September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಂಗ, ಕಾಡುಹಂದಿ, ನವಿಲುಗಳ ಹಾವಳಿಯಿಂದ ಕೃಷಿ ಮತ್ತು ಫಸಲು ನಾಶದ ಬಗ್ಗೆ ಶಾಶ್ವತ ಪರಿಹಾರ ಒದಗಿಸುವಂತೆ ಅರಣ್ಯ ಸಚಿವರಿಗೆ ಬೆಳ್ತಂಗಡಿ ಅಖಿಲ ಭಾರತ ಕಿಸಾನ್ ಮಹಾಸಭಾ ವತಿಯಿಂದ ಮನವಿ ಸಲ್ಲಿಕೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಹುತೇಕ ತಾಲೂಕುಗಳಲ್ಲಿ ಮಂಗಗಳ ಹಾವಳಿಯಿಂದ ಕೃಷಿ ಸಂಪತ್ತು ಕೋಟ್ಯಾಂತರ ರೂ. ಗಳ ಫಸಲು ನಷ್ಟವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸರಕಾರದ ವತಿಯಿಂದ ಮಾಡಬೇಕಾಗಿದೆ. ಸುಮಾರು ಹದಿನಾಲ್ಕು ವರ್ಷಗಳಿಂದ ಮಂಗಗಳ ಹಾವಳಿಯನ್ನು ತಡೆಗಟ್ಟಲು ಮಂಕಿಪಾರ್ಕ್ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅದು ಇಲ್ಲಿಯ ತನಕ ಕಾರ್ಯಗತವಾಗಿಲ್ಲ.

