25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಜೆಸಿಐ ಬೆಳ್ತಂಗಡಿಯ ಮಹಾಸಂಗಮ ಕಾರ್ಯಕ್ರಮ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷರು ಹಾಗೂ ಹೊಸ ಜೇಸಿ ಹಳೆ ಜೇಸಿಗಳ ಮಹಾಸಂಗಮ ಕಾರ್ಯಕ್ರಮ ಇತ್ತೀಚೆಗೆ ಗುರುವಾಯನಕೆರೆಯ ಬಂಟರ ಭವನದಲ್ಲಿ ಜರಗಿತು. ಹಳೇ ಬೇರು ಹೊಸ ಚಿಗುರು ಎಂಬ ಕಲ್ಪನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿಯನ್ನು ಮುನ್ನಡೆಸಿದ ಎಲ್ಲಾ ಪೂರ್ವಾಧ್ಯಕ್ಷರು ಹಾಗೂ ಪೂರ್ವ ಜೆಸಿರೇಟ್ ಅಧ್ಯಕ್ಷರುಗಳನ್ನು ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಜೆಸಿಐ ಬೆಳ್ತಂಗಡಿಯ ಸ್ಥಾಪಕ ಅಧ್ಯಕ್ಷ ಜೇಸಿ ಪ್ರೊಫೆಸರ್ ಶ್ರೀರಾಮ ಕಾರಂತ ಗೌರವಾರ್ಪಣ ಕಾರ್ಯಕ್ರಮವನ್ನು ನಡೆಸಿ ಸಭೆಯನ್ನುದ್ದೇಶಿಸಿ ಜೆಸಿಐ ಬೆಳ್ತಂಗಡಿಯ ಸ್ಥಾಪನೆಯ ಕುರಿತಂತೆ ಮಾತನಾಡಿ ಎಲ್ಲಾ ಜೇಸಿಗಳಿಗೆ ಶುಭ ಹಾರೈಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಡಿ ಭಾರತೀಯ ಭೂಸೇನೆಯ ನಿವೃತ್ತ ಸೈನಿಕ ಬೆಳ್ತಂಗಡಿ ತಾಲೂಕು ನ್ಯಾಯತರ್ಪು ಗ್ರಾಮದ ಶ್ರೀ ವಿಕ್ರಂ ಜೆಎನ್ ವಂಜಾರೆ ಇವರನ್ನು ಹಾಗೂ ಕುತ್ಲೂರಿನ ಮಹಿಳಾ ಆಟೋ ಚಾಲಕಿ ಸಾಧಕಿ ಅರುಣಾ ಹೆಗ್ಡೆ ಕುತ್ಲೂರು ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.

ಮಹಾಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗಾರರಾಗಿ ಆಗಮಿಸಿದ ರಾಷ್ಟ್ರೀಯ ತರಬೇತುದಾರರು ಜೇಸಿ ಸೀತಾರಾಮ ಕೇವಳ ಇವರು ಹಳೆ ಬೇರು ಹೊಸ ಚಿಗುರು ಎಂಬ ವಿಷಯದಲ್ಲಿ ಸವಿಸ್ತಾರವಾಗಿ ಮಾತನಾಡಿ ಜೇಸಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಲ್ಲಿ ಮಾತ್ರವೇ ಸದಸ್ಯರ ವ್ಯಕ್ತಿತ್ವ ವಿಕಸನ ಸಾಧ್ಯ ನಮಗೆ ಅರಿವಿಲ್ಲದಂತೆಯೇ ನಮ್ಮ ವ್ಯಕ್ತಿತ್ವ ಮಾರ್ಪಾಡಾಗುವುದು ಹಾಗೂ ಸಮಾಜದಲ್ಲಿ ಒಬ್ಬ ಗುರುತಿಸಬಲ್ಲ ವ್ಯಕ್ತಿಯಾಗಿ ಬೆಳೆಯಬಲ್ಲನು ಹಾಗೂ ಯಾವ ಸಂಸ್ಥೆಯು ನೀಡದ ತರಬೇತಿಗಳು ನಮ್ಮ ಜೇಸಿಯಲ್ಲಿದೆ ಜೇಸಿಗಳ ಬೆಳವಣಿಗೆಯ ಹಲವು ಮಜಲುಗಳನ್ನು ತನ್ನ ಪ್ರಖರ ಮಾತುಗಳ ಮೂಲಕ ಸಭೆಯ ಮನಗೆದ್ದರೂ.


