ಬೆಳ್ತಂಗಡಿ: ಲಾಯಿಲ ಪ್ರಸನ್ನ ಕಾಲೇಜು ಸಮೀಪ ಲಾರಿಯೊಂದು ಚಾಲಕ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಮೇ 13 ರ ತಡರಾತ್ರಿ ನಡೆದಿದೆ.

ರಸ್ತೆ ಕಾಮಗಾರಿ ನಡೆಯುತ್ತಿದ್ದು ರಾತ್ರಿ ಸುರಿದ ಜೋರು ಮಳೆಗೆ ಲಾರಿ ರಸ್ತೆ ಬದಿವಿರುವ ಚರಂಡಿ ಹೋಗಿ ಬಿದ್ದಿದೆ ಎನ್ನಲಾಗಿದೆ. ತೆರವು ಕಾರ್ಯಚರಣೆ ನಡೆಯುತ್ತಿದ್ದು ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ವಾಹನ ದಟ್ಟನೆ ನಿವಾರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.