ಬೆಳ್ತAಗಡಿ: ಸೈಂಟ್ ಮೇರಿಸ್ ಆಂ.ಮಾ. ಶಾಲೆ ಇದರ ೨೫ನೇ ವರ್ಷದ ರಜತಮಹೋತ್ಸವ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು. ಈ ಸಂಭ್ರಮದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರನ್ನು ಶಾಲಾ ಆಡಳಿತ ಮಂಡಳಿ ಭೇಟಿಯಾಗಿ ರಜತ ಮಹೋತ್ಸವ ಬೆಳ್ಳಿಹಬ್ಬದ ಪ್ರಯುಕ್ತ ರೂ. ೧.೫೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಅಡಿಟೋರಿಯಂನ ಕೆಲಸ ಕಾರ್ಯದ ಮಾಹಿತಿಯನ್ನು ತಿಳಿಸಲಾಯಿತು. ನಂತರ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಬೆಳ್ಳಿ ಹಬ್ಬ ವರ್ಷಾಚರಣೆಗೆ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಿಜಿ ಜಾರ್ಜ್, ಶಾಲಾ ಮುಖ್ಯೋಪಾಧ್ಯಾಯ ಸಿಸ್ಟರ್ ಪ್ರೀತಿ ಜಾರ್ಜ್, ಶಾಲಾ ಆಡಳಿತ ಅಧಿಕಾರಿ ಸಿಸ್ಟರ್ ಮೇಲ್ವಿನ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ, ಆಡಳಿತ ಮಂಡಳಿ ಸದಸ್ಯರಾದ ಆ್ಯಂಟನಿ ಫೆರ್ನಾಂಡಿಸ್, ಗ್ಯೂ ಗೋರಿಯಾ ಫೆರ್ನಾಂಡಿಸ್, ಶ್ರೀಮತಿ ಕವಿತಾ, ಶ್ರೀಮತಿ ಗಾಯತ್ರಿ, ವರ್ಣನ್ ರೋಡ್ರಿಗಸ್, ಹಾಗೂ ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಅಧ್ಯಾಪಕರು ಉಪಸ್ಥಿತರಿದ್ದರು.