24 C
ಪುತ್ತೂರು, ಬೆಳ್ತಂಗಡಿ
May 9, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗಡಿ ಪಾರು ಮಾಡಿ ಎನ್ನಲು ರಕ್ಷಿತ್ ಶಿವರಾಂ ಯಾರು..? ಕುಂಬಳಕಾಯಿ ಕಳ್ಳ ಎಂದಾಗ ಹೆಗಲು ಮುಟ್ಟಿ ಅರಚಾಡಿದರೆ ನಾವೇನು ಮಾಡಲು ಸಾಧ್ಯ:ತಾ.ಪಂ ಮಾಜಿ ಸದಸ್ಯ ಮಂಜುನಾಥ್ ಸಾಲ್ಯಾನ್

ಬೆಳ್ತಂಗಡಿ: ಪುರಾತನ ಇತಿಹಾಸ ಪ್ರಸಿದ್ಧ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನವನ್ನು ಸ್ವಾತಂತ್ರ್ಯ ನಂತರ ಬಹಳಷ್ಟು ಶಾಸಕರು ಆಯ್ಕೆಯಾಗಿದ್ದರೂ ಯಾರು ಮಾಡದಿದ್ದ ಕಾರ್ಯವನ್ನು ಧರ್ಮರಕ್ಷಕ ಹರೀಶ್ ಪೂಂಜ ತನ್ನ ಶಾಸಕತ್ವದ ಪ್ರಥಮ ಅವಧಿಯಲ್ಲೇ ಕಾರ್ಯ ಆರಂಭಿಸಿ ಈಗ ಪರಿಪೂರ್ಣಗೊಳಿಸಿದ್ದಾರೆಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಂಜುನಾಥ್ ಸಾಲ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇಡೀ ಬೆಳ್ತಂಗಡಿ ತಾಲೂಕು ಈ ಅವೀಸ್ಮರಣೀಯ ಉತ್ಸವವನ್ನು ತನ್ನ ಕುಟುಂಬದ ಉತ್ಸವವೆಂದೇ ಸಂಭ್ರಮಿಸಿ 81 ಗ್ರಾಮಗಳಿಂದಲೂ ಹೊರೆಕಾಣಿಕೆ ಸಲ್ಲಿಸಿ ಸಂಭ್ರಮಿಸಿದ್ದಾರೆ. ಟ್ಯೂಬ್‌ ಲೈಟ್ ಒಡೆದು, ಜನರೇಟರ್ ಹಾಳುಗೆಡಹಿ, ಡಿಸೇಲ್ ಕದ್ದು, ಪ್ಲೆಕ್ಸ್ ಹರಿದು ಸಂಭ್ರಮಕ್ಕೆ ಅಡ್ಡಿ ಪಡಿಸಲೆತ್ನಿಸಿದ ವಿಘ್ನ-ಸಂತೋಷಿಗಳನ್ನು ಉದ್ದೇಶಿಸಿ ಶಾಸಕ ಹರೀಶ್ ಪೂಂಜ ಖಾರವಾಗಿ ಪ್ರತಿಕ್ರಿಯಿಸಿರುತ್ತಾರೆ. ಈ ಬಗ್ಗೆ ಕೆಲವು ಕಾಂಗ್ರೆಸ್ ನಾಯಕರು ಹಾರಟ, ಚೀರಾಟ, ಗೋಳಾಟದ ಹೇಳಿಕೆಗಳು ತಮ್ಮವರು ಮಾಡಿದ ತಪ್ಪನ್ನು ಮರೆಮಾಚುವ ಸಲುವಾಗಿ ಕುಂಬಳಕೆಯಿ ಕಳ್ಳ ಎಂದಾಗ ಹೆಗಲು ಮುಟ್ಟಿ ನೋಡಿದ ಎಂಬ ಗಾದೆ ನೆನಪಾಗುತ್ತದೆ.

