25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಉಜಿರೆ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಜೂ.11 ರಂದು ನಡೆದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ ಮಾತನಾಡುತ್ತ, ನಮ್ಮ ದೈಹಿಕ ಕ್ಷಮತೆ ನಮ್ಮ ಮೂಳೆಯ ಮೇಲೆ ಅವಲಂಬಿತವಾಗಿರುತ್ತದೆ. ಸದೃಢವಾದ ಎಲುಬು ಮತ್ತು ಮೂಳೆಗಳಿಂದ ನಮ್ಮ ದೇಹವೂ ಕೂಡ ಸದೃಢವಾಗಿರುತ್ತದೆ. ಅದಕ್ಕಾಗಿ ವರ್ಷಕೊಮ್ಮೆಯಾದರೂ ನಾವು ಇಂಥ ಶಿಬಿರದಲ್ಲಿ ಪಾಲ್ಗೊಂಡು ನಮ್ಮ ಮೂಳೆ ಸಾಂದ್ರತೆಯನ್ನು ಪರೀಕ್ಷಿಸಿ ನಿಖರವಾದ ದೃಢತೆಯನ್ನು ತಿಳಿದು ಏನಾದರೂ ಕೊರತೆಯಿದ್ದಲ್ಲಿ ತಜ್ಞ ವೈದ್ಯರಿಂದ ಸೂಕ್ತ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿ ಈ ಕಾರ್ಯಕ್ರಮದ ಪ್ರಯೋಜನವನ್ನು ಹೆಚ್ಚು ಹೆಚ್ಚಾಗಿ ಪಡೆದುಕೂಳ್ಳಬೇಕೆಂದು ಕರೆ ನೀಡಿದರು.


ಬೆನಕ ಆಸ್ಪತ್ರೆಯ ಎಲುಬು ಕೀಲು ತಜ್ಞರು ಮತ್ತು ಕೈ ಮೈಕ್ರೋಸರ್ಜರಿ ಪರಿಣಿತರಾದ ಡಾ. ರೋಹಿತ್ ಜಿ.ಕೆ. ಯವರು ಮಾತನಾಡುತ್ತ ನಮ್ಮ ಆರೋಗ್ಯದ ಮೇಲೆ ಮೂಳೆ ಸಾಂದ್ರತೆ ಯಾವ ರೀತಿ ಪರಿಣಾಮವನ್ನು ಬೀಳುತ್ತದೆ ಎಂದು ಉದಾಹರಣೆಗಳ ಸಮೇತ ವಿವರಿಸಿದರು. ಮತ್ತು ಎಲುಬು ಮೂಳೆಗಳ ಕಡಿಮೆ ಕ್ಷಮತೆಯಿಂದ ಯಾವ ರೀತಿಯ ಸಮಸ್ಯೆಗಳು ನಮ್ಮ ಶರೀರದ ಮೇಲೆ ಆಗುತ್ತದೆಂದು ವಿವರಣೆ ನೀಡಿದರು.


ಡಾ. ಭಾರತಿ ಜಿ.ಕೆ. ಕಾರ್ಯಕ್ರಮದ ಪ್ರಸ್ತಾವನೆಗೈದು ವಂದಿಸಿದರು. ಆಸ್ಪತ್ರೆಯ ಪಿಆರ್‌ಒ ಎಸ್.ಜಿ. ಭಟ್ ಸ್ವಾಗತಿಸಿ ನಿರೂಪಿಸಿದರು.

Related posts

ಶಿರ್ಲಾಲು: ಅಂಗಡಿಗೆ ಬಿದ್ದ ಬೃಹತ್ ಗಾತ್ರದ ಮರ, ಅಪಾರ ಹಾನಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ರೋಗ ತಪಾಸಣಾ ಶಿಬಿರ

Suddi Udaya

ಇಂದಬೆಟ್ಟು: ಸ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಕೃಷಿ ತೋಟಗಳಿಗೆ ಹಾನಿ ಮಾಡುವ ಕಾಡಾನೆಗಳ ತಡೆಗೆ ಅರಣ್ಯ ಇಲಾಖೆಯಿಂದ ಜೋತಾಡುವ ಸೌರ ವಿದ್ಯುತ್ ಬೇಲಿ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯದ ಮಾಹಿತಿ ಕಾರ್ಯಕ್ರಮ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್

Suddi Udaya
error: Content is protected !!