25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರದ ಚುನಾವಣೆ

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸರ್ಕಾರದ ಚುನಾವಣೆ ಜೂ.19 ರಂದು ನಡೆಯಿತು.

ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಚುನಾವಣಾ ಅಧಿಸೂಚನೆಯಿಂದ ಹಿಡಿದು ಪ್ರಮಾಣ ಪತ್ರ ನೀಡುವಲ್ಲಿ ತನಕ ಮತ್ತು ಮತಯಂತ್ರದ (ಇ.ವಿ.ಯಂ.) ಮೂಲಕ ಮತದಾನ ನಡೆಯಿತು.

ಮುಖ್ಯ ಶಿಕ್ಷಕ ಜಯರಾಮ ಮಯ್ಯ, ಚುನಾವಣಾಧಿಕಾರಿ ಶಿಕ್ಷಕ ಕಿರಣ್ ಹಾಗೂ ಇತರ ಶಿಕ್ಷಕ ವರ್ಗದ ಸಹಯೋಗದೊಂದಿಗೆ ಚುನಾವಣ ಪ್ರಕ್ರಿಯೆ ನಡೆಯಿತು.

ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಮೋಹನ್ ಕೃಷ್ಣ, ಉಪನಾಯಕಿಯಾಗಿ 9ನೇ ತರಗತಿಯ ನೇತ್ರಾವತಿ, ಕಾರ್ಯದರ್ಶಿಯಾಗಿ 10ನೇ ತರಗತಿಯ ಮನೀಷ್ ಚುನಾಯಿತರಾದರು.

ಆಯ್ಕೆಯಾದ ಅಭ್ಯರ್ಥಿಗಳನ್ನು ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.

ಇಡೀ ಚುನಾವಣಾ ಪ್ರಕ್ರಿಯೆಯ ಅರಿವನ್ನು ಪಡೆದ ವಿದ್ಯಾರ್ಥಿಗಳು ಉತ್ಸಾಹದಿಂದ ಮತ ಚಲಾಯಿಸಿದ್ದಕ್ಕಾಗಿ ಅವರಿಗೆ ಪೆನ್ನನ್ನು ಉಡುಗೊರೆಯಾಗಿ ನೀಡಲಾಯಿತು .

Related posts

ಬೊಳಿಯಾರು ಕಾಡಾನೆ ದಾಳಿಗೆ ರಿಕ್ಷಾ ನಜ್ಜುಗುಜ್ಜು: ಅದೃಷ್ಟಾವಶತ್ ಪಾರಾದ ಚಾಲಕ

Suddi Udaya

ಬೈಲಂಗಡಿ :ಶ್ರೀ ಸೋಮನಾಥೇಶ್ವರ ದೇವಸ್ಥಾನ ತೋಟತ್ತಾಡಿ ಬ್ರಹ್ಮ ಕಲಶೋತ್ಸವ ಕಾರ್ಯಾಲಯ ಉದ್ಘಾಟನೆ

Suddi Udaya

ಉಜಿರೆ ಶಾಂತಿವನದಲ್ಲಿ “ಅತಿಸ್ಥೂಲ ನಿರ್ವಹಣೆಗೆ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಕಾರ್ಯಾಗಾರ ಸಂಪನ್ನ

Suddi Udaya

ಉಜಿರೆ: ಪದ್ಮಶ್ರೀ ಎಂಟರ್‌ಪ್ರೈಸಸ್‌ನ ದಿನಚರಿ ಪುಸ್ತಕ ಬಿಡುಗಡೆ

Suddi Udaya

ಮಹಾಶಿವರಾತ್ರಿಯ ಪ್ರಯಕ್ತ: ಫೆ.15,16 ರಂದು ಕೆ.ಎಸ್.ಆರ್ ಟಿ.ಸಿ ಬಸ್ ಸಂಚಾರದಲ್ಲಿ ವ್ಯತ್ಯಯ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಸಾಗಿದ ಭಕ್ತರು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ ಮೆರಗು ನೀಡಿದ ವಾಯ್ಲಿನ್ ಆದ್ಯಾ ಕೇರಳ,ಚೆಂಡೆ ಹಾಗೂ ವಿವಿಧ ವಿನೋದಾವಳಿಗಳು

Suddi Udaya
error: Content is protected !!