ಹರೀಶ್ ಪೂಂಜರವರು ರಾಜಕೀಯ ಲಾಭಕ್ಕೋಸ್ಕರ ಇದನ್ನು ಮಾಡಿದ್ದಾರೆಂದು ಹೇಳುವ ಕಾಂಗ್ರೆಸ್ ನಾಯಕರ ಹೇಳಿಕೆ ಬಾಲಿಶತನವಾದದ್ದು. ಚುನಾವಣಾ ಸಂದರ್ಭದಲ್ಲಿನ ತೆಕ್ಕಾರು ಗ್ರಾಮದ ಅಂಕಿ-ಅಂಶಗಳು ತಮಗೆ ಬಲುದೊಡ್ಡ ಹಿನ್ನಡೆಯೆಂದು ತೋರಿಸಿದರೂ, ಯಾವುದೇ ರಾಜಕೀಯ ಮಾಡದೇ ದೇವಸ್ಥಾನದ ಹಕ್ಕುಪತ್ರ ಜಮೀನು ಮೂಲಸೌಕರ್ಯಗಳನ್ನು ಗ್ರಾಮಕ್ಕೆ ತಂದು ತಾನೊಬ್ಬ ಧರ್ಮರಕ್ಷನೆಂದು ಸಾಬೀತು ಮಾಡಿದ್ದಾರೆ. ರಾಜಕೀಯ ಲಾಭವಿದ್ದರೆ ಅದನ್ನು ಬೇರೆ ಗ್ರಾಮಗಳಿಗೆ ವಿತರಿಸಬಹುದಿತ್ತು. ಕಾಂಗ್ರೆಸ್ ಕುಹಕಿಗಳಿಗೆ ತೆಕ್ಕಾರಿನ ಅಭಿವೃದ್ಧಿ ಸಹಿಸಲಾಗುತ್ತಿಲ್ಲವೆಂದು ಈಗ ಗೋಚರವಾಗುತ್ತಿದೆ ಎಂದು ಹೇಳಿದ್ದಾರೆ.

ಹರೀಶ್ ಪೂಂಜರನ್ನು ಮುಸ್ಲಿಂ ವಿರೋಧಿ ಎಂದು ಜರೆಯುವ ಶಾಹುಲ್ ಹಮೀದ್ ತನ್ನ ಜಿಲ್ಲಾ ಪಂಚಾಯತ್ ಸದಸ್ಯತ್ವದ 2 ಅವಧಿಗಳ ಎಷ್ಟು ಬಡ ಮುಸ್ಲಿಂ ಕುಟುಂಬಗಳಿಗೆ ನೆರವಾಗಿದ್ದಾರೆಂದು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಹಾಗೆ ಮಾಡಿದ್ದರೂ ಇಂದಿಗೂ ತೆಕ್ಕಾರು ಗ್ರಾಮದಲ್ಲಿ ಬಡ ಮುಸ್ಲಿಂರ ಸಂಖ್ಯೆಯೇ ದೊಡ್ಡ ಪ್ರಮಾಣದಲ್ಲಿ ಇರಲು ಕಾರಣ ಏನು..? ತೆಕ್ಕಾರು ಗ್ರಾಮ ಪಂಚಾಯತ್‌ನ ಮುಸ್ಲಿಂ ಸಮುದಾಯದ ಸದಸ್ಯರೋರ್ವರು ಮುಸ್ಲಿಂ ಮಹಿಳೆಯಿಂದ ಹಣ ಪಡೆದು ಮನೆ ತೆರಿಗೆ ಮಾಡಿಸಿಕೊಡುತೇನೆಂದು ಹಾಗೂ ವಿದ್ಯುತ್ ಸಂಪರ್ಕ ಕೊಡಿಸುತ್ತೇನೆಂದು ವಂಚಿಸಿ ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿಯ ನೆಲೆಯಲ್ಲಿ ಆ ಮುಸ್ಲಿಂ ಬಡ ಮಹಿಳೆಗೆ ಶಾಸಕರ ಮುಖಾಂತರ ನ್ಯಾಯ ಒದಗಿಸಿ ಕೊಟ್ಟಿರುತೇನೆ. ಇಂತಹ ಹಲವು ಪ್ರಕರಣಗಳು ನನ್ನಲ್ಲಿ ಇವೆ ಎಂದು ಹೇಳಿದ್ದಾರೆ.

ಗಡಿ ಪಾರು ಮಾಡಿ ಎನ್ನಲು ರಕ್ಷಿತ್ ಯಾರು..?

