
ಬೆಳ್ತಂಗಡಿ: ವಿಶ್ವದ ಕೋಟ್ಯಾಂತರ ಭಕ್ತರ ಶ್ರದ್ದಾಕೇಂದ್ರ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಅತಿ ಸುಂದರವಾದ ದೇಗುಲ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿರುವುದು ಇಡೀ ಜಗತ್ತಿಗೆ ಸಂತೋಷವನ್ನುಂಟುಮಾಡಿದೆ.
ಇಂತಹ ಪುಣ್ಯಕ್ಷೇತ್ರದ ಪಕ್ಕದಲ್ಲಿ ದಕ್ಷಿಣದ ಅಯೋಧ್ಯೆಯೆಂದು ಖ್ಯಾತಿ ಹೊಂದಿದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ನ ಶಾಖಾ ಮಠಕ್ಕೆ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಭೂಮಿ ಪೂಜೆ ಹಾಗೂ ಶಿಲಾನ್ಯಾಸವು ಮೇ 19 ರಂದು ನಡೆಯಿತು.


ಸುಮಾರು ರೂ 15 ಕೋಟಿ ವೆಚ್ಚದಲ್ಲಿ, 35 ಸಾವಿರ ಚದರಡಿಯಲ್ಲಿ 4 ಅಂತಸ್ತಿನ ಭವನ ನಿರ್ಮಾಣ. ಶಾಖಾ ಮಠದಲ್ಲಿ ಸತ್ಸಂಗ ಹಾಲ್,ಮೀಟಿಂಗ್ ಹಾಲ್,ಸ್ವಾಮೀಜಿಯ ಕೊಠಡಿ,ಡೈನಿಂಗ್,ಕಿಚನ್,ವಿವಿಐಪಿ,ವಿಐಪಿ ರೂಮ್,ಲಿಪ್ಟ್ ಸೌಲಭ್ಯ, ಮಲ್ಟಿ ಪರ್ಪಸ್ ಹಾಲ್ ನಿರ್ಮಾಣವಾಗಲಿದೆ.


ಭೂಮಿ ಪೂಜೆಯಲ್ಲಿ ಅನೇಕ ವಿಭೂತಿ ಪುರುಷರು, ರಾಷ್ಟ್ರ ಮಟ್ಟದ, ರಾಜ್ಯಮಟ್ಟದ ನೇತಾರರು ಭಾಗವಹಿಸಿದರು. ಪ್ರಧಾನ ವಿಭೂತಿ ಪುರುಷರಾದ ಆಚಾರ್ಯ ಮಾಹಾಮಂಡಲೇಶ್ವರ 1008 ಅವದೇಶಾನಂದ ಗಿರಿಜೀ ಮಹಾರಾಜ್ ಪಂಚದಶನಾಮ್ ಜುಣಾ ಅಖಾಡ, ಮಹಂತ್ ವಿದ್ಯಾನಂದ ಸರಸ್ವತಿಜೀ ಮಹಾರಾಜ್ ಅಂತರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಪಂಚದಶನಾಮ್ ಜುನಾ ಅಖಾಡ., ಮಹಂತ್ ಡಾ| ಸ್ವಾಮಿ ಭರತ್ ದಾಸ್‌ಜೀ ಮಹಾರಾಜ್ ಉದಾಸೀನ್ ಸಂಘತ್ ಋಷಿ ಆಶ್ರಮ್ ರಾಣೋಪಾಲಿ ಅಯೋಧ್ಯೆ,ಮಹಂತ್ ದೇವಾನಂದ್ ಸರಸ್ವತಿಜೀ ಮಹಾರಾಜ್ ಸಚಿವ ಶ್ರೀ ಪಂಚದಶನಾಮ್ ಜುನಾ ಅಖಾಡ ಹರಿದ್ವಾರ, ಮಹಂತ್ ಸುರೇಶ್ ದಾಸ್‌ಜೀ ಮಹಾರಾಜ್ ದಿಗಂಬರ ಅಖಾಡ ಅಯೋಧ್ಯೆ., ಮಹಂತ್ ಕಮಲನಯನ್ ದಾಸ್‌ಜೀ ಮಹಾರಾಜ್ ಚೋಟಿ ಚಾವಣಿ ಅಯೋಧ್ಯೆ, ಮಹಂತ್ ಅವದೇಶ್ ದಾಸ್‌ಜೀ ಮಹಾರಾಜ್ ಬಡಾಭಕ್ತಮಹಲ್ ಅಯೋಧ್ಯಾಧಾಮ್, ಮಹಂತ್ ರಾಜ್‌ಕುಮಾರ್ ದಾಸ್‌ಜೀ ಮಹಾರಾಜ್ ರಾಮವಲ್ಲಭ ಕುಂಜ ಅಯೋಧ್ಯಾಧಾಮ್, ಮಹಂತ್ ಸಂಜಯ್ ದಾಸ್‌ಜೀ ಮಹಾರಾಜ್ ಹನುಮಾನ್‌ಗಡಿ ಅಯೋಧ್ಯಾಧಾಮ್, ಮಹಂತ್ ರಾಜೂದಾಸ್‌ಜೀ ಮಹಾರಾಜ್ ಹನುಮಾನ್‌ಗಡಿ ಅಯೋಧ್ಯಾಧಾಮ್,ಸಚಿವ ಮಾಂಕಲ್ ವೈದ್ಯ,ಶಾಸಕ ಹರೀಶ್ ಪೂಂಜ,ನಿವೃತ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್,ಬೆಸ್ಟ್ ಪೌಂಢೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಕಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ನಿವೃತ ಎಸ್.ಪಿ ಪೀತಾಂಬರ ಹೆರಾಜೆ, ಮಂಗಳೂರು ಕಾರ್ಪೋರೇಟರ್ ಕಿರಣ್ ಕುಮಾರ್, ಉದ್ಯಮಿಗಳಾದ ಸತೀಶ್ಚ್ಚಂದ್ರ ಸಾಲಿಯಾನ್ ಪಾಣಿಲ, ಕರುಣಾಕರ ಸುವರ್ಣ ,ಪ್ರಮುಖರಾದ ಜಯಂತ್ ಕೋಟ್ಯಾನ್, ಪ್ರೀತಮ್ ಧರ್ಮಸ್ಥಳ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ರತ್ನಾಕರ ಬುಣ್ಣನ್, ರಾಜೇಶ್ ಮೂಡುಕೋಡಿ, ಪ್ರೇಮ ಉಮೇಶ್, ಸುಜಾತ ಅಣ್ಣಿ ಪೂಜಾರಿ, ಸಹಕಾರಿ ಅಭಿವೃದ್ದಿ ಅಧಿಕಾರಿ ಪ್ರತೀಮಾ, ರವೀಂದ್ರ ಅರ್ಲ, ತುಕರಾಮ್, ಸೀತರಾಮ ಬೆಲಾಲು, ಜನಾರ್ಧನ ಕುಕ್ಕೇಡಿ, ಜಯಾನಂದ ಕಲ್ಲಾಪು, ಮಹೇಶ್ ಜೆಂಕ್ಯಾರ್, ಯೋಗೀಶ್ ಕೊಕ್ಕಡ, ಹರೀಶ್ ಕಳೆಂಜ, ಸುನಿಲ್ ಉಪ್ಪಿನಂಗಡಿ,ಮಂಜುನಾಥ ಸಾಲಿಯಾನ್, ಮಹಾಬಲ, ಪ್ರವೀಣ್ ಫೆರ್ನಾಂಡೀಸ್ ಉಜಿರೆ, ಪ್ರಶಾಂತ್ ಮಚ್ಚಿನ, ನವೀನ್ ಗರ್ಡಾಡಿ, ರಾಜೇಶ್ ಎಂ.ಕೆ ಕಾಯರ್ತಡ್ಕ, ಬೆಳ್ತಂಗಡಿ ಪತ್ರಕರ್ತರರಾದ ಮನೋಹರ್ ಬಳಂಜ, ಸಂತೋಷ್ ಪಿ ಕೋಟ್ಯಾನ್, ಚೈತ್ರೇಶ್ ಇಳಂತಿಳ, ದೀಪಕ್ ಅಠವಳೆ, ಜಾರಪ್ಪ ಪೂಜಾರಿ, ಭುವನೇಶ್ ಗೇರುಕಟ್ಟೆ ಹಾಗೂ ಬೆಳ್ತಂಗಡಿಯಿಂದ ಸ್ವಾಮೀಜಿಯ ಭಕ್ತರು ಸುಮಾರು200 ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.