23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜಿನಲ್ಲಿ ʼಎಮ್ಯುಲೇಶನ್‌ʼ ಕಾರ್ಯಕ್ರಮ

ಉಜಿರೆ: ಇಲ್ಲಿನ ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ʼಎಮ್ಯುಲೇಶನ್‌ʼ ನಡೆಯಿತು.


ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.‌ ಎಂಜನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಶನ್‌ ವಿಭಾಗದ ಅಧ್ಯಾಪಕರಾದ ಅಮೀತ್‌ ಜೈನ್‌ ಮತ್ತು ಎಸ್.ಡಿ.ಎಮ್.‌ ನ್ಯಾಚುರೋಪತಿ ಕಾಲೇಜಿನ ಬಯೋಕೆಮಿಸ್ಟ್ರಿ ಅಧ್ಯಾಪಕ ಡಾ.ಬಾಲಕೃಷ್ಣ ಶೆಟ್ಟಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದರು.


ಮುಖ್ಯ ಅಭ್ಯಾಗತರಾಗಿದ್ದ ಅಮೀತ್‌ ಜೈನ್‌ ಮಾತನಾಡಿ ಎಂಜನಿಯರಿಂಗ್‌ ವಿಭಾಗದ ಪ್ರಾಮುಖ್ಯತೆ, ವ್ಯಾಪ್ತಿ ಮತ್ತು ಭವಿಷ್ಯದಲ್ಲಿ ಎಂಜನಿಯರಿಂಗ್‌ ಕೋರ್ಸ್ ಗೆ ಇರುವ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇನ್ನೋರ್ವ ಅಭ್ಯಾಗತರಾಗಿದ್ದ ಎಸ್.ಡಿ.ಎಮ್.‌ ನ್ಯಾಚುರೋಪತಿ ಕಾಲೇಜಿನ ಅಧ್ಯಾಪಕ ಡಾ.ಬಾಲಕೃಷ್ಣ ಶೆಟ್ಟಿ ಮಾತನಾಡುತ್ತಾ ವೈದ್ಯಕೀಯ ಕೋರ್ಸ್ ನ ಬಗ್ಗೆ ,ಕೋರ್ಸ್ ಗೆ ಸೇರಲು ಇರುವ ಮಾರ್ಗಗಳು ಮತ್ತು ಅದನ್ನು ಸಾಧಿಸಲು ಬೇಕಾದ ಅಗತ್ಯ ಪೂರ್ವ ಸಿದ್ಧತಾ ಕ್ರಮಗಳ ಬಗ್ಗೆ ಮನದಟ್ಟು ಮಾಡಿ ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಸಾಧನೆ ಮಾಡಿದಾಗ ಮಾತ್ರ ಕಾಲೇಜಿನ ಮತ್ತು ಉಪನ್ಯಾಸಕರ ಶ್ರಮಕ್ಕೆ ಬೆಲೆ ಬರುತ್ತದೆ ಆ ನಿಟ್ಟಿನಲ್ಲಿ ನಿಮ್ಮ ಸಾಧನೆ ಉಳಿದವರಿಗೂ ಪ್ರೇರಣೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್‌ ಕುಮಾರ್‌ ಬಿ ಮಾತನಾಡಿ ಸ್ಪರ್ಧಾತ್ಮಕ ತರಗತಿಗಳನ್ನು ವಿದ್ಯಾರ್ಥಿಗಳು ಅತ್ಯಂತ ಗಂಭೀರವಾಗಿ ತೆಗೆದುಕೊಂಡು, ಮೊದಲ ದಿನದಿಂದಲೇ ಕಠಿಣ ಪರಿಶ್ರಮ ವಹಿಸಿ ಅಭ್ಯಸಿಸಿದರೆ ನೀವು ಅಂದುಕೊಂಡ ಗುರಿ ಸುಲಭವಾಗಿ ತಲುಪ ಬಹುದು ಎಂದು ನುಡಿದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾಲೇಜಿನ ಸ್ಪರ್ಧಾತ್ಮಕ ತರಬೇತಿ ತರಗತಿಗಳ ಮುಖ್ಯ ಸಂಯೋಜಕರಾದ, ಮಂಗಳೂರಿನ ಶ್ರುತ ಅಕಾಡೆಮಿಯ ಸ್ಥಾಪಕ ಡಾ.ಶ್ರುತಕೀರ್ತಿರಾಜ ಸ್ಪರ್ಧಾತ್ಮಕ ತರಬೇತಿಗಳು ನಡೆಯುವ ಬಗ್ಗೆ,ವಿದ್ಯಾರ್ಥಿಗಳು ಪಾಲಿಸಬೇಕಾದ ನೀತಿ. ನಿಯಮಗಳ ಬಗ್ಗೆ ಸವಿವರವಾಗಿ ವಿವರಿಸಿದರು.


ಕಾರ್ಯಕ್ರಮದಲ್ಲಿ ತರಬೇತಿ ತರಗತಿಗಳ ಸಹ ಸಂಯೋಜಕರಾದ ಡಾ.ರಾಜೇಶ್ವರಿ ಕೆ ಆರ್‌, ಅನಿತಾ ಕೆ ಪಿ, ಸುರೇಂದ್ರ ಕುಮಾರ್‌ ಮತ್ತು ಜೀವಶಾಸ್ತ್ರ ಉಪನ್ಯಾಸಕಿ ಕವನಶ್ರೀ ಜಿ ಬಿ ಉಪಸ್ಥಿತರಿದ್ದರು.

ಜೀವಶಾಸ್ತ್ರ ಉಪನ್ಯಾಸಕಿ ಡಾ. ರಾಜೇಶ್ವರಿ ಕೆ. ಅರ್‌ .ವಂದಿಸಿದರು. ಭೌತಶಾಸ್ತ್ರ ಉಪನ್ಯಾಸಕ ಲಕ್ಷ್ಮೀಶ್‌ ಭಟ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಜು.13: ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನಲ್ಲಿ ಆಷಾಡ (ಆಟಿ) ಸೇಲ್: 10% ಫ್ಲ್ಯಾಟ್, 50-50 ಪ್ರತಿ ಖರೀದಿಯ ಮೇಲೆ ಡಿಸ್ಕೌಂಟ್

Suddi Udaya

ಆಟೋ ಚಾಲಕನಿಗೆ ಅಪರಿಚಿತ ತಂಡದಿಂದ ಹಲ್ಲೆ: ಠಾಣೆಗೆ ದೂರು

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ “ಜನ ವಿರೋಧಿ ನೀತಿ”ಗಳನ್ನು ಖಂಡಿಸಿ ನಾವೂರು ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಶಿಥಿಲಗೊಂಡ ಗುರಿಪಳ್ಳ ತಾರಗಂಡಿ ಸೇತುವೆ: ಲೋಕೋಪಯೋಗಿ ಸಚಿವರನ್ನು ಬೇಟಿಯಾಗಿ ಶೀಘ್ರ ಅನುದಾನ ಬಿಡುಗಡೆ ಮಾಡಿ ಹೊಸ ಸೇತುವೆ ನಿರ್ಮಿಸುವಂತೆ ರಕ್ಷಿತ್ ಶಿವರಾಂ ಮನವಿ

Suddi Udaya

ಹಳೆಕೋಟೆ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳ ಅವಿರೋಧ ಆಯ್ಕೆ

Suddi Udaya

ಬೆಳ್ತಂಗಡಿ: ವಿಶ್ವಕರ್ಮಾಭ್ಯುದಯ ಸಭಾ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!