2023ರ ಚುನಾವಣೆಯಲ್ಲಿ ಹೊರಗಿನಿಂದ ಬಂದು ಸ್ಪರ್ಧಿಸಿದ ರಕ್ಷಿತ್ ಶಿವರಾಮ್‌ಗೆ ಬೆಳ್ತಂಗಡಿಯಲ್ಲಿ ಪ್ರವೇಶವಿಲ್ಲ ಎಂಬ ಜನಾದೇಶದ ಮೂಲಕ ಗಡಿಪಾರು ತೀರ್ಪನ್ನು ನೀಡಿದ್ದು, ಬೆಳ್ತಂಗಡಿ ತಾಲೂಕಿನ ಒಂದು ಲಕ್ಷ ಮತದಾರರ ಆ ತೀರ್ಪನ್ನು ಗೌರವಿಸದೆ ಅಭಿವೃದ್ಧಿ ಕಾರ್ಯಗಳಿಗೆ ತನ್ನ ಸರ್ಕಾರವಿದೆಯೆಂಬ ನೆಪದಲ್ಲಿ ತಡೆ ಮಾಡುವುದು ಎಷ್ಟು ಸಮಂಜಸ..?

ಹರೀಶ್ ಪೂಂಜರವರು ಶಾಸಕರಾಗುವ ಮೊದಲು, ನಂತರವೂ, ದೇವಾಲಯ ದೈವಸ್ಥಾನ ಗರಡಿಗಳ ಜೀರ್ಣೋದ್ಧಾರ ನಾರಾಯಣ ಗುರು ಮಂದಿರವೂ ಸೇರಿದಂತೆ ಧಾರ್ಮಿಕ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ಮಾಡಿದ ಕೆಲಸ ತಾಲೂಕಿನ ಇತಿಹಾಸಗಳ ಪುಟಗಳಲ್ಲಿ ಉಳಿದು ಮನೆ ಮಾತಾಗಿದೆ.
‌ದ್ವೇಷದ ರಾಜಕಾರಣ ಮಾಡುವ ಮಲ್ಲೇಶ್ವರಂ ಆಮದ್ ಗಿರಾಕಿಯ ಮಾತನ್ನು ನಂಬಲು ಬೆಳ್ತಂಗಡಿ ಜನತೆ ಮುಗ್ಧರಲ್ಲ. ಮುಂದಿನ ದಿನಗಳಲ್ಲೂ ಶಾಸಕರ ತೇಜೋವಧೆ ಮಾಡುವ ಯತ್ನ ನಡೆದರೆ ಸಮಸ್ತ ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ನೆರಿಯ: ಸಂಜೀವ ಗೌಡ ನಿಧನ

Suddi Udaya

ಮಚ್ಚಿನ ಗ್ರಾಮದ ಕಾಂಗ್ರೆಸ್ ನ ಸಕ್ರಿಯ ನಾಯಕ ಸಂದೀಪ್ ಮಡಿವಾಳ್ ಬಿಜೆಪಿಗೆ ಸೇರ್ಪಡೆ

Suddi Udaya

ನ್ಯಾಯತರ್ಪು ಜಾರಿಗೆಬೈಲು ನಿವಾಸಿ ಕೆ.ಎಂ. ಅಬೂಬಕ್ಕರ್ ರವರ ಬ್ಯಾಂಕ್ ಖಾತೆಯಿಂದ ಅಪರಿಚಿತ ಇಬ್ಬರು ವ್ಯಕ್ತಿಗಳಿಂದ ಹಣ ಕಳವು

Suddi Udaya

ಉಜಿರೆ: ಚರ್ಮಗಂಟು ಲಸಿಕೆ ಕಾರ್ಯಕ್ರಮ

Suddi Udaya

ಕೊಕ್ಕಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಮುದಾಯ ಭವನಕ್ಕೆ ಶಿಲಾನ್ಯಾಸ

Suddi Udaya

ಕಕ್ಕಿಂಜೆ: ಗಾಂಧಿನಗರ ನಿವಾಸಿ ವೀರಪ್ಪ ಗೌಡ ನಿಧನ

Suddi Udaya
error: Content is protected !!