
ಬೆಳ್ತಂಗಡಿ: ಭಾರತ ದೇಶ ಮೂಲತಃ ಅಹಿಂಸೆಯನ್ನು ಬಯಸುತ್ತಿದೆ. ಈ ಅಹಿಂಸೆಗೆ ತೊಡಕಾಗಿರುವ ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದನೆ ತೊಡಕಾಗಿದೆ. ಭಗವಾನ್ ಮಹಾವೀರ , ಬುದ್ಧ , ಶ್ರೀರಾಮಚಂದ್ರ ಇವರೆಲ್ಲ ಅಹಿಂಸೆಯ ಪ್ರತಿಪಾದಕರಾಗಿದ್ದರೂ ಹಿಂಸೆಗೆ ಕಾರಣವಾಗುವ ವಿಚಾರಗಳನ್ನು ವಿರೋಧಿಸಿದವರಾಗಿದ್ದಾರೆ.
ಪಾಕಿಸ್ಥಾನಕ್ಕೆ ತನ್ನ ಪ್ರಜೆಗಳ ಹಿತಕ್ಕಿಂತ ನೆರೆಯ ರಾಷ್ಟ್ರ ಭಾರತಕ್ಕೆ ಕಿರುಕುಳ ನೀಡುವ ಮಾನಸಿಕ ವಿಕೃತಿಯಲ್ಲಿ ಸಂತೋಷವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಭಾರತದ ಆಪರೇಷನ್ ಸಿಂಧೂರ ಸರಿಯಾದ ಕ್ರಮವಾಗಿದೆ. ಇದರಿಂದಾಗಿ ಭಯೋತ್ಪಾದಕ ಮನಸ್ಸುಗಳು ನಿರ್ನಾಮವಾಗಿ ಶಾಂತಿ ನೆಲೆಸಲಿ. ಅಹಿಂಸಾಮಯೀ ಭಾರತ ಜಗತ್ತಿಗೆ ಮಾದರಿ ರಾಷ್ಟ್ರವಾಗಿಯೇ ಇರಲಿದೆ. ಜೈ ಹಿಂದ್

- ನಿರಂಜನ್ ಜೈನ್ ಕುದ್ಯಾಡಿ