25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಉಚಿತ ಪುಸ್ತಕ, ಬ್ಯಾಗ್ ವಿತರಣೆ

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ 558 ನೇ ಸೇವಾ ಯೋಜನೆ ಅಂಗವಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಪಿನಡ್ಕ ಬಳಂಜ ಮಕ್ಕಳಿಗೆ ಉಚಿತ ಪುಸ್ತಕ ಮತ್ತು ಬ್ಯಾಗ್ ವಿತರಣೆ ಜೂ. 8ರಂದು ಕಾಪಿನಡ್ಕ ಸ.ಕಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪುಸ್ತಕ ಮತ್ತು ಬ್ಯಾಗ್ ವಿತರಣೆ ಮಾಡಿ ಮಾತನಾಡಿದ ಪತ್ರಿಕೆಯ ವರದಿಗಾರ , ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಮನೋಹರ್ ಬಳಂಜ ಮಾತನಾಡಿ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಊರಿನ ಸಂಘ ಸಂಸ್ಥೆಗಳು ಮತ್ತು ಹಳೆ ವಿದ್ಯಾರ್ಥಿಗಳದ್ದು. ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು ಸರಕಾರದ ಅನೇಕ ಸೌಲಭ್ಯಗಳು ಸಿಗುತ್ತಿದೆ. ಮಕ್ಕಳ ಸಂಖ್ಯೆ ಕಡಿಮೆಯಾದರೆ ಮಾತ್ರ ಅನುದಾನ ಕಡಿತವಾಗುತ್ತದೆ. ಆಗ ಸಂಘ ಸಂಸ್ಥೆಗಳು ಕೈಜೊಡಿಸಿದಾಗ ಮಕ್ಕಳಿಗೆ ನೆರವಾಗುತ್ತದೆ. ರಾಜಕೇಸರಿ ಸಂಘಟನೆ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ನೊಂದವರಿಗೆ ನೆರವು, ಸರಕಾರಿ ಶಾಲೆಯ ಅಭಿವೃದ್ಧಿ, ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಇನ್ನಿತರ ಸಮಾಜಮುಖಿ ಕಾರ್ಯ ಮಾಡುತ್ತಿದ್ದು ಇದು ನೈಜ ಸಮಾಜಸೇವೆಯಾಗಿದೆ. ಇವರೊಂದಿಗೆ ಇನ್ನಷ್ಟು ದಾನಿಗಳು ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಗುರುವಾಯನಕೆರೆ, ಪ್ರಧಾನ ಸಂಚಾಲಕರಾದ ಜಗದೀಶ್ ಲಾಯಿಲ, ಸಹ ಸಂಚಾಲಕರಾದ ಶರತ್ ಕರಾಯ, ಸಾಮಾಜಿಕ ಜಾಲತಾಣದ ಸಂಪತ್, ಸಾಂಸ್ಕೃತಿಕ ಕಾರ್ಯದರ್ಶಿ ದೇವರಾಜ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾದ ವಿನೋದ್ ಲಾಯಿಲ,
ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್ ಪೂಜಾರಿ, ಗೆಳೆಯರ ಬಳಗ ಕಾಪಿನಡ್ಕ ಇದರ ಕಾರ್ಯದರ್ಶಿಯಾದ ಯತೀಶ್, ಶಿಕ್ಷಕಿ ಅನಿತಾ, ಮತ್ತು ಮಕ್ಕಳ ಪೋಷಕರು ಉಪಸ್ಥಿತಿತರಿದ್ದರು.


ಶಿಕ್ಷಕಿಯಾದ ಶಾಂತಿವಾಸ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿಯಾದ ಅನುಷಾ ವಂದಿಸಿದರು.

Related posts

ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಖಂಡಿಸಿ ಬೆಳಾಲು ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಬೆದ್ರಬೆಟ್ಟು ಮರಿಯಾಂಬಿಕ ಆಂ.ಮಾ. ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ವನ ಮಹೋತ್ಸವದ ಆಚರಣೆ

Suddi Udaya

ಪಹಣಿಗಳಿಗೆ ಆಧಾರ್ ಸೀಡಿಂಗ್ ಕಡ್ಡಾಯ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆ : ಮರ ಸಹಿತ ಗುಡ್ಡ ಕುಸಿತ ತೆರವು

Suddi Udaya

ನಾವೂರು : ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಉಜಿರೆ ಪೇಟೆಯಲ್ಲಿ ಪಾರ್ಕಿಂಗ್ ಸುವ್ಯವಸ್ಥೆ ಕುರಿತು ಸಭೆ

Suddi Udaya
error: Content is protected !!