July 23, 2026
ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಮಸ್ಯೆ

ಕಡಿರುದ್ಯಾವರ: ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು: ಅಪಾರ ಕೃಷಿ ನಾಶ

ಕಡಿರುದ್ಯಾವರ: ಇಲ್ಲಿಯ ಶೆಟ್ಟಿಪಾಲು ಎಂಬಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟುಮಾಡಿದ ಘಟನೆ ಸಂಭವಿಸಿದೆ.

ಇಲ್ಲಿನ ನಿವಾಸಿಗಳಾದ ಚಿನ್ನಮ್ಮ, ಪುರಂದರ ಮೊಯಿಲಿ ಹಾಗೂ ಶೈಜು ಎಂಬವರ ತೋಟಗಳಿಗೆ ಆನೆಗಳ ಹಿಂಡು ನುಗ್ಗಿದೆ. ತೋಟದಲ್ಲಿದ್ದ ತೆಂಗಿನ ಮರ, ಅಡಿಕೆಮರಗಳನ್ನು ಹಾಗೂ ಬಾಳೆಯನ್ನು ನೆಲಕ್ಕೆ ಉರುಳಿಸಿದೆ.ಕಳೆದ ಕೆಲದಿನಗಳಿಂದಲೂ ಈ ಪ್ರದೇಶದಲ್ಲಿ ಕಾಡಾನೆಗಳು ತಿರುಗಾಟ ನಡೆಸುತ್ತಿದ್ದು ಆಗಾಗ ತೋಟಗಳಿಗೆ ನುಗ್ಗುತ್ತಿದೆ.

ಕಾಡಾನೆಗಳ ಅಟ್ಟಹಾಸ ಮಿತಿ ಮೀರುತ್ತಿದ್ದು ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ.

Related posts

ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಬೆಳ್ತಂಗಡಿ ಮಹಾಸಭೆ

Suddi Udaya

ಹೊಸಂಗಡಿ: ಭೀಮ್ ಆರ್ಮಿ ಸಂಘಟನೆ ಉದ್ಘಾಟನೆ

Suddi Udaya

ಜಿಲ್ಲಾಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟ: ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ

Suddi Udaya

ಚಿನ್ನವನ್ನು ತೊಳೆದುಕೊಡುವುದಾಗಿ ಹೇಳಿದಾತ ಸರದೊಂದಿಗೆ ಪರಾರಿ

Suddi Udaya

ಪುಂಜಾಲಕಟ್ಟೆ ಸ. ಪ್ರ. ದರ್ಜೆ ಕಾಲೇಜಿನ ಮೂಲಭೂತ ಸೌಕರ್ಯದ ಉದ್ದೇಶಕ್ಕೆ ಸರಕಾರದಿಂದ ರೂ. 1 ಕೋಟಿ ಅನುದಾನ ಬಿಡುಗಡೆ : ಹರೀಶ್ ಪೂಂಜ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ 28ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!