September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗುರುಚೇತನ ಪುನಃಶ್ಚೇತನ-ಬೆಳ್ತಂಗಡಿ ಧರ್ಮಪ್ರಾಂತ್ಯದ ಶಾಲಾ ಅಧ್ಯಾಪಕ ಶಿಬಿರ

ಬೆಳ್ತಂಗಡಿ ಧರ್ಮಪ್ರಾಂತ್ಯದ ಅಡಿಯಲ್ಲಿರುವ ಎಲ್ಲ ಶಾಲಾ ಅಧ್ಯಾಪಕರ ಪುನಃಶ್ಚೇತನ ಶಿಬಿರವು ಜೂ. 14ರಂದು ಧರ್ಮಪ್ರಾಂತ್ಯದ ಪಾಲನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.

ಶಿಬಿರದಲ್ಲಿ ಕರ್ನಾಟಕ ರಾಜ್ಯ ಅಧ್ಯಾಪಕ ಪ್ರಶಸ್ತಿ ವಿಜೇತ ರಾಜೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಮೆಂಬರ್ ಹಾಗೂ ಕರ್ನಾಟಕ ಕಥೊಲಿಕ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ವಂದನೀಯ ಫಾ. ಫ್ರಾನ್ಸಿಸ್ ಅಲ್ಮೇಡಾರವರು ಅಧ್ಯಾಪಕ ವೃತ್ತಿಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.


“ಕಾಲಕ್ಕನುಗುಣವಾಗಿ ಅಧ್ಯಾಪಕರು ಬದಲಾಗಬೇಕಾಗಿದೆ. ಮಕ್ಕಳ ಈ ಕಾಲದ ವರ್ತನೆಗಳನ್ನು ತಿಳಿದು ಅವರಿಗೆ ಬೇಕಾದ ರೀತಿಯಲ್ಲಿ ಶಿಕ್ಷಣ ನೀಡುವುದು ಅಗತ್ಯ. ಕೋವಿಡ್ 19 ನಂತರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ. ಅವುಗಳನ್ನು ಅರಿತು ಬಗೆಹರಿಸುವುದು ಅಗತ್ಯದ ಕಾರ್ಯವಾಗಿದೆ” ಎಂದು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ವಂದನೀಯ ಲಾರೆನ್ಸ್ ಮುಕ್ಕುಯಿಯವರು ಹೇಳಿದರು.


ಶಿಬಿರದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನೂರು ಶತಮಾನ ಫಲಿತಾಂಶವನ್ನು ಪಡೆದ ಬಂಗಾಡಿ, ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಾಪಕರನ್ನು, ಅದೇ ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿರುವ ಶ್ರೀಮತಿ ಸುಲೋಚನಾ ಇವರನ್ನು ಹಿಂದಿ ವಿಷಯದಲ್ಲಿ ಮಕ್ಕಳ ಅಸಾಧಾರಣ ಸಾಧನೆಯನ್ನು ಪರಿಗಣಿಸಿ ಗೌರವಿಸಲಾಯಿತು.


ಬೆಳ್ತಂಗಡಿ ಧರ್ಮಪ್ರಾಂತ್ಯದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ವಂದನೀಯ ಫಾ. ಶಾಜಿ ಮಾತಿಯೂ ಶಿಬಿರವನ್ನು ಸಮನ್ವಯಗೊಳಿಸಿದರು. ಶಿಬಿರದಲ್ಲಿ ಐವತ್ತಕ್ಕೂ ಹೆಚ್ಚು ಅಧ್ಯಾಪಕರು ಭಾಗವಹಿಸಿದರು.

Related posts

ಬೆಳ್ತಂಗಡಿಯಲ್ಲಿ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ನ 13ನೇ ಶಾಖೆ ಶುಭಾರಂಭ: ಆರ್ಥಿಕ ವರ್ಷದಲ್ಲಿ 350 ಕೋಟಿ ವಹಿವಾಟನ್ನು ತಲುಪುವ ಗುರಿ: ಅಮೋಘ ಜೆ.ರೈ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ 2 ರ ಫಲಿತಾಂಶ : ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ 596 ಅಂಕಗಳೊಂದಿಗೆ ರಾಜ್ಯಕ್ಕೆ 4 ನೇ ಸ್ಥಾನ, ತಾಲೂಕಿಗೆ ಪ್ರಥಮ

Suddi Udaya

ಪುಂಜಾಲಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

Suddi Udaya

ಅರಸಿನಮಕ್ಕಿ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಬಂಟರ ಸಂಘ ಕಾವಳಕಟ್ಟೆ ವಲಯ : ಸಾಧಕರಿಗೆ ಸನ್ಮಾನ ಮತ್ತು ಮಾಹಿತಿ ಕಾರ್ಯಕ್ರಮ

Suddi Udaya

ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಸೂಚನೆ: ಇ-ಕೆವೈಸಿ ಮಾಡಲು ಡಿ.31 ಕೊನೆಯ ದಿನ

Suddi Udaya
error: Content is protected !!