25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸುಲ್ಕೇರಿ: ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆ

ಸುಲ್ಕೇರಿ: ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿ, ಶ್ರೀರಾಮ ಪ್ರೌಢಶಾಲೆ ಸುಲ್ಕೇರಿಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗಿನ ೬೭೦ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳಿಗೆ ಸುಮಾರು ಅಂದಾಜು ರೂ.3.5 ಲಕ್ಷ ವೆಚ್ಚದ ಉಚಿತ ಬರೆಯುವ ಪುಸ್ತಕವನ್ನು ನೀಡಿರುವ ಪುಷ್ಪಗಿರಿ ಶ್ರೀದೇವಿ ನೆರವಿನ ನೆರಳು ಸೇವಾ ಪ್ರತಿಷ್ಠಾನ ಉರುವಾಲು, ಬೆಳ್ತಂಗಡಿ ಇದರ ಅಧ್ಯಕ್ಷರು, ಸಮಾಜ ಸೇವಕರು ಬೆಂಗಳೂರಿನ ಉದ್ಯಮಿ ಕಿರಣ್‌ಚಂದ್ರ ಡಿ. ಪುಷ್ಪಗಿರಿ ಉರುವಾಲು ಮತ್ತು ಆರ್ ದೇವರಾಯ ಪ್ರಭು ಜನಬಿಂಬ ಪತ್ರಿಕೆಯ ಸಂಪಾದಕರು, ಹೊಸ ಸಂಜೆ ಬಳಗದ ಅಧ್ಯಕ್ಷರು ಸಮಾಜಸೇವಕರು ಇವರು ವಿದ್ಯಾರ್ಥಿಗಳಿಗೆ ಪುಸ್ತಕ ಹಸ್ತಾಂತರಿಸಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜು ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಶಾಂತ್ ಆಚಾರ್ಯ ಸಂಚಾಲಕರು ಟೈಮ್ಸ್ ಆಫ್ ಕಾರ್ಕಳ, ಪ್ರವೀಣ್ ಗೌಡ ಸದಸ್ಯರು ಗ್ರಾಮ ಪಂಚಾಯತ್ ಕಣಿಯೂರು, ಜಗದೀಶ್ ಗೌಡ ಪ್ರಗತಿಪರ ಕೃಷಿಕರು ದಿಡುಪೆ, ಭರತ್ ಗೌಡ ಪ್ರಗತಿಪರ ಕೃಷಿಕರು ಕಣಿಯೂರು ಭಾಗಿಯಾಗಿದ್ದರು.

ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಶಿಕ್ಷಕರಾದ ಸತೀಶ್ ಕುಮಾರ್ ಎನ್. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಶ್ರೀರಾಮ ಪ್ರೌಢಶಾಲಾ ಮುಖ್ಯಗುರು ಪ್ರಮೋದ್ ಕುಮಾರ್ ಧನ್ಯವಾದವಿತ್ತರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya

ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಜಯಾನಂದ ಕಲ್ಲಾಪು, ಉಪಾಧ್ಯಕ್ಷರಾಗಿ ಸುನಿಲ್ ಅಣವು

Suddi Udaya

ಕೊಕ್ಕಡ: ಪಲಸ್ತಡ್ಕ ರಕ್ಷಿತಾರಣ್ಯದಿಂದ ಮರ ಕಳವು ಭೇದಿಸಿದ ಅರಣ್ಯ ಇಲಾಖೆ: ಬಂಧಿಸಲಾಗಿದ್ದ ಆರೋಪಿ ಪ್ರಕಾಶ್ ಜಾಮೀನು ಮೇಲೆ ಬಿಡುಗಡೆ

Suddi Udaya

ದೀಪಾವಳಿ ಗೋ ಪೂಜೆ ಪ್ರಯುಕ್ತ ಡಾ| ಡಿ. ವೀರೇಂದ್ರ ಹೆಗ್ಗಡೆ ದಂಪತಿಯಿಂದ ಗೋವುಗಳಿಗೆ ಉಪಾಹಾರ

Suddi Udaya

ಅ.10: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಮಡಂತ್ಯಾರು ಹಾಗೂ ಬಳ್ಳಮಂಜ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಕಣಿಯೂರು: ಮಾವಿನಕಟ್ಟೆ ನಿವಾಸಿ ವಿಮಲ ಶೆಟ್ಟಿ ನಿಧನ

Suddi Udaya
error: Content is protected !!