ವೇಣೂರು: ವೇಣೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳ್ತಂಗಡಿಯ ಹಳೆಕೋಟೆಯಲ್ಲಿ ವಾಸ್ತವ್ಯವಿರುವ ರವೀಂದ್ರ ಎಂ.ರವರು ಎ.ಎಸ್.ಐ.ಯಾಗಿ ಭಡ್ತಿಯಾಗಿ ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇವರು ಜಾಲ್ಸೂರು ಗ್ರಾಮದ ಎರ್ಮೆಕಾರ್ ದಿ| ಚಂದು ನಾಯರ್ ಮತ್ತು ದಿ| ಶ್ರೀಮತಿ ಕಾತ್ಯಾಯಿನಿ ದಂಪತಿಯ ಪುತ್ರ.
1996ನೇ ನವೆಂಬರ್‌ನಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಇವರು ಮಂಗಳೂರು ಟ್ರಾಫಿಕ್, ವೇಣೂರು, ಉಪ್ಪಿನಂಗಡಿ, ಧರ್ಮಸ್ಥಳ ಠಾಣೆಗಳಲ್ಲಿ ಒಟ್ಟು 29ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಎ.ಎಸ್.ಐ.ಯಾಗಿ ಭಡ್ತಿಗೊಂಡು ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಗೊಂಡಿರುತ್ತಾರೆ.











