ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸವಣಾಲು ಗ್ರಾಮದ ಪೇಲ ಶ್ರೀಧರ ಮಲೆಕುಡಿಯ ಎಂಬವರ ಮನೆ ಬಳಿ ವಿಪರೀತ ಮಳೆಯಿಂದಾಗಿ ಗುಡ್ಡ ಕುಸಿದು ಮನೆಗೆ ಹಾನಿ ಆಗುವ ಸಂಭವವಿದ್ದು ಈ ಬಗ್ಗೆ ವಾರದ ಹಿಂದೆಯೂ ಸ್ಥಳ ಪರಿಶೀಲನೆ ನಡೆಸಿ ಸದ್ರಿ ಅವರಿಗೆ ಎಚ್ಚರಿಕೆ ನೋಟಿಸು ನೀಡಲಾಗಿದ್ದು ಜೂ.16 ರಂದು ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ವಿಪರೀತ ಮಳೆ ಸಂದರ್ಭದಲ್ಲಿ ಮನೆಯಲ್ಲಿ ವಾಸಿಸದೆ ಸಂಬಂಧಿಕರ ಮನೆಗೆ ಅಥವಾ ಕಾಳಜಿ ಕೇಂದ್ರಕ್ಕೆ ವಾಸ ಬದಲಾಯಿಸುವಂತೆ ಮನವೊಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲೋಕನಾಥ ಶೆಟ್ಟಿ ಸದಸ್ಯ ಪ್ರಭಾಕರ್ ಆಚಾರ್ಯ, ಗ್ರಾಮ ಆಡಳಿತ ಅಧಿಕಾರಿ ಹಾಗೂ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಉಪಸ್ಥಿತರಿದ್ದರು.











