25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಮ್ಯಾಂಗೋ ಜ್ಯೂಸ್‌ನಲ್ಲಿ ಇಲಿ ಪಾಷಾಣ ಸೇವಿಸಿದ್ದ ಯುವಕ ಮೊಹಮ್ಮದ್ ಫೈಝಲ್‌ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಪಡಂಗಡಿ: ಮ್ಯಾಂಗೋ ಜ್ಯೂಸ್‌ನಲ್ಲಿ ಇಲಿ ಪಾಷಾಣವನ್ನು ಸೇವೆಸಿದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜೂ.6ರಂದು ವರದಿಯಾಗಿದೆ.

ಪಡಂಗಡಿ ಗ್ರಾಮದ ಇಬ್ರಾಹಿಂ ಮತ್ತು ನಸೀಮಾ ದಂಪತಿ ಪುತ್ರ ಮೊಹಮ್ಮದ್ ಫೈಝಲ್ (21ವ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರಾಗಿದ್ದಾರೆ.

ಘಟನೆ ಬಗ್ಗೆ ಪಡಂಗಂಡಿಯ ಅಹಮ್ಮದ್ ಬಾವ ಅವರು ಬೆಳ್ತಂಗಡಿ ಠಾಣೆಗೆ ನೀಡಿರುವ ದೂರಿನಲ್ಲಿ ನನ್ನ ಮಾವನ ಮಗಳು ನಸೀಮಾರವರ ಪುತ್ರ ಮೊಹಮ್ಮದ್ ಫೈಝಲ್ ಮೇ 29 ರಂದು ಮ್ಯಾಂಗೋ ಜ್ಯೂಸ್‌ನಲ್ಲಿ ಇಲಿ ಪಾಷಾಣವನ್ನು ಸೇವಿಸಿರುವುದಾಗಿ ಮೊಹಮ್ಮದ್ ಫೈಝಲ್‌ನ ತಂದೆ ಇಬ್ರಾಹಿಂ ಕರೆ ಮಾಡಿ ತಿಳಿಸಿದ್ದು, ಕೂಡಲೇ ಮೊಹಮ್ಮದ್ ಫೈಝಲ್‌ನನ್ನು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಲ್ಲಿದ್ದ ಮೊಹಮ್ಮದ್ ಫೈಝಲ್ ಜೂ. 6ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶಿಬಾಜೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿ ಮನೆಗೆ ಮೆಸ್ಕಾಂ ವಿಜಿಲೆನ್ಸ್ ಎ ಡಬ್ಲ್ಯೂ ಇ ಪ್ರವೀಣ್ ಹಾಗೂ ಮೆಸ್ಕಾಂ ವಿಜಿಲೆನ್ಸ್ ಪೊಲೀಸ್ ಭೇಟಿ

Suddi Udaya

ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ: ಮಚ್ಚಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಕಕ್ಕಿಂಜೆ ಸ.ಪ್ರೌ. ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ದಿನಾಚರಣೆ

Suddi Udaya

ಬಳಂಜ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಉಜಿರೆಯ ಸಿದ್ಧವನದಲ್ಲಿ ಶಂಕರ ಜಯಂತಿ

Suddi Udaya

ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಅಧ್ಯಯನ ಪ್ರವಾಸ

Suddi Udaya
error: Content is protected !!