕ್ತ ಆಶ್ರಯ: . ಕೊಯ್ಯೂರಿನಲ್ಲಿ ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Suddi Udaya

ಪಾಡ್ದನ,ಸಂಧೀ ಮುಂತಾದ ಅನೇಕ ಜನಪದೀಯ ಸಾಂಸ್ಕೃತಿಕ ಬೇರುಗಳು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಹೆಗ್ಗೋಡಿನ ನೀನಾಸಂ ,ರಂಗಾಯಣದಂತಹ ರಂಗ ಶಾಲೆ ತೆರೆಯುವ ಯೋಚನೆ: ಸಂಪತ್ ಬಿ ಸುವರ್ಣ

Suddi Udaya

ದ.ಕ ಜಿಲ್ಲಾ ದ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ವಾರ್ಷಿಕ ಮಹಾಸಭೆ: ಸಮಿತಿ ರಚನೆ

Suddi Udaya
error: Content is protected !!