ಅರಸಿನಮಕ್ಕಿ: 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅರಸಿನಮಕ್ಕಿ ಸರಕಾರಿ ಪ್ರೌಢ ಶಾಲೆಯ ಶೇ. 86.84 ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 38 ವಿದ್ಯಾರ್ಥಿಗಳಲ್ಲಿ 11 ಅತ್ಯುನ್ನತ ಶ್ರೇಣಿ , 15 ಪ್ರಥಮ ಶ್ರೇಣಿ, 7 ದ್ವಿತೀಯ ಶ್ರೇಣಿ ಪಡೆದುಕೊಂಡಿದ್ದಾರೆ.
ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ವಿಜೇತ್ ಎಸ್ ಶೆಟ್ಟಿ 612, ತನುಶ್ರೀ 607, ಅನುಷಾ 601, ಸುಜಾತ 579, ವಿಜೇತಾ 572, ಶ್ರವಂತ್ 568, ಲಾವಣ್ಯ 566, ಸ್ನೇಹ 560, ಜನನಿ 557, ಸ್ವಸ್ತಿ 547, ಅವನಿಕುಮಾರಿ 539 ಅಂಕ ಗಳಿಸಿದ್ದಾರೆ.