28.2 C
ಪುತ್ತೂರು, ಬೆಳ್ತಂಗಡಿ
September 8, 2026
ಅಭಿನಂದನೆ

ಎಸ್ಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ: ಅರಸಿನಮಕ್ಕಿಯ ವಿಜೇತ್ ಗೆ ಬಿಜೆಪಿಯಿಂದ ಸನ್ಮಾನ


ಅರಸಿನಮಕ್ಕಿ: ಇಲ್ಲಿನ ಪಲಸ್ತಡ್ಕದ ನಿವಾಸಿಗಳಾದ ಕೃಷಿ ಕೂಲಿ ಕಾರ್ಮಿಕ ದಂಪತಿ ಸುಂದರಿ- ಸುಕುಮಾರ್ ಶೆಟ್ಟಿಯವರ ಪುತ್ರ ವಿಜೇತ್ ಅರಸಿನಮಕ್ಕಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿ ಎಸ್ಸೆ ಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 612 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರ ಮನೆಗೆ ಅರಸಿನಮಕ್ಕಿಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಶನಿವಾರ ತೆರಳಿ ಅಭಿನಂದಿಸಿದರು.


ಪ್ರತಿಭಾನ್ವಿತ ವಿದ್ಯಾರ್ಥಿಯಾದ ವಿಜೇತ್ ಸಿದ್ಧಿ ವಿನಾಯಕ ಭಜನಾ ತಂಡ ಹೊಸ್ತೋಟದ ಸದಸ್ಯ, ಅರೆಸ್ಸೆಸ್ ನ ಮುಖ್ಯ ಶಿಕ್ಷ ಕ್ ಕೂಡ ಆಗಿದ್ದಾನೆ. ಈತನಿಗೆ ಗುರುವಾಯನಕೆರೆಯ ಎಕ್ಸೆ ಲ್ ಕಾಲೇಜಿನಲ್ಲಿ ಪಿಯುಸಿಗೆ ಉಚಿತವಾಗಿ ಪ್ರವೇಶಾತಿ ದೊರಕಿರುತ್ತದೆ.
ಸನ್ಮಾನ ಸಂದರ್ಭದಲ್ಲಿ ಅರಸಿನಮಕ್ಕಿ ಗ್ರಾ. ಪಂ. ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ. ಎಸ್., ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಹೊಸ್ತೋಟ, ಪ್ರೌಢಶಾಲೆಯ ಎಸ್ ಡಿ. ಎಂ. ಸಿ. ಅಧ್ಯಕ್ಷ ಗಣೇಶ್ ಪಲಸ್ತಡ್ಕ, ವೃಷಾಂಕ್ ಖಾಡಿಲ್ಕರ್, ಶ್ರೀಕಾಂತ್ ಕೆ., ಅಭಿನಯ ಭಟ್ ಮೊದಲಾದವರಿದ್ದರು.

Related posts

ಮುಹಿಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಉಜಿರೆ ಇದರ ನೂತನ ಅಧ್ಯಕ್ಷರಾಗಿ ಸಾಮಾಜಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯುವ ಉದ್ಯಮಿ ಯು.ಹೆಚ್ ಅಬೂಬಕ್ಕರ್ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ:ಪತ್ರಕರ್ತರ ಸಂಘದ ನೂತನ ಕಟ್ಟಡ ಹಾಗೂ ನಿವೇಶನಕ್ಕೆ ರೂ.20 ಲಕ್ಷ ಅನುದಾನ: ಹರೀಶ್ ಪೂಂಜ

Suddi Udaya

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಭಟ್ ಗೆ ಸನ್ಮಾನ

Suddi Udaya

ಗುರುವಾಯನಕೆರೆ: ಎಕ್ಸೆಲ್ ಕಾಲೇಜು ನೀಟ್ ಟಾಪರ್ ಮೌರ್ಯ ವೈ.ಡಿ.ಗೆ ಅದ್ಧೂರಿ ಸನ್ಮಾನ

Suddi Udaya

ಲೋಕೇಶ್ವರಿ ವಿನಯಚಂದ್ರರವರಿಗೆ ಸ್ವಗ್ರಾಮದಲ್ಲಿ ಗೌರವಾರ್ಪಣೆ

Suddi Udaya

ಧಾರ್ಮಿಕ ಚಿಂತಕ ನಿರಂಜನ್ ಜೈನ್ ಕುದ್ಯಾಡಿಯವರಿಗೆ ಸನ್ಮಾನ

Suddi Udaya
error: Content is protected !!