July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ಡಿ.ಡಿ ಮೆನ್ಸ್ & ವಿಮೆನ್ಸ್ ಸೆಂಟರ್ ಮಲ್ಟಿ‌ ಶೋರೂಮ್ ಅದ್ದೂರಿ ಉದ್ಘಾಟನೆ

ಬೆಳ್ತಂಗಡಿ; ವ್ಯಾಪಾರ ವ್ಯವಹಾರ, ನಮ್ಮ ನಡತೆ, ಪಾಲುಗೊಳ್ಳುವಿಕೆ, ಇವುಗಳಲ್ಲಿ ಪ್ರಾಮಾಣಿಕತೆ ಇದ್ದರೆ ನಾವು ತನ್ನಿಂತಾನೇ ಎತ್ತರಕ್ಕೆ ಏರುತ್ತೇವೆ. ನಮ್ಮ ನಡೆಯೇ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಹೇಳಿದರು.

ವಸ್ತ್ರ ವ್ಯಾಪಾರ ಕ್ಷೇತ್ರದಲ್ಲಿ ಸುದೀರ್ಘ ವರ್ಷಗಳ ಅನುಭವ ಹೊಂದಿ, ಈಗಾಗಲೇ ಹಲವು ಶಾಖೆಗಳನ್ನು ತೆರೆದು ವಿಸ್ತಾರವಾಗಿ ಬೆಳೆದಿರುವ ಅತ್ಯಂತ ಜನಪ್ರಿಯ ಮಳಿಗೆ ಧೂಮ್ ಧಮಾಕ, ಡಿ ಡಿ ಗ್ರೂಪ್ಸ್ ಇದರ ವತಿಯಿಂದ ಡಿ.ಡಿ ಮೆನ್ಸ್ & ವಿಮೆನ್ಸ್ಸೆಂಟರ್ ಉಜಿರೆ ಮಲ್ಟಿ ಶೋರೂಮ್ ಉಜಿರೆ ಎಸ್ ಡಿ ಎಂ ಕಾಲೇಜು ರಸ್ತೆಯ ಬೆಳಾಲು ಕ್ರಾಸ್ ಬಳಿಯ ಸಮೃದ್ದಿ ಕಟ್ಟಡದಲ್ಲಿ ಮೇ.31 ರಂದು ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.

ಡಿ.ಡಿಯ ಮಾಲಿಕ ಅಬ್ದುಲ್ ರಝಾಕ್ ಅವರು ಕಠಿಣ ಪರಿಶ್ರಮದಿಂದ ಇಷ್ಟು ದೊಡ್ಡ ಮಟ್ಟಕ್ಕೆ ಏರಿದ್ದಾರೆ ಎಂಬುದನ್ನು ತಿಳಿಯಲು ಸಾಧ್ಯವಾಯಿತು. ರಝಾಕ್ ಅವರು ಮತ್ತು ಮಕ್ಕಳು ಜೊತೆ ಸೇರಿ ವ್ಯವಹಾರ ನಡೆಸುತ್ತಿದ್ದು ಇದೊಂದು ಆದರ್ಶ ಬಂಧುತ್ವ ಎಂದರು. ಮಹಿಳಾ ಉದ್ಯಮ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಸಂಧ್ಯಾ ಫ್ರೆಶ್ ಉಜಿರೆ ಇದರ ಸಿಇಒ ಅರ್ಚನಾ ರಾಜೇಶ್ ಪೈ ಅವರು ಸಂಸ್ಥೆ ನೀಡಿದ “ಉದ್ಯೋಗ ರತ್ನ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವ್ಯಾಪಾರ ಎಂದರೆ ಹಣ ಸಂಪಾದನೆ ಮಾತ್ರ ಅಲ್ಲ. ಜನರ ಪ್ರೀತಿ, ವಿಶ್ವಾಸ ಸಂಪಾದನೆಯ ಉದ್ದೇಶ ಬಹುಮುಖ್ಯವಾದುದು. ಜೊತೆಗೆ ನಾವು ಪೂರ್ತಿ‌ ಬಿಝುಯಾಗಿರುವ ಕ್ಷೇತ್ರವೇ ವ್ಯಾಪಾರ ಎಂದರು. ವ್ಯಾಪಾರದಲ್ಲಿ ನಗರವನ್ನು ನಾವು ಮೀರಿಸುವ ರೀತಿಯ ಸಾಧನೆಯನ್ನು ಉಜಿರೆಯಲ್ಲಿ ದಾಖಲಿಸಬೇಕು ಎಂಬುದು ನನ್ನ ಗುರಿ ಎಂದರು.

