September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನೀಟ್ ಫಲಿತಾಂಶ ಪ್ರಕಟ: ರಾಷ್ಟ್ರಮಟ್ಟದಲ್ಲಿ ಕ್ರಿಯೇಟಿವ್ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಕಾರ್ಕಳ: ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ 4 ರಂದು ನಡೆಸಿದ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ.


ವಿದ್ಯಾರ್ಥಿಗಳಾದ ಸುಮಂತ ಗೌಡ ಎಸ್. ಡಿ ೯೯.೯೨೩೬೮೬ ಪಸಂಟೈಲ್ ನೊಂದಿಗೆ ೫೯೬ ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ ೧೬೨೩ನೇ ರ್‍ಯಾಂಕ್, ಪ್ರಜ್ವಲ್ ಎಸ್. ಎನ್ ೯೯.೬೮೬೪೩೫ ಪಸಂಟೈಲ್‌ನೊಂದಿಗೆ ೫೮೮ ಅಂಕಗಳನ್ನು ಗಳಿಸಿ, ರಾಷ್ಟ್ರಮಟ್ಟದಲ್ಲಿ ೨೪೮೩ನೇ ರ್‍ಯಾಂಕ್, ರಾಜೇಶ್ ಹೆಚ್ ಎ ೯೯.೮೫೭೨೮೬ ಪಸಂಟೈಲ್ ನೊಂದಿಗೆ ೫೮೩ ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ ೩೦೨೫ನೇ ರ್‍ಯಾಂಕ್ ಪಡೆದು ಅಭೂತಪೂರ್ವ ಸಾಧನೆಗೈದಿದ್ದಾರೆ.

ಇತರ ವಿದ್ಯಾರ್ಥಿಗಳಾದ ಸಾತ್ವಿಕ್ ಭಂಡಾರಿ 560, ಹೇಮಂತ್ ಕುಮಾರ್ 551, ಪ್ರಾಪ್ತಿ ಶೆಟ್ಟಿ 541, ಪ್ರಥಮ್ ಪಟೇಲ್ ಹೆಚ್. ಡಿ 539, ಸಂಗೀತಾ ಬಿ. ಎಮ್ ೫೩೬, ಶ್ರೀನಿಧಿ ಡಿ 531, ವಿನಯ್ ಎಸ್ ೫೨೩, ಸ್ನೇಹಾ ಬಸವರಾಜ್ ಬಿ. 521, ಯುವರಾಜ್ ಪಟೇಲ್ 521, ಗಣೇಶ್ ಜಿ 519, ಶಕ್ತಿ ಎಸ್. ಗೌಡ 519, ಸೃಷ್ಟಿ ಪಾಟೀಲ್ ೫೧೫, ಶ್ರೀನಿಧಿ ಪಿ.ಯು 514, ನಿನಾದ್ ಹೆಚ್. ಎಮ್ 513, ಪ್ರಥಮ್ ಎಸ್. ಪಿ 512, ಧ್ರುವ ಪಿ 509, ಮೇಘನಾ ಯು. ವೈ ೫೦೯, ಅಭಿನಂಧನ್ 504ಅಂಕಗಳನ್ನು ಪಡೆದು ವಿಶಿಷ್ಠ ಸಾಧನೆಗೈದಿದ್ದಾರೆ.


500ರ ಮೇಲೆ 28 ಮತ್ತು 400 ರ ಮೇಲೆ 192 ವಿದ್ಯಾರ್ಥಿಗಳು ಅಂಕಗಳನ್ನು ಪಡೆದಿರುತ್ತಾರೆ. ಕಳೆದ ಬಾರಿಯ ನೀಟ್ ಪರೀಕ್ಷೆಯ ಮೂಲಕ ಕಾಲೇಜಿನ ವಿದ್ಯಾರ್ಥಿಗಳು JIPMER, AIIMS MANGALAGIRI ಮತ್ತು AIIMS  NAGPUR ನಂತಹ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಆಯ್ಕೆಯಾಗಿದ್ದನ್ನು ಸ್ಮರಿಸಬಹುದು.


ವಿದ್ಯಾರ್ಥಿಗಳ ಈ ಸಾಧನೆಯನ್ನು ಮೆಚ್ಚಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಲೋಹಿತ್ ಎಸ್.ಕೆ, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ವೃಂದದವರು ಶ್ಲಾಘಿಸಿದ್ದಾರೆ.

Related posts

ಧರ್ಮಸ್ಥಳ: ಮುಳಿಕ್ಕಾರುನಲ್ಲಿ ಕಾಡಾನೆಗಳ ದಾಳಿ: ಅಪಾರ ಕೃಷಿ ಹಾನಿ

Suddi Udaya

ಜ.6: ಮಿತ್ತಬಾಗಿಲು ಸ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya

ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟ: ಶೊರೀನ್ ರಿಯೂ ಉಜಿರೆ ಹಾಗೂ ಬೆಳ್ತಂಗಡಿ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಸುಲ್ಕೇರಿಮೊಗ್ರು: ಭಾರಿ ಮಳೆಗೆ ಮನೆಯ ಕಂಪೌಂಡ್ ಕುಸಿತ

Suddi Udaya

ಬೆಳ್ತಂಗಡಿ : ಜೈನ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಅಹ್ವಾನ

Suddi Udaya

ದ.ಕ. ಸಹಕಾರಿ ಹಾಲು ಒಕ್ಕೂಟದಿಂದ ನಂದಿನಿ ಪ್ರಿಮಿಯಮ್ ಪ್ರೊಬಯಾಟಿಕ್ ಮೊಸರು ಬಿಡುಗಡೆ

Suddi Udaya
error: Content is protected !!