ಗೇರುಕಟ್ಟೆ : ಗೇರುಕಟ್ಟೆ ಕಳಿಯ ಗ್ರಾಮದ ಖಂಡಿಗ ಸಮೀಪದಲ್ಲಿ ನೂತನವಾಗಿ ನಿರ್ಮಾಣ ಹೊಂದಿರುವ ಸ್ಮಶಾನ ಹಿಂದೂ ರುದ್ರ ಭೂಮಿಯನ್ನು ಲೋಕಾರ್ಪಣೆ ಬಗ್ಗೆ ಪೂರ್ವಾಭಾವಿ ಸಭೆyಯು ಕಳಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮೇ 6ರಂದು ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್. ಅಧ್ಯಕ್ಷತೆ ವಹಿಸಿದ್ದರು.
ಸ್ಮಶಾನ ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷ ಕೇಶವ ಬಂಗೇರ ಬಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮೇ.21ರಂದು ಉದ್ಘಾಟನೆಗೊಳ್ಳುತ್ತದೆ ಎಂದು ತಿಳಿಸಿದರು.
ಕಳಿಯ, ನ್ಯಾಯತರ್ಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಾರ್ವಜನಿಕರ ಸಹಕಾರವನ್ನು ಕೋರಿದರು.
ಕಳಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಬಿ.ಸದಸ್ಯರಾದ ಸುಭಾಷಿಣಿ ಕೆ ,ಸುಧಾಕರ ಮಜಲು,ಅಬ್ದುಲ್ ಕರೀಂ ಕೆ.ಎಮ್, ವಿಜಯ ಕುಮಾರ್ ಕೆ,ಯಶೋಧರ ಶೆಟ್ಟಿ ಕೆ,ಹರೀಶ್ ಕುಮಾರ್ ಬಿ, ಮೋಹಿನಿ ಹೆಚ್, ಶ್ವೇತಾ ಶ್ರೀನಿವಾಸ್, ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಕಾರ್ಯದರ್ಶಿ ಕಂಞ್ಞ ಕೆ, ಹಿಂದೂ ರುದ್ರ ಭೂಮಿ ಸಮಿತಿ ಕಾರ್ಯದರ್ಶಿ ಲೋಕೇಶ್ ಎನ್ ಉಪಸ್ಥಿತರಿದ್ದರು.
ಸಿ.ಎ.ಬ್ಯಾಂಕ್ ನಿರ್ದೇಶಕರು, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು,ಮಾಜಿ ಸದಸ್ಯರು ಮತ್ತು ಸಾರ್ವಜನಿಕರು ಮತ್ತಿತರರಿದ್ದರು.