ಸಭೆಯ ವೇದಿಕೆಯಲ್ಲಿ ಜೆಸಿರೇಟ್ ವಿಭಾಗದ ಪೂರ್ವ ರಾಜ್ಯಾಧ್ಯಕ್ಷೇ ಜೆಸಿರೆಟ್ ಸುಮಿತ್ರಾ ಕಾರಂತ್ ವಲಯ 15ರ ಪ್ರಾಂತ್ಯ ‘ಇ’ಯಾ ವಲಯ ಉಪಾಧ್ಯಕ್ಷ ಜೇಸಿ ಸುಹಾಸ್ ಮರಿಕ್ಕೆ, ಪ್ರಾಂತ್ಯ ‘ಡಿ’ ಯ ವಲಯ ಉಪಾಧ್ಯಕ್ಷ ರಂಜಿತ್ ಎಚ್‌ಡಿ ಗೌರವ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮಹಾಸಂಗಮ ಕಾರ್ಯಕ್ರಮದ ಸಭಾಧ್ಯಕ್ಷ ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಈ ಕಾರ್ಯಕ್ರಮವು ತನ್ನ ಕನಸಿನ ಕಾರ್ಯಕ್ರಮವಾಗಿದ್ದು ಎಲ್ಲಾ ಪೂರ್ವ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಒಗ್ಗೂಡಿಸಬೇಕೆಂಬ ಸಣ್ಣ ಪ್ರಯತ್ನ ಇದು. ಹೆಚ್ಚಿನ ಎಲ್ಲಾ ಪೂರ್ವ ಅಧ್ಯಕ್ಷರು ಕುಟುಂಬ ಸಮೇತರಾಗಿ ಭಾಗವಹಿಸಿರುವುದು ಸಂತೋಷವಾಗಿದೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಕಾರ್ಯಕ್ರಮದ ನಿರ್ದೇಶಕ ಪ್ರಶಾಂತ ಲಾೖಲ ಪ್ರಾಸ್ತಾವಿಕವಾಗಿ ಮಾತನಾಡಿದರು ಜೇಸಿ ಹೇಮಾವತಿ ಕೆ ಇವರು ಗೌರವಾರ್ಪಣ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ನಾಲ್ಕು ಜನ ನೂತನ ಸದಸ್ಯರನ್ನು ಜೆಸಿಐ ಬೆಳ್ತಂಗಡಿಗೆ ಸೇರ್ಪಡೆಗೊಳಿಸಲಾಯಿತು, ನೂತನ ಜೇಸಿಗಳ ಪರಿಚಯವನ್ನು ಜೆಜೆಸಿ ದೀಪ್ತಿ ಕುಲಾಲ್ ವಾಚಿಸಿದರು ಸನ್ಮಾನಿತರ ಪರಿಚಯವನ್ನು ಜೇಸಿ ಸುಧೀರ್ ಕೆ ಎನ್ ಹಾಗೂ ದಿಕ್ಸೂಚಿ ಭಾಷಣಗಾರರ ಪರಿಚಯವನ್ನು ಜೇಸಿ ರಕ್ಷಿತ್ ಅಂಡಿಜೆ ಮಾಡಿದರು. ಕಾರ್ಯದರ್ಶಿ ಪ್ರಮೋದ್ ಕೆ ಇವರು ವಂದಿಸಿದರು. ಮಹಿಳಾ ಸಂಯೋಜಕಿ ಜೇಸಿ ಚಿತ್ರಪ್ರಭ ಹಾಗೂ ಎಲ್ಲಾ ಪೂರ್ವ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು

Related posts

ಕಡಿರುದ್ಯಾವರದಲ್ಲಿ ಅಡಿಕೆ ತೋಟಕ್ಕೆ ಕಾಡಾನೆ ದಾಳಿ : ಸೋಲಾರ್ ಬೇಲಿಗಳಿಗೆ ಹಾನಿ

Suddi Udaya

ಸೌಜನ್ಯಾ ಕೊಲೆ ಪ್ರಕರಣ: ವಿವರವಾದ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬೆಳಾಲು ಕಾರ್ಯಕ್ಷೇತ್ರದ ಸದಸ್ಯ ಬಾಬು ಗೌಡ ರವರಿಗೆ ಊರುಗೋಲು ವಿತರಣೆ

Suddi Udaya

ಎಸ್.ಡಿ.ಎಂ ಬಿಎನ್‌ವೈಎಸ್ ಕಾಲೇಜು : ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ

Suddi Udaya

ಭಜನೆಯಿಂದ ಸಾಮಾಜಿಕ ಸಾಮರಸ್ಯ: ಪ್ರೊ. ಶುಭಾ ಮರವಂತೆ

Suddi Udaya

ಮಾಜಿ ಶಾಸಕ ಕೆ.ವಸಂತ ಬಂಗೇರ ಅವರಿಗೆ ಅಂತಿಮ ನಮನ ಸಲ್ಲಿಸಿದ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಯು.ಸಿ ಪೌಲೋಸ್ ಹಾಗೂ ಕಲ್ಲಡ್ಕ ಪ್ರಭಾಕರ ಭಟ್

Suddi Udaya
error: Content is protected !!