September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಸಪ್ರಶ್ನೆ ಸ್ಪರ್ಧೆ : ಎಸ್.ಡಿ.ಎಂ. ಬಿ.ಎಡ್. ಕಾಲೇಜಿಗೆ ಪ್ರಥಮ ಸ್ಥಾನ


ಉಜಿರೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸ್ವಾತಂತ್ಯ್ರ ಸಂಗ್ರಾಮದ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು ಗಾಂಧೀಜಿಯವರ ಜೀವನ ಮೌಲ್ಯಗಳು ಮತ್ತು ತ್ಯಾಗ ಬಲಿದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ವಿವಿಧ ಸ್ಪರ್ಧೆಗಳನ್ನು ನಡೆಸಲು ನಿರ್ದೇಶಿಸಿದ್ದು, ಆ ಪ್ರಯುಕ್ತ ಮಂಗಳೂರು ವಿಶ್ವವಿದ್ಯಾನಿಲಯ, ನೆಹರು ಚಿಂತನ ಕೇಂದ್ರ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಇವರು ಮೇ8 ರಂದು ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿಯಲ್ಲಿ ಆಯೋಜಿಸಿದ್ದ “

ಭಾರತದ ಸ್ವಾತಂತ್ಯ್ರ ಹೋರಾಟ: ಗಾಂಧೀಜಿಯವರ ಕೊಡುಗೆಗಳು ಮತ್ತು ಜೀವನ ಮೌಲ್ಯ ” ಎಂಬ ವಿಷಯದ ಕುರಿತು ನಡೆಸಿದ ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆಯಲ್ಲಿ ಉಜಿರೆ ಬಿ.ಎಡ್. ಕಾಲೇಜಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಮಲ್ಲಿಕಾರ್ಜುನ ಎಸ್ ಪಾಟೀಲ್, ದರ್ಶನ್ ಪಿ, ನಾಗವೇಣಿ ಜಿ ಎಸ್ ಇವರು ಪ್ರಥಮ ಬಹುಮಾನ ರೂ. 10000 ನಗದು, ಫಲಕ ಮತ್ತು ಪ್ರಮಾಣಪತ್ರವನ್ನು ಪಡೆದಿರುತ್ತಾರೆ. ಇವರನ್ನು ಸಂಸ್ಥೆಯ ಕಾರ್ಯದರ್ಶಿಯವರು, ಆಡಳಿತಮಂಡಳಿಯವರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.

Related posts

ಆರಂಬೋಡಿ: ಅಲ್ ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಅಂಗರಕರಿಯ ವತಿಯಿಂದ ಉಚಿತ ಸಾಮೂಹಿಕ ಮಕ್ಕಳ ಸುನ್ನತ್ (ಮುಂಜಿ) ಕಾರ್ಯಕ್ರಮ

Suddi Udaya

ಬಂದಾರು: ಚಂದ್ರಹಾಸ ಕುಂಬಾರರವರಿಗೆ “ಕಲಾ ರತ್ನ” ಪ್ರಶಸ್ತಿ

Suddi Udaya

ಉಜಿರೆ ಸ್ನೇಹಕಿರಣ್ ನರ್ಸರಿ ಶಾಲೆಗೆ ರಕ್ಷಿತ್ ಶಿವರಾಂ ಭೇಟಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹೇಂದ್ರ ಕಂಪನಿಯ ಹೊಸ ಮಾದರಿಯ ಕಾರು ಕೊಡುಗೆ

Suddi Udaya

ಧರ್ಮಸ್ಥಳ: ಕೇಶವ ಗಾಣಿಗ ನಿಧನ

Suddi Udaya

ಉಜಿರೆ: ಪಾಂಡುರಂಗ ಕಾಕತ್ಕರ್ ನಿಧನ

Suddi Udaya
error: Content is protected !!