ಮನವಿ ಸಲ್ಲಿಕೆ: ದಿನಾಂಕ 13-08-2024 ರಂದು ದ.ಕ. ಜಿಲ್ಲಾಧಿಕಾರಿ ಮಂಗಳೂರು ಇವರು ತಮ್ಮ ಕಛೇರಿಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆಯನ್ನು ಕರೆದಿರುತ್ತಾರೆ.
ಈ ಸಭೆಯಲ್ಲಿ ಮಂಕಿಪಾರ್ಕ್ ರಚನೆಯ ಬಗ್ಗೆ ಚರ್ಚಿಸುವ ಸಮಯದಲ್ಲಿ ಎಲ್ಲಾ ರೈತ ಮುಖಂಡರು ರೈತರರಿಗೆ ಅವರು ಬೆಳೆಸಿದ ಬೆಳೆಯ ಫಸಲು ಕೈಗೆಬರುವಂತೇ ಮಾಡುವುದೇ ಪರಿಹಾರವೆಂದು ಒಕ್ಕೊರೊಲಿನಿಂದ ಘೋಷಣೆದೊಳಗಿರುತ್ತದೆ. ಕನ್ನಡ ದಿನ ಪತ್ರಿಕೆಯಲ್ಲಿ ಮಂಗಗಳ ಹಾವಳಿಯಿಂದ ಉಂಟಾದ ನಷ್ಟಕ್ಕೆ ಪರಿಹಾರ ಧನವನ್ನು ಒದಗಿಸುವ ಬಗ್ಗೆ ಅರಣ್ಯಾಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ಜಿಲ್ಲಾ ಅರಣ್ಯ ಸಂರಕ್ಷಾಣಾಧಿಕಾರಿಯವರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ. ಈ ಪತ್ರಿಕಾ ಹೇಳಿಕೆಯಲ್ಲಿ” ಹೇಳಿರುವ ವಿಚಾರವು ನಮಗೆ ಒಪ್ಪಿಗೆ ಇರುವುದಿಲ್ಲ. ರೈತರಿಗೆ ಸರಕಾರದಿಂದ ಪರಿಹಾರ ಧನ ನೀಡಿದಲ್ಲಿ ಅದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ರೈತರಿಗೆ ಅವರು ಬೆಳೆಸಿದ ಕೃಷಿಯ ಫಸಲು ಅವರ ಕೈಗೆ ಸಂಪೂರ್ಣವಾಗಿ ಸಿಕ್ಕಿದಲ್ಲಿ ರೈತರ ಆತ್ಮಕ್ಕೆ ತೃಪ್ತಿಯಾಗುತ್ತದೆ. ಹಣದ ರೂಪದಲ್ಲಿ ಸಹಾಯ ಮಾಡಿದಲ್ಲಿ ಅದರಿಂದ ರೈತರಿಗೆ ಆತ್ಮ ಸಂತೋಷ ದೊರೆಯುವುದಿಲ್ಲ ಇದಕ್ಕಾಗಿ ಕೃಷಿ ಫಸಲು ನಾಶದ ಬಗ್ಗೆ ಶಾಶ್ವತ ಪರಿಹಾರವಾಗಿ ಮಂಕಿಪಾರ್ಕ್ ನಿರ್ಮಿಸಿ ನಾಡಿನಿಂದ ಕಾಡಿಗೆ ಮಂಗಗಳನ್ನು ವರ್ಗಾಯಿಸಿದಲ್ಲಿ ರೈತರು ಬೆಳೆಸಿದ ಬೆಳೆಯು ಉಳಿಯುತ್ತದೆ. ಇದರಿಂದ ದೇಶದ ಜನತೆಗೆ ಆಹಾರವು ದೊರೆಯುತ್ತದೆ. ದಿನಂಪ್ರತಿ ಮಂಗಗಳ ಹಾವಳಿಯಿಂದ ರೈತರಿಗೆ ಕೃಷಿಫಸಲು ನಷ್ಟ ಉಂಟಾಗುತ್ತಿರುವುದರಿAದ ಯಾವುದೇ ಸರಕಾರಕ್ಕೂ ಪರಿಹಾರಧನವನ್ನು ನೀಡಲು ಅಸಾಧ್ಯವಾಗಿರುತ್ತದೆ. ಮಂಗಗಳ ಹಾವಳಿಯನ್ನು ತಡೆಗಟ್ಟಲು ವೈಜ್ಞಾನಿಕ ರೀತಿಯಲ್ಲಿ ಮಂಕಿಪಾರ್ಕ್ ನಿರ್ಮಿಸಿ ಅದರಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಬಹುದು.ಅದೇ ರೀತಿ ನವಿಲುಗಳು ಕೃಷಿ ಜಮೀನಿಗೆ ಲಗ್ಗೆ ಇಡುತ್ತಿದ್ದು ಇದರ ನಿಯಂತ್ರಣಕ್ಕೆ ನವಿಲು ಪಾರ್ಕ್ ನಿರ್ಮಾಣಕ್ಕೂ ಕೂಡ ಹಲವಾರು ವರ್ಷಗಳ ಮನವಿ ಮನವಿಯಾಗಿಯೇ ಉಳಿದಿದೆ.
ಹಂದಿ ಹಾಗೂ ಮುಳ್ಳು ಹಂದಿಗಳ ಕಾಟದಿಂದಾಗಿ ಆಗುವ ಕೃಷಿ ನಾಶ ನಷ್ಟಗಳನ್ನು ರಕ್ಷಿಸಲು ಕೋವಿಯನ್ನು ಬಳಸಲು ಅವಕಾಶ ನೀಡುವ ಕುರಿತು ಆದುದರಿಂದ ತಾವು ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಿ ಮನವರಿಕೆ ಮಾಡಿಕೊಟ್ಟು ರೈತರಿಗೆ ಮಂಗಗಳಿಂದಾಗುವ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಶಾಶ್ವತ ಪರಿಹಾರಕ್ಕಾಗಿ ಈ ವಿಷಯವನ್ನು ರಾಜ್ಯ ವಿಧಾನ ಸಭೆಯಲ್ಲಿ ಚರ್ಚಿಸಿ ಮುಖ್ಯ ಮಂತ್ರಿಯವರ ಗಮನಕ್ಕೆ ತರಲು ಪ್ರಯತ್ನಿಸಬೇಕಾಗಿ ಒತ್ತಾಯಿಸಿ ಬೆಳ್ತಂಗಡಿ ಉಪತಹಶೀಲ್ದಾರರ ಮೂಲಕ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಅಖಿಲ ಭಾರತ ಕಿಸಾನ್ ಮಹಾಸಭಾ ಮುಖಂಡರಾದ ರಾಮಣ್ಣ ವಿಟ್ಲ, ಮಹಾವೀರ್ ಜೈನ್, ಸಂಜೀವ ಬೆಳ್ತಂಗಡಿ, ಸುಧಾ ಕೃಷ್ಣ ರಾವ್, ಕುಸುಮಾವತಿ, ಭವಾನಿ ಬಿ.ಎಸ್, ನಾರಾಯಣ ಮಲೆಬೆಟ್ಟು, ಮೇರಿ ಉಜಿರೆ ಉಪಸ್ಥಿತರಿದ್ದರು.

Related posts

ಏ.12: ನೂರಾಳ್ ಬೆಟ್ಟು ಶ್ರೀ ಮಹಾಗಣಪತಿ ದೇವರ ಮೂರ್ತಿ ಪ್ರತಿಷ್ಠೆ ಕಲಶಾಭಿಷೇಕ – ಆಶ್ಲೇಷ ಪೂಜೆ

Suddi Udaya

ಕೊಲ್ಲಿ ದೇವಸ್ಥಾನದ ವಠಾರದಲ್ಲಿ ಸಂಗಮ ಕಲಾವಿದರು ಉಜಿರೆ ಇದರ 14ನೇ ವರ್ಷದ ವಾರ್ಷಿಕೋತ್ಸವ; ಸನ್ಮಾನ

Suddi Udaya

ರಾಜ್ಯದ ಅಡಿಕೆ ಲಾರಿಗಳು ಮಹಾರಾಷ್ಟ್ರದಲ್ಲಿ ಜಪ್ತಿ,ಕರಾವಳಿಯಲ್ಲಿ ಅಡಿಕೆ ಧಾರಣೆ ಕುಸಿತದ ಆತಂಕ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಸಭೆ

Suddi Udaya

ಉಜಿರೆ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಲಾಯಿಲ ಗ್ರಾ.ಪಂ ಮಾಜಿ ಸದಸ್ಯ ಜಗನ್ನಾಥ ನಿಧನ

Suddi Udaya
error: Content is protected !!