September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಆಲ್ಬರ್ಟ್ ಸಲ್ಡಾನ್ಹ ಅವರು ಯೋಗ ಒಂದು ಸಿದ್ಧಿ. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲ, ಇದು ಸರ್ವವ್ಯಾಪಿಯಾಗಿದ್ದು ಎಲ್ಲಾ ಕಾಯಿಲೆಗೂ ರಾಮಬಾಣವಾಗಿದೆ ಎಂದು ಹೇಳಿದರು.

ಹಾಗೆಯೇ ಕಾರ್ಯಕ್ರಮದ ಅತಿಥಿಯಾದ ದ್ವಿತೀಯ ಬಿ.ಎಡ್. ನ ಪ್ರಶಿಕ್ಷಣಾರ್ಥಿ ದಾಕ್ಷಾಯಣಿಯವರು ಯೋಗದ ಅರ್ಥ ಹಾಗೂ ಮಹತ್ವವನ್ನು ತಿಳಿಸುತ್ತಾ ಯೋಗ ಮನಸ್ಸನ್ನು ಕೇಂದ್ರೀಕರಿಸಲು ಸಹಾಯಕವಾಗಿದೆ. ಆಮೆ ಮತ್ತು ಮೊಸಳೆಗಳ ಉಸಿರಾಟ ಕ್ರಿಯೆಯು ಪ್ರಾಣಾಯಾಮದಂತೆ ಇರುವುದರಿಂದ ಅವುಗಳು ದೀರ್ಘಾಯುಸ್ಸನ್ನು ಹೊಂದಿವೆ. ಯೋಗವು ಉತ್ತಮ ಜೀವನವನ್ನು ರೂಪಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿ ಸಂಘದ ಉಪನಾಯಕಿ ಸಾಯಿಧೃತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕ ವೃಂದದವರು ಹಾಗೂ ಪ್ರಥಮ ಮತ್ತು ದ್ವಿತೀಯ ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಾದ ಮಹಾಂತೇಶ್ ಸ್ವಾಗತಿಸಿ, ರಕ್ಷಿತ ವಂದಿಸಿ, ಸುಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಉಜಿರೆ ಎಸ್. ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಡಿ.ಶ್ರೇಯಸ್ ಕುಮಾರ್ ಭೇಟಿ

Suddi Udaya

ಯಾವುದೇ ನೋಟೀಸು ನೀಡದೆ, ಕಾರಣವಿಲ್ಲದೆ ಏಕಾಏಕಿ ಗೃಹರಕ್ಷಕದಳದ ಘಟಕಾಧಿಕಾರಿಯನ್ನು ಬದಲಾವಣೆ ಮಾಡಿರುವುದು ಯಾವ ನ್ಯಾಯ: ನಾನು ಯಾವುದೇ ತಪ್ಪನ್ನು ಮಾಡಿಲ್ಲ, ಜಿಲ್ಲೆಯ ಆದೇಶವನ್ನು ದುರುಪಯೋಗ ಮಾಡಿಲ್ಲ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನಗೆ ನ್ಯಾಯ ಕೊಡಿ : ಜಯಾನಂದ ಲಾಯಿಲ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ 4 ನೇ ವರ್ಷದ ವರಮಹಾಲಕ್ಷ್ಮೀ ವ್ರತ ಪೂಜೆ

Suddi Udaya

ಭೂಸೇನೆಯಲ್ಲಿ 22 ವರ್ಷ ಕರ್ತವ್ಯ ಸಲ್ಲಿಸಿದ್ದ ಸೋಮಂತಡ್ಕ ನಿವಾಸಿ ಫ್ರಾನ್ಸಿಸ್ ಜೆ. ನಿವೃತ್ತಿ‌

Suddi Udaya

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ವತಿಯಿಂದ ಉಚಿತ ದಂತ ಚಿಕಿತ್ಸೆ ಮತ್ತು ಡೆಂಟಲ್ ಪಿಲ್ಲಿಂಗ್ಸ್ ಹಾಗೂ ವೀಲ್ ಚೇರ್ ವಿತರಣಾ ಕಾರ್ಯಕ್ರಮ

Suddi Udaya

ನಾರಾವಿ-ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಸಚಿವ ಗುಂಡೂರಾವ್ ಚಾಲನೆ

Suddi Udaya
error: Content is protected !!