September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕುಪ್ಪೆಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ತೇಪೆ ಕಾಮಗಾರಿ ಆರಂಭ: ಬಹುಕಾಲದ ಬೇಡಿಕೆಗೆ ಅಲ್ಪ ಪರಿಹಾರ

ಬೆಳ್ತಂಗಡಿ: ಗುಂಡಿಗಳೇ ತುಂಬಿ ಹೋಗಿ ಸಂಚರ ಪ್ರಯಾಸಗೊಂಡಿದ್ದ ಕುಪ್ಪೆಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ 45 ಲಕ್ಷ ರೂ.ವೆಚ್ಚದಲ್ಲಿ ತೇಪೆ ಕಾಮಗಾರಿಗೆ ಚಾಲನೆ ಜ.5 ರಂದು ದೊರೆತಿದೆ. ಈ ರಸ್ತೆಯ ಹದೆಗೆಟ್ಟು ಹತ್ತಿರ ಮೂರು ವರ್ಷದ ಬಳಿಕ ದುರಸ್ತಿ ಕಂಡಿದೆ.

12 ಕೀಮಿ.ಉದ್ದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಜನರ ಬಹುಕಾಲದ ಬೇಡಿಕೆಗೆ ಅಲ್ಪ ಪರಿಹಾರ ದೊರೆತಿದೆ. ಈ ರಸ್ತೆ ಸಂಪೂರ್ಣವಾಗಿ ಡಾಮರೀಕರಣ ಆಗಬೇಕೆಂಬುದು ಸಾರ್ವಜನಿಕರ ಆಶಯ ಆದರೆ ಗುಂಡಿಗಳ ದರ್ಬಾರ್‌ಗೆ ತಾತ್ಕಲಿಕ ಪರಿಹಾರ ದೊರೆತಾಂಗಿದೆ. ಕಳೆದ ಜೂನ್ ತಿಂಗಳಿನಿಂದ ಸುದ್ದಿಉದಯ ಪತ್ರಿಕೆ ನಿರಂತರವಾಗಿ ರಸ್ತೆಯ ಅವ್ಯವಸ್ಥೆಯ ಕುರಿತು ವರದಿ ಪ್ರಕಟಿಸಿ ತಾತ್ಕಲಿಕ ಪರಿಹಾರಕ್ಕೆ ಜನರಧ್ವನಿಯಾಗಿ ನಿಂತಿತ್ತು. ಜನಸ್ಪಂದನ ಸಭೆಯಲ್ಲಿ ರಸ್ತೆಯ ಅವ್ಯವಸ್ಥೆ ಕುರಿತು ವಿಷಯ ಪ್ರಸ್ತಾಪವಾದಗ ಶಾಸಕ ಹರೀಶ್ ಪೂಂಜ ಪ್ಯಾಚ್ ವಾರ್ಕ್ ಕಾಮಗಾರಿ ಒಂದುವಾರದೊಳಗೆ ಆರಂಭವಾಗಲಿದೆ ಅಲ್ಲದೇ ಈ ರಸ್ತೆ ಸಂಪೂರ್ಣ ದುರಸ್ತಿಗೆ ಎಸ್‌ಹೆಚ್‌ಡಿಪಿ ಅಡಿಯಲ್ಲಿ 12 ಕೋಟಿ ರೂ.ಮೀಸಲಿರಿಸಿ ಪ್ರಸ್ತವಾನೆ ಸಲ್ಲಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದರು.

Related posts

ಉಜಿರೆಯಲ್ಲಿ 550 ಕೆಜಿ ತೂಕದ ಮಡಲ್ ಮೀನು: ಖರೀದಿಸಲು ಮುಗಿಬಿದ್ದ ಗ್ರಾಹಕರು

Suddi Udaya

ಶಿಬಾಜೆ: ಕಾಂಗ್ರೆಸ್ ಪ್ರಮುಖರು ಬಿಜೆಪಿಗೆ ಸೇರ್ಪಡೆ

Suddi Udaya

ಶ್ರೀ ಮಹಮ್ಮಾಯಿ ಮರಾಟಿ ಆರಾಧನಾ ಸೇವಾ ಸಮಿತಿ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಎಸ್‌ಡಿಪಿಐ ವಿರುದ್ಧ ಅವಹೇಳನಕಾರಿ ಪೋಸ್ಟ್: ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಧರ್ಮಸ್ಥಳ ಠಾಣೆಗೆ ದೂರು

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿಗೆ ಶೇ.95.65 ಫಲಿತಾಂಶ

Suddi Udaya

ಡಾ. ಯು.ಸಿ. ಪೌಲೋಸ್‌ರವರ ಸೇವೆಗೆ “ಭಾರತದ ಜವಾಬ್ದಾರಿಯುತ ಮತ್ತು ಸಕ್ರಿಯ ನಾಗರಿಕ ಪ್ರಶಸ್ತಿ

Suddi Udaya
error: Content is protected !!