September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಪೋಷಕರ ಸಭೆ

ಪುದುವೆಟ್ಟು : ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಪೋಷಕರ ಸಭೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಯ ಶಿಕ್ಷಣ ಸಂಯೋಜಕ ಶಶಿ ಶೇಖರ್ ಎನ್ ಕಾಕತ್ಕರ್ ಮಾತನಾಡಿ ಸಂಘಟಿತ ಪ್ರಯತ್ನದಿಂದ ಏನನ್ನು ಕೂಡ ಸಾಧಿಸಬಹುದು,ಪೋಷಕರು ಮತ್ತು ಶಿಕ್ಷಕರ ನಿರಂತರ ಸಂಪರ್ಕದಲ್ಲಿ ಶಾಲೆ ಪ್ರಗತಿ ಹೊಂದಲು ಸಾಧ್ಯ ಎಂದು ತಿಳಿಸಿದರು. ಎಸ್. ಡಿ.ಎಂ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್ ಮಾತನಾಡಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯು ಶಿಕ್ಷಣಕ್ಕೆ ಕೊಡುತ್ತಿರುವ ಆದ್ಯತೆಯನ್ನು ಪೋಷಕರಿಗೆ ತಿಳಿಸಿ, ಶಾಲೆಗಳಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಶಿಕ್ಷಣ ಸಂಸ್ಥೆ ನೀಡುತ್ತಾ ಬರುತ್ತಿದೆ ಎಂದು ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪಗೌಡ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಟಿಕ್ಕಾಸಾಹೇಬ್ ಹಾಗೂ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ತೇಜಾವತಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ರಕ್ಷಕ ಸಂಘಕ್ಕೆ ನೂತನ ಅಧ್ಯಕ್ಷರನ್ನು ಮತ್ತು ಸದಸ್ಯರನ್ನುಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಶಶಿಧರ್ ಗುಂಪಕಲ್ ರವರನ್ನು ಆಯ್ಕೆಮಾಡಲಾಯಿತು. ಶಾಲಾ ಶಿಕ್ಷಕ ಪವನ್ ಕುಮಾರ್ ಸ್ವಾಗತಿಸಿ, ಶ್ರೀಮತಿ ಪುಷ್ಪಲತಾ ಧನ್ಯವಾದವಿತ್ತರು. ನಿಶಾಂತ್ ನಿರೂಪಿಸಿದರು. ಶಾಲೆಯ ಎಲ್ಲ ಶಿಕ್ಷಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ಸವಣಾಲು ಬೈರವಕಲ್ಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಕೊಲ್ಲಿ ಶ್ರೀ ದುರ್ಗಾಪಮೇಶ್ವರಿ ದೇವಸ್ಥಾನಕ್ಕೆ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್ ಭೇಟಿ, ಕೆಲಸಕಾರ್ಯಗಳ ವೀಕ್ಷಣೆ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ದಿ| ನಂದಕುಮಾರ್ ಉಜಿರೆ ರವರಿಗೆ ಶ್ರದ್ಧಾಂಜಲಿ

Suddi Udaya

ಬಳಂಜ–ನಾಲ್ಕೂರಿನ ಯುವಕರಿಂದ ಅಮರನಾಥ ಯಾತ್ರೆ ಪವಿತ್ರ ಹಿಮಲಿಂಗ ದರ್ಶನದೊಂದಿಗೆ ವೈಷ್ಣೋದೇವಿ, ಶಿವಖೋರಿ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿ

Suddi Udaya

ಗಾಯಕಿ ನಂದಶ್ರೀ ಸಂಗೀತ ಪರೀಕ್ಷೆಯಲ್ಲಿ ಅದ್ಭುತ ಸಾಧನೆ

Suddi Udaya

ಹೊಸಂಗಡಿ: ಗಣೇಶ್ ಪೂಜಾರಿ ಕಾರಾಜೆ ಮಾಲೀಕತ್ವದ ಶ್ರೀ ದುರ್ಗಾ ಅಲ್ಯುಮಿನಿಯಂ ಫ್ಯಾಬ್ರಿಕೇಷನ್ ಶುಭಾರಂಭ

Suddi Udaya
error: Content is protected !!