ಡಿ.ಡಿ ಸಂಸ್ಥೆಗೆ ಆರಂಭದ ಅವಕಾಶ ಒದಗಿಸಿಕೊಟ್ಟಿದ್ದ ಉಪ್ಪಿನಂಗಡಿಯ ಹಿರಿಯ ಉದ್ಯಮಿ ‘ಸಚಿನ್’ ಸುಂದರ ಗೌಡ ಮಾತನಾಡಿ, ಉಪ್ಪಿನಂಗಡಿಯ ನಮ್ಮ ಮಳಿಗೆಯ‌ ಎದುರು ರಝಾಕ್ ಅವರು ಬೀದಿ‌ಬದಿ ಸ್ಟ್ಯಾಂಡ್ ಇಟ್ಟು‌ ವ್ಯಾಪಾರ ಮಾಡುತ್ತಿದ್ದುದು ನಿಜ. ನಾನು ಅವರ ಸಜ್ಜನಿಕೆ ಕಂಡು ನಮ್ಮ ಕಟ್ಟಡದಲ್ಲಿ ಅವಕಾಶ ಕೊಟ್ಟಿದ್ದೆ. ಅವರು ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ಹರ್ಷ ತಂದಿದೆ. ಅವರ ಏಳಿಗೆ‌ಕಂಡು ಪುಳಕಿತನಾಗಿದ್ದೇನೆ. ಅವರಂತೆಯೇ ಅವರ ಮಕ್ಕಳೂ‌ ಕೂಡ ಶ್ರಮಜೀವಿಗಳು ಎಂದರು.ಆಲ್ ಇಂಡಿಯಾ ಕ್ಯಾಥೊಲಿಕ್ ಯೂನಿಯನ್ ನಿಕಟಪೂರ್ವ ರಾಜ್ಯಾಧ್ಯಕ್ಷ ಸೇವಿಯರ್ ಪಾಲೇಲಿ ಮಾತನಾಡಿ, ಯಶಸ್ಸು ತನ್ನಿಂತಾನೇ ಬರುವುದಿಲ್ಲ. ಅದರ ಹಿಂದೆ ದೊಡ್ಡ ಸಾಹಸವೇ ಇರುತ್ತದೆ. ಶ್ರಮಪಟ್ಟು ಯಶಸ್ವು ಕಂಡುಕೊಳ್ಳಬೇಕು.

ಆ ನಿಟ್ಟಿನಲ್ಲಿ ರಝಾಕ್ ಮತ್ತು ಅವರ ನಾಲ್ವರು ಮಕ್ಕಳ‌ ಈ ಶ್ರಮ ಅನುಕರಣೀಯ ಎಂದರು. ಉಜಿರೆ ಸಹಕಾರಿ ಸಂಘದ ಅಧ್ಯಕ್ಷ ಕೇರಿಮಾರ್‌ ಬಾಲಕೃಷ್ಣ ಗೌಡ ಮಾತಮಾಡಿ, ವ್ಯವಹಾರದಲ್ಲಿ ಸತ್ಯ, ನಿಷ್ಠೆ, ಧರ್ಮ ಬೇಕು. ಅದನ್ನು ಪಾಲಿಸಿದ್ದರಿಂದ ಡಿ.ಡಿ ಸಂಸ್ಥೆ ಇಷ್ಟು ವಿಶಾಲವಾಗಿ ಬೆಳೆದಿದೆ ಎಂದರು.

ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಶಾಂತಾ ಬಂಗೇರ ಮಾತನಾಡಿ, ತಂದೆ ಮಕ್ಕಳ ಒಗ್ಗಟ್ಟಿನ ಫಲವಾಗಿ ಈ ಸಂಸ್ಥೆ ಇಷ್ಟೊಂದು ಮೇಲೆ‌ಬಂದಿದೆ. ಇದರ ಇನ್ನಷ್ಟು ಶಾಖೆಗಳು ವಿಸ್ತಾರವಾಗಲಿ ಎಂದರು. ಹಳ್ಳಿಮ‌ನೆ ಪ್ರವೀಣ್ ಮಾತನಾಡಿ, ಇಂದು ಜಿಲ್ಲೆಯಲ್ಲಿ ಭಯದ ವಾತಾವರಣ ಇದ್ದರೂ ಈ ಒಂದು ಕಾರ್ಯಲ್ರಮದಲ್ಲಿ ಸೌಹಾರ್ದತೆಯ ಆದರ್ಶ ಮೇಳೈಸಿದೆ. ಸ್ಥಾಪಕ ಅವಕಾಶ ನೀಡಿದ ಸುಂದರ ಗೌಡ ಅವರನ್ನು ಗೌರವಿಸಿದ್ದು ರಾಜ್ಯಕ್ಕೆ ಮಾದರಿ ಎಂದರು.ಸುಪ್ರಿಂ ಸೆಂಟರ್ ಉಜಿರೆ ಮಾಲಕ ಅಬೂಬಕ್ಕರ್ ಮತ್ತು ಪಡಂಗಡಿ‌ ಗ್ರಾ.ಪಂ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್ ಸಂದರ್ಭೋಚಿತವಾಗಿ ಶುಭ ಕೋರಿದರು.

ಉಜಿರೆ ಗ್ರಾ.ಪಂ ಅಧ್ಯಕ್ಷೆ ಉಷಾಕಿರಣ ಕಾರಂತ, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಮಾಜಿ ಅಧ್ಯಕ್ಷ ಯು.ಎ ಹಮೀದ್, ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ, ಮಾಚಾರು ಮಸ್ಜಿದ್ ಅಧ್ಯಕ್ಷ ಬಿ.ಎಂ ಇಲ್ಯಾಸ್, ಗುರುವಾಯನಕೆರೆ ಮಸ್ಜಿದ್ ಅಧ್ಯಕ್ಷ ಹಾಜಿ‌ ಅಬ್ದುಲ್ ಲತೀಫ್, ಶ್ಯಾಂ ಸುಂದರ್ ಉಜಿರೆ, ಎ.ಎಮ್ ಕನ್ಟ್ರಕ್ಷನ್ ಚಿಕ್ಕಮಗಳೂರು ಮಾಲಕ ರಫೀಕ್, ವಂದನಾ ಲ್ಯಾಬೊರೇಟರಿ ಮಾಲಕಿ ಸವಿತಾ ರಮೇಶ್ ಇವರು ಭಾಗವಹಿಸಿದ್ದರು.ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದರು. ಡಿ.ಡಿ ಸಂಸ್ಥೆಯ ಮಾಲಿಕ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅವರ ಪತ್ನಿ ಅಲಿಮಮ್ಮ, ನಾಲ್ವರು ಮಕ್ಕಳಾದ ಇರ್ಫಾನ್, ಇಮ್ರಾನ್, ಸಿನಾನ್ ಮತ್ತು ಶಿಮ್ರಾನ್ ಹಾಗೂ ಮನೆಯವರು ಎಲ್ಲಾ ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು.

ಮಳಿಗೆಯ ವಿಶೇಷತೆ;ವಿಶಾಲವಾದ ಶೋರೂಮ್, ಒಂದೇ ಸೂರಿನಡಿ ಪುರುಷ- ಮಹಿಳೆಯರ, ಮಕ್ಕಳ ವಸ್ರ್ತಗಳ ಪ್ರತ್ಯೇಕ ಕೌಂಟರ್, ಪ್ರಖ್ಯಾತ ಕಂಪೆನಿಗಳ ವಸ್ರ್ತಗಳ ಅಪೂರ್ವ ಸಂಗ್ರಹ, ಜನಸಾಮಾನ್ಯರ ಆಯ್ಕೆಯ ವಸ್ರ್ತಗಳೂ ಯತೇಚ್ಚ ಲಭ್ಯತೆ, ಮೋಲ್ ಮಾದರಿಯಲ್ಲಿ ಗ್ರಾಹಕರಿಗೆ ಬೇಕಾದ್ದನ್ನು ಆರಿಸುವ ಮುಕ್ತ ಅವಕಾಶ, ಗ್ರಾಹಕರಿಗೆ ವಾಶ್ ರೂಂ ಮತ್ತು ಲೇಡಿಸ್ ಕಾರ್ನರ್ ಎಲ್ಲಾ ಸೌಕರ್ಯಗಳನ್ನೂ ಒಳಗೊಂಡು ಮಾದರಿಯಾಗಿದೆ. ಒನ್ ಗ್ರಾಂ ಗೋಲ್ಡ್ ಮತ್ತು ಆಂಟಿಕ್ ಮಾದರಿಯ ಆಭರಣಗಳು, ಮಹಿಳೆಯರ‌ ಸ್ಡೈಲಿಶ್ ಬ್ಯಾಗ್‌ಗಳು, ಚಪ್ಪಲ್ ಮತ್ತು ಶೂಸ್ ಗಳನ್ನೂ ಒಂದೇ ಕಡೆ ಆಯ್ಕೆ ಮಾಡುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.

ಸಯ್ಯಿದ್ ಕಾಜೂರು ತಂಙಳ್ ದುಆ ಆಶೀರ್ವಚನಗೈದರು. ಸಯ್ಯಿದ್ ತ್ವಾಹಾ ಜಿಫ್ರಿ ತಂಙಳ್ ದಾರುಸ್ಸಲಾಂ ಬೆಳ್ತಂಗಡಿ ಶುಭಾಶೀರ್ವಾದಗೈದರು.ಬೆಳ್ತಂಗಡಿ ಮಸ್ಜಿದ್, ಹಳೆಪೇಟೆ ಮತ್ತು ಟೌನ್ ಮಸ್ಜಿದ್ ಧರ್ಮಗುರುಗಳು ಭಾಗಿಯಾಗಿದ್ದರು.

ಉಪ್ಪಿನಂಗಡಿಯ ಪ್ರಥಮ ಮಳಿಗೆಯಿಂದ ತನ್ನ ಚೈತ್ರ ಯಾತ್ರೆ ಆರಂಭಿಸಿರುವ ಡಿ.ಡಿ (ಧೂಮ್ ಧಮಾಕಾ) ಇಂದು ಉಪ್ಪಿನಂಗಡಿ, ಬೆಳ್ತಂಗಡಿ, ಮಡಂತ್ಯಾರು, ಗುರುವಾಯನಕೆರೆ, ಮೂಡಿಗೆರೆ,‌ ಚಿಕ್ಕಮಗಳೂರು ಇಲ್ಲೆಲ್ಲಾ ಶಾಖೆಗಳನ್ನು ಹೊಂದಿದ್ದು ಗ್ರಾಹಕ ಸ್ನೇಹಿಯಾಗಿ, ವಿಶ್ವಾಸಾರ್ಹತೆ ಮೂಲಕ ಬೆಳೆದು ನಿಂತಿದೆ.

Related posts

ನಿರೀಕ್ಷೆಗೆ ನಿರಾಸೆ ತಂದ ಸತ್ವಹೀನ ಬಜೆಟ್ : ಹರೀಶ್ ಪೂಂಜ

Suddi Udaya

ಮಡಂತ್ಯಾರು: ಶ್ರೀ ರಾಮ ನಗರ ಹಾರಬೆ ದುಗಲಾಯ ಮತ್ತು ಗುಳಿಗ ದೈವಗಳ ವಾರ್ಷಿಕ ನೇಮೋತ್ಸವ: ಗಣಹೋಮ, ನಾಗ ದೇವರಿಗೆ ನಾಗ ತಂಬಿಲ ಸೇವೆ

Suddi Udaya

ಹೆದ್ದಾರಿ ಕಾಮಗಾರಿಯನ್ನು ಕಕ್ಕಿಂಜೆ ಪೇಟೆ ಮೂಲಕ ಮಾಡುವಂತೆ ಆಗ್ರಹ: ಬೈಪಾಸ್ ರಸ್ತೆ ಬೇಡ: ಪೇಟೆಯ ವರ್ತಕರ ಬೆಂಬಲ ಇದೆ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ ಪ್ರಾರಂಭ

Suddi Udaya

ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

Suddi Udaya
error: Content